ಆ್ಯಪ್ನಗರ

Internet Users: ಮೂರು ವರ್ಷಕ್ಕೆ ಆನ್‌ಲೈನ್‌ನಲ್ಲಿ ಶೇ. 64 ಭಾರತೀಯರು

ಸ್ಮಾರ್ಟ್‌ಫೋನ್ ಮಾರುಕಟ್ಟೆಯ ಕ್ರಾಂತಿ ಮತ್ತು ರಿಲಯನ್ಸ್ ಜಿಯೋ ಪ್ರವೇಶದ ಬಳಿಕ ಟೆಲಿಕಾಂ ಕಂಪನಿಗಳ ನಡುವಣ ಸ್ಪರ್ಧೆಯಿಂದಾಗಿ ಗ್ರಾಹಕರಿಗೆ ಅನುಕೂಲವಾಗಿದೆ. ಕಡಿಮೆ ದರಕ್ಕೆ ಇಂಟರ್‌ನೆಟ್ ಮತ್ತು ಹೆಚ್ಚು ವ್ಯಾಪ್ತಿಯ ಕವರೇಜ್‌ನಿಂದಾಗಿ ಇಂಟರ್‌ನೆಟ್ ಬಳಕೆ ಹೆಚ್ಚಾಗುತ್ತಿದೆ.

THE ECONOMIC TIMES 24 Feb 2020, 4:23 pm
ಇಂಟರ್‌ನೆಟ್‌ ಬಳಕೆ ಪ್ರಮಾಣವು ಭಾರತೀಯರಲ್ಲಿ ಹೆಚ್ಚುತ್ತಿದೆ. 64% ಅಂದರೆ 90.7 ಕೋಟಿ ಭಾರತೀಯರು 2023ರ ಹೊತ್ತಿಗೆ ಆನ್‌ಲೈನ್‌ ಬಳಸಲಿದ್ದಾರೆ ಎಂದು ಸಿಸ್ಕೊದ ವಾರ್ಷಿಕ ಇಂಟರ್ನೆಟ್‌ ವರದಿಯಲ್ಲಿ ಹೇಳಲಾಗಿದೆ.
Vijaya Karnataka Web Internet
Internet Usage


ದೇಶದ ಜನಸಂಖ್ಯೆಗಿಂತಲೂ (1% ಸಂಯುಕ್ತ ವಾರ್ಷಿಕ ಬೆಳವಣಿಗೆ ದರ-ಸಿಎಜಿಆರ್‌) ಡಿವೈಸ್‌ಗಳು ಮತ್ತು ನೆಟ್‌ ಸಂಪರ್ಕಗಳ ಬೆಳವಣಿಗೆ(7% ಸಿಎಜಿಆರ್‌) ಹೆಚ್ಚಾಗಿದೆ. 201 ಕೋಟಿ ನೆಟ್‌ವರ್ಕ್ ಡಿವೈಸ್‌ಗಳು 2023ಕ್ಕೆ ಇರಲಿವೆ. ಎಂ2ಎಂ(ಮೆಷಿನ್‌ ಟು ಮೆಷಿನ್‌) ಘಟಕಗಳ ಸಂಖ್ಯೆ ಶೇ.25ರಷ್ಟಿರಲಿದೆ. ಬ್ಯಾಂಡ್‌ವಿಡ್ತ್ ಮತ್ತು ವಿಡಿಯೋಗೆ ಬೇಡಿಕೆ ಹೆಚ್ಚಳವಾಗಿದೆ.

ಸುಲಭ ದರದಲ್ಲಿ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್ ಲಭ್ಯತೆ ಹಾಗೂ ಅಗ್ಗದ ದರದ ಡೇಟಾ ಪ್ಯಾಕ್, ಇಂಟರ್‌ನೆಟ್ ಸೇವೆಗಳು ಜನರನ್ನು ಆಕರ್ಷಿಸುತ್ತಿವೆ. ಅಲ್ಲದೆ ಗ್ರಾಮೀಣ ಪ್ರದೇಶಗಳಲ್ಲೂ ಸಂಪರ್ಕ ಕ್ರಾಂತಿ, ಬಜೆಟ್ ಸ್ಮಾರ್ಟ್‌ಫೋನ್‌ನಲ್ಲಿ ಕಡಿಮೆ ದರಕ್ಕೆ 4G ಡೇಟಾ ಲಭ್ಯತೆ ಇದನ್ನು ಸಾಧ್ಯವಾಗಿಸಿದೆ. ಹೀಗಾಗಿ ವಾರ್ಷಿಕ ಇಂಟರ್‌ನೆಟ್ ಬಳಕೆ ಹೆಚ್ಚಾಗುತ್ತಿದೆ ಎಂದು ವರದಿ ತಿಳಿಸಿದೆ.

ಅಲ್ಲದೆ ಬಹುತೇಕ ಆ್ಯಪ್‌ ಮತ್ತು ಇಂಟರ್‌ನೆಟ್ ಆಧಾರಿತ ಸೇವೆಗಳು, ಸ್ಟಾರ್ಟಪ್ ದೇಶದಲ್ಲಿ ಹೆಚ್ಚಾಗುತ್ತಿದೆ. ಹೀಗಾಗಿ ದೇಶದಲ್ಲಿ ಇಂಟರ್‌ನೆಟ್ ಬಳಕೆ ಅಗತ್ಯವಾಗಿದ್ದು, ಬೇಡಿಕೆ ಅಧಿಕವಾಗುತ್ತಿದೆ ಎಂದು ಸಿಸ್ಕೋ ತಿಳಿಸಿದೆ.

Wattpad: ಹೊಸ ಓದಿನ ಸಖ; ಕಥೆಗಳ ಕಣಜ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌