ಆ್ಯಪ್ನಗರ

ಒನ್‌ಪ್ಲಸ್‌ಗೆ ಭಾರತದಲ್ಲಿ ಸೂಪರ್‌ಬ್ರ್ಯಾಂಡ್ ಮಾನ್ಯತೆ

ಚೀನಾ ಮೂಲದ ಮತ್ತು ಜಗತ್ತಿನಲ್ಲಿ ಜನಪ್ರಿಯತೆ ಗಳಿಸಿರುವ ಆಂಡ್ರಾಯ್ಡ್ ಫೋನ್ ತಯಾರಿಕಾ ಕಂಪನಿ ಒನ್‌ಪ್ಲಸ್ ಈಗ ಭಾರತದ ಸೂಪರ್ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ.

Vijaya Karnataka Web 3 Jul 2019, 4:42 pm
ಬೆಂಗಳೂರು: ವಿಶ್ವದ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ತಯಾರಿಕಾ ಸಂಸ್ಥೆಯಾಗಿರುವ ಒನ್‌ಪ್ಲಸ್ 2019 ರ ಭಾರತದ ಸೂಪರ್‌ಬ್ರ್ಯಾಂಡ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ವಿಶ್ವದ ಬ್ರ್ಯಾಂಡಿಂಗ್ ಮತ್ತು ಬ್ರ್ಯಾಂಡ್‌ಗಳನ್ನು ಆಯ್ಕೆ ಮಾಡುವ ಸ್ವತಂತ್ರ ಸಂಸ್ಥೆಯಾಗಿರುವ ಸೂಪರ್‌ಬ್ರ್ಯಾಂಡ್ ನಡೆಸಿದ ಸಮೀಕ್ಷೆಯ ಪ್ರಕಾರ ಒನ್‌ಪ್ಲಸ್ ಭಾರತದ ನಂಬರ್ ಒನ್ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ.
Vijaya Karnataka Web OnePlus 7


ಈ ಕುರಿತು ಮಾಹಿತಿ ನೀಡಿದ ಒನ್‌ಪ್ಲಸ್ ಇಂಡಿಯಾದ ಪ್ರಧಾನ ವ್ಯವಸ್ಥಾಪಕ ವಿಕಾಸ್ ಅಗರ್‌ವಾಲ್, ''2019ನೇ ಸಾಲಿನ ಸೂಪರ್‌ಬ್ರ್ಯಾಂಡ್ ಆಗಿ ಒನ್‌ಪ್ಲಸ್ ಆಯ್ಕೆಯಾಗಿರುವ ಬಗ್ಗೆ ಅತೀವ ಸಂತಸವಾಗಿದೆ. ಇದು ನಮ್ಮ ಉತ್ಪನ್ನಗಳ ಮೇಲೆ ಗ್ರಾಹಕರು ಇಟ್ಟಿರುವ ನಂಬಿಕೆಯ ಪ್ರತೀಕ. ಈ ಪ್ರತಿಷ್ಠಿತ ಸಾಧನೆಗೆ ನೆರವಾಗಿರುವ ನಮ್ಮೆಲ್ಲಾ ಸಮುದಾಯಕ್ಕೆ ಆಭಾರಿಯಾಗಿದ್ದೇವೆ" ಎಂದಿದ್ದಾರೆ.

ಒನ್‌ಪ್ಲಸ್ ಒನ್ ಅನ್ನು ಬಿಡುಗಡೆ ಮಾಡಿದ ದಿನದಿಂದ ಒನ್‌ಪ್ಲಸ್ ಗ್ರಾಹಕರಿಗೆ ತಮ್ಮ ಡಿವೈಸ್‌ನಲ್ಲಿ ಅತ್ಯುತ್ತಮವಾದ ಅನುಭವವನ್ನು ನೀಡಲು ಬದ್ಧತೆಯನ್ನು ತೋರಿಸುತ್ತಾ ಬಂದಿದೆ. ಬಿಡುಗಡೆ ಮಾಡಿದ ಮೂರು ವರ್ಷದ ನಂತರವೂ ಗ್ರಾಹಕರು ತಮ್ಮ ಒನ್‌ಪ್ಲಸ್ ಡಿವೈಸ್‌ಗಳಲ್ಲಿ ಸಾಫ್ಟ್‌ವೇರ್ ಮತ್ತು ಸೆಕ್ಯೂರಿಟಿ ಅಪ್‌ಡೇಟ್‌ಗಳನ್ನು ಪಡೆಯಬಹುದಾಗಿದೆ. ಈ ಮೂಲಕ ಗ್ರಾಹಕರು ಹೊಸ ಒನ್‌ಪ್ಲಸ್ ಡಿವೈಸ್‌ಗಳ ಅನುಭವವನ್ನು ಪಡೆಯಲಿದ್ದಾರೆ. ಒನ್‌ಪ್ಲಸ್ ಆಕ್ಸಿಜನ್‌ ಒಎಸ್ ಅಪಾರ ಜನಮೆಚ್ಚುಗೆಯನ್ನು ಗಳಿಸಿದೆ. ಇತ್ತೀಚಿನ ಆಕ್ಸಿಜನ್‌ಒಎಸ್ ಸ್ಮಾರ್ಟ್‌ಫೋನ್ ಸ್ಕ್ರೀನ್ ರೆಕಾರ್ಡರ್, ಝೆನ್ ಮೋಡ್ ಸೇರಿದಂತೆ ಹಲವಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಒನ್‌ಪ್ಲಸ್ 2019 ರ ಮೇ 14ರಂದು ಬಿಡುಗಡೆ ಮಾಡಿರುವ ಇತ್ತೀಚಿನ ಡಿವೈಸ್‌ಗಳಾದ ಒನ್‌ಪ್ಲಸ್ 7 ಪ್ರೊ ಮತ್ತು ಒನ್‌ಪ್ಲಸ್ 7 ಗಳ ಬೆಲೆ 32,999 ರೂ.ನಿಂದ ಆರಂಭವಾಗುತ್ತದೆ. ಒನ್‌ಪ್ಲಸ್ 7 ಅತ್ಯುತ್ತಮ ಮತ್ತು ಅತ್ಯುತ್ಕೃಷ್ಟ ತಂತ್ರಜ್ಞಾನಗಳನ್ನು ಹೊಂದಿದೆ.

ಈ ಡಿವೈಸ್ ವೇಗದ ಸ್ಕ್ರೀನ್ ಅನ್‌ಲಾಕ್ ಮತ್ತು ಎನ್‌ಲಾರ್ಜ್‌ಡ್ ಡಾಲ್ಬಿ ಡ್ಯುಯೆಲ್ ಸ್ಟೀರಿಯೋ ಸ್ಪೀಕರ್‌ಗಳನ್ನು ಒಳಗೊಂಡಿದೆ. 48,999 ರೂ.ನಿಂದ ಆರಂಭವಾಗಲಿರುವ ಒನ್‌ಪ್ಲಸ್ 7 ಪ್ರೊ ಅತ್ಯಾಧುನಿಕ ಸ್ಮಾರ್ಟ್‌ಫೋನ್, ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಸಮ್ಮಿಳಿತದೊಂದಿಗೆ ಬಳಕೆದಾರರಿಗೆ ಪ್ರೀಮಿಯಂ ಅನುಭವವನ್ನು ನೀಡಲಿದೆ.

ಒನ್‌ಪ್ಲಸ್ 7 ಪ್ರೊ ಮತ್ತು ಒನ್‌ಪ್ಲಸ್ 7 ಅಮೆಜಾನ್.ಇನ್, ಒನ್‌ಪ್ಲಸ್.ಇನ್, ಒನ್‌ಪ್ಲಸ್ ಎಕ್ಸ್‌ಕ್ಲೂಸಿವ್ ಆಫ್‌ಲೈನ್ ಸ್ಟೋರ್‌ಗಳು ಮತ್ತು ಸಂಗೀತಾ ಮೊಬೈಲ್ಸ್, ಪೂರ್ವಿಕಾ ಮೊಬೈಲ್ಸ್, ಬಿಗ್ ಸಿ ಮತ್ತು ವಿಜಯ್ ಸೇಲ್ಸ್ ಸೇರಿದಂತೆ ಪಾಲುದಾರ ರೀಟೇಲ್ ಔಟ್‌ಲೆಟ್‌ಗಳಲ್ಲಿ ಲಭ್ಯವಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌