ಆ್ಯಪ್ನಗರ

OnePlus TV: ಮತ್ತಷ್ಟು ಮಾಹಿತಿ ಬಹಿರಂಗ

ಸೆಪ್ಟೆಂಬರ್ ಈವೆಂಟ್‌ನಲ್ಲಿ ಒನ್‌ಪ್ಲಸ್ ಇದೇ ಮೊದಲ ಬಾರಿಗೆ ಆಂಡ್ರಾಯ್ಡ್ ಸ್ಮಾರ್ಟ್ ಟಿವಿ ಬಿಡುಗಡೆ ಮಾಡುತ್ತಿದೆ. ಹೊಸ ಟಿವಿಯ ವಿಶೇ‍ಷತೆ ಕುರಿತು ಸಿಇಒ ಒಂದೊಂದಾಗಿ ಟ್ವೀಟ್ ಮೂಲಕ ಪೋಸ್ಟ್ ಮಾಡುತ್ತಿದ್ದಾರೆ.

Times Now 18 Sep 2019, 11:28 am
ಒನ್‌ಪ್ಲಸ್ ಸ್ಮಾರ್ಟ್‌ಫೋನ್ ಸರಣಿಗಳ ಮೂಲಕ ವಿಶೇಷವಾಗಿ ದೇಶದಲ್ಲಿ ಹೆಸರು ಗಳಿಸಿರುವ ಒನ್‌ಪ್ಲಸ್, ಮೊದಲ ಬಾರಿಗೆ ಆಂಡ್ರಾಯ್ಡ್ ಸ್ಮಾರ್ಟ್‌ ಟಿವಿಯನ್ನು ದೇಶದ ಟಿವಿ ಮಾರುಕಟ್ಟೆಗೆ ಪರಿಚಯಿಸುತ್ತಿದೆ.
Vijaya Karnataka Web TV


ಸೆ. 26ರ ಈವೆಂಟ್‌ನಲ್ಲಿ ಒನ್‌ಪ್ಲಸ್ ನೂತನ ಒನ್‌ಪ್ಲಸ್ ಟಿವಿಯನ್ನು ಪರಿಚಯಿಸುತ್ತಿದ್ದು, ಬಳಿಕ ಅಮೆಜಾನ್ ಇಂಡಿಯಾ ಫೆಸ್ಟಿವಲ್ ಸೇಲ್ ಮೂಲಕ ದೊರೆಯಲಿದೆ.

ಜತೆಗೆ ಒನ್‌ಪ್ಲಸ್ ನೂತನ 7T ಸ್ಮಾರ್ಟ್‌ಫೋನ್ ಅನ್ನು ಕೂಡ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಿದೆ.
ಒನ್‌ಪ್ಲಸ್ ಟಿವಿಯ ರಿಮೋಟ್ ಕೂಡ ಆಕರ್ಷಕವಾಗಿದ್ದು, ಈಗಾಗಲೇ ಸಿಇಒ ಪೀಟೆ ಲಾ ರಿಮೋಟ್ ಚಿತ್ರವನ್ನು ಹಂಚಿಕೊಂಡಿದ್ದರು.

ಹೀಗಾಗಿ ಒನ್‌ಪ್ಲಸ್ ಟಿವಿ ಕುರಿತು ಮತ್ತಷ್ಟು ಜನರು ಕಾಯುವಂತೆ ಮಾಡಿದ್ದು, ಆಕರ್ಷಕ ವಿನ್ಯಾಸ, ಡಿಸ್‌ಪ್ಲೇ ಮತ್ತು ಆಡಿಯೋ ಕುರಿತು ಈಗಾಗಲೇ ಅಮೆಜಾನ್‌ನಲ್ಲೂ ವಿವರ ಕಾಣಿಸಿಕೊಂಡಿದೆ.

OnePlus TV: ಅಮೆಜಾನ್ ಸೇಲ್‌ನಲ್ಲಿ ಲಭ್ಯ

ಒನ್‌ಪ್ಲಸ್ ಟಿವಿ ಫಾಸ್ಟ್ ಟೈಪಿಂಗ್
ಒನ್‌ಪ್ಲಸ್ ಸಿಇಒ ಪೀಟೆ ಲಾ, ಟ್ವಿಟರ್‌ನಲ್ಲಿ ಒನ್‌ಪ್ಲಸ್ ಟಿವಿಯ ಆಕರ್ಷಕ ಫೀಚರ್ ಒಂದರ ಕುರಿತು ಸುಳಿವು ನೀಡಿದ್ದಾರೆ.
ಫಾಸ್ಟ್‌ ಟೈಪಿಂಗ್, ಈಸಿ ಸರ್ಚಿಂಗ್ ಮತ್ತು ಇತರ ವಿಶೇಷತೆಗಳ ಕುರಿತು ಮಾಹಿತಿ ನೀಡಿದ್ದಾರೆ.

55 ಇಂಚಿನ QLED ಡಿಸ್‌ಪ್ಲೇ, ಗೂಗಲ್ ಅಸಿಸ್ಟೆಂಟ್ ಬೆಂಬಲಿತ ರಿಮೋಟ್ ಕಂಟ್ರೋಲ್ ಹೊಸ ಒನ್‌ಪ್ಲಸ್ ಟಿವಿಯ ವಿಶೇ‍ಷತೆಯಾಗಿದೆ.

OnePlus TV Remote: ಒನ್‌ಪ್ಲಸ್ ಟಿವಿ ರಿಮೋಟ್ ಹೀಗಿದೆ ನೋಡಿ

Great Indian Festival sale: ಅಮೆಜಾನ್‌ನಲ್ಲಿ ಏನೆಲ್ಲ ಆಫರ್‌ಗಳಿವೆ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌