ಆ್ಯಪ್ನಗರ

Offline Chat: ಬೇಡಿಕೆ ಪಡೆದುಕೊಂಡ ಆ್ಯಪ್‌

ಇಂಟರ್‌ನೆಟ್ ಸ್ಥಗಿತವಾದರೆ ಬದಲಿ ವ್ಯವಸ್ಥೆ ಕುರಿತು ಜನರು ಚಿಂತಿಸುತ್ತಿದ್ದಾರೆ. ನೆಟ್ ಇಲ್ಲದೆ ವಿವಿಧ ಚಾಟ್ ಆ್ಯಪ್‌ಗಳ ಬಳಕೆಯಿಂದ ವಂಚಿತರಾಗುವ ಜನರು ಇಂಟರ್‌ನೆಟ್ ಇಲ್ಲದೆ ಕಾರ್ಯನಿರ್ವಹಿಸುವ ಆ್ಯಪ್‌ ಡೌನ್‌ಲೋಡ್ ಮಾಡಿಕೊಳ್ಳುತ್ತಿದ್ದಾರೆ.

THE ECONOMIC TIMES 23 Dec 2019, 11:02 am
ಪೌರತ್ವ ತಿದ್ದುಪಡಿ ಕಾಯ್ದೆ ಹಿನ್ನೆಲೆಯಲ್ಲಿ ದೇಶದಲ್ಲಿ ಪ್ರತಿಭಟನೆಗಳು ತೀವ್ರಗೊಂಡಿದ್ದು, ಕೆಲವು ಭಾಗಗಳಲ್ಲಿ ಮೊಬೈಲ್‌ ಇಂಟರ್‌ನೆಟ್‌ ಕಡಿತಕ್ಕೆ ಸರಕಾರ ಮುಂದಾಗಿದೆ. ಪ್ರತಿಭಟನಾಕಾರರು ಸಂವಹನಕ್ಕೆ ಹೊಸ ಮಾರ್ಗಗಳನ್ನು ಕಂಡುಗೊಂಡಿದ್ದು, ಕಳೆದ ಎರಡು ಮೂರು ವಾರಗಳಲ್ಲಿಆಫ್‌ಲೈನ್‌ ಚಾಟ್‌ ಆ್ಯಪ್‌ಗಳಿಗೆ ಬೇಡಿಕೆ ಹೆಚ್ಚಿದೆ.
Vijaya Karnataka Web Offline APP
Offline Apps


ಇಂಟರ್‌ನೆಟ್‌ ಶಟ್‌ಡೌನ್‌ನಿಂದಾಗಿ ಬ್ರಿಡ್ಜ್‌ಫೈ, ಫೈರ್‌-ಚಾಟ್‌ನಂಥ ಆಫ್‌ಲೈನ್‌ ಮೆಸೇಜಿಂಗ್‌ ಆ್ಯಪ್‌ಗಳ ಡೌನ್‌ಲೋಡ್‌ ಮತ್ತು ಬಳಕೆ ಭಾರತದಲ್ಲಿ ಗಣನೀಯವಾಗಿ ಹೆಚ್ಚಿದೆ. ಜಾಗತಿಕ ಮಟ್ಟದಲ್ಲಿ ಬ್ರಿಡ್ಜ್‌ಫೈ ಆ್ಯಪ್‌ ಡೌನ್‌ಲೋಡ್‌ಗೆ ಸಂಬಂಧಿಸಿದಂತೆ ಕಳೆದ 30 ದಿನಗಳಲ್ಲಿ ಭಾರತದ ಪಾಲು ಶೇ. 24ರಷ್ಟಿದೆ. ಫೈರ್‌ಚಾಟ್‌ನ ಡೌನ್‌ಲೋಡ್‌ಗಳಲ್ಲಿ ಭಾರತದ ಪಾಲು ಶೇ. 17.7ರಷ್ಟಿದೆ.

ದಿಲ್ಲಿಯಲ್ಲಿಆಫ್‌ಲೈನ್‌ ಆ್ಯಪ್‌ಗಳ ಬಳಕೆ 30 ಪಟ್ಟು ಏರಿಕೆಯಾಗಿದೆ. ಬ್ರಿಡ್ಜ್‌ಫಥ ಮತ್ತು ಫೈರ್‌-ಚಾಟ್‌ ಆ್ಯಪ್‌ಗಳು ಭಾರತದಲ್ಲಿ ದಿಢೀರ್‌ ಜನಪ್ರಿಯತೆ ಗಳಿಸಿವೆ. ಕಳೆದ 30 ದಿನಗಳಲ್ಲಿ ಈ ಎರಡು ಆ್ಯಪ್‌ಗಳ ಡೌನ್‌ಲೋಡ್‌ಗೆ ಸಂಬಂಧಿಸಿದಂತೆ ವಿಶ್ವದಲ್ಲಿಯೇ ಭಾರತವು ಎರಡನೇ ದೊಡ್ಡ ಮಾರುಕಟ್ಟೆಯಾಗಿ ರೂಪುಗೊಂಡಿದೆ.

ಅಸ್ಸಾಂ ಮತ್ತು ಮೇಘಾಲಯಗಳಲ್ಲಿ ಡಿ. 12ರಂದು ಇಂಟರ್‌ನೆಟ್‌ ಸ್ಥಗಿತವಾದ ಸಂದರ್ಭದಲ್ಲಿಅಮೆರಿಕ ಮೂಲದ ಬ್ರಿಡ್ಜ್‌ಫೈ ಡೌನ್‌ಲೋಡ್‌ ಮತ್ತು ಬಳಕೆಯು ಸರಾಸರಿ 80 ಪಟ್ಟು ಏರಿಕೆಯಾಗಿದೆ. ಆಫ್‌ಲೈನ್‌ ಚಾಟ್‌ ಆ್ಯಪ್‌ಗಳು ಮೆಶ್‌ ನೆಟ್‌ವರ್ಕ್ ಅನ್ನು ಬಳಸಿ ಕಾರ್ಯ ನಿರ್ವಹಿಸುತ್ತವೆ.

Apple iPhone: ಫೋಟೋ ಅಡಗಿಸಲು ಇಲ್ಲಿದೆ ಉಪಾಯ

ಟೆಲಿಕಾಂ ಕಂಪನಿಗೆ ದಿನಕ್ಕೆ ಒಂದೂವರೆ ಕೋಟಿ ರೂ. ನಷ್ಟ
ಮೊಬೈಲ್‌ ಇಂಟರ್‌ನೆಟ್‌ ಅನ್ನು ಸ್ಥಗಿತಗೊಳಿಸುವುದರಿಂದ ಪ್ರತಿ ರಾಜ್ಯದಲ್ಲೂ ಟೆಲಿಕಾಂ ಕಂಪನಿಗೆ ದಿನಕ್ಕೆ 1.5 ಕೋಟಿ ರೂ. ನಷ್ಟವಾಗುತ್ತದೆ. ದೊಡ್ಡ ರಾಜ್ಯಗಳಾದರೆ ನಷ್ಟದ ಪ್ರಮಾಣ ಹೆಚ್ಚುತ್ತದೆ ಎಂದು ಟೆಲಿಕಾಂ ಸಂಘಟನೆಯಾದ ಸಿಒಎಐ ಹೇಳಿದೆ. ಇಂಟರ್‌ನೆಟ್‌ ಸ್ಥಗಿತದ ಹಿನ್ನೆಲೆಯಲ್ಲಿ ಗ್ರಾಹಕರು ತಮ್ಮ ಪ್ಲಾನ್‌ಗಳನ್ನು ರೀಚಾರ್ಜ್ ಮಾಡಿಕೊಳ್ಳಲು ವಿಳಂಬ ಮಾಡುತ್ತಾರೆ ಎಂದೂ ಹೇಳಲಾಗಿದೆ.

Dangerous Passwords: ಇವುಗಳನ್ನು ಯಾವುದೇ ಕಾರಣಕ್ಕೂ ಬಳಸಬೇಡಿ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌