ಆ್ಯಪ್ನಗರ

ColorOS 7: ಬರಲಿದೆ ಒಪ್ಪೋ ಹೊಸ ಓಎಸ್‌

ದೇಶದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಹೆಚ್ಚಿನ ಫೀಚರ್‌ ಮೂಲಕ ಜನಪ್ರಿಯತೆ ಗಳಿಸಿದ್ದ ಒಪ್ಪೋ ಹೊಸ ಓಎಸ್ ಬಿಡುಗಡೆ ಮಾಡುತ್ತಿದೆ. ನೂತನ ಓಎಸ್ ನ. 26ಕ್ಕೆ ಲಭ್ಯವಾಗಲಿದೆ.

Times Now 13 Nov 2019, 11:16 am
ಚೀನಾ ಮೂಲದ ಒಪ್ಪೋ ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಬಳಕೆದಾರರನ್ನು ಹೊಂದಿದೆ. ಒಪ್ಪೋ ತನ್ನ ಕಸ್ಟಮ್ ಓಎಸ್ ಸರಣಿಯಲ್ಲಿ ಹೊಸ ಕಲರ್‌ಓಎಸ್ 7 ಅನ್ನು ನ. 26ರಂದು ಬಿಡುಗಡೆ ಮಾಡುತ್ತಿದೆ.
Vijaya Karnataka Web Oppo


ಆಂಡ್ರಾಯ್ಡ್ 10 ಓಎಸ್ ಆಧಾರಿತ ಒಪ್ಪೋದ ಕಲರ್ ಓಎಸ್ 7, ಡಾರ್ಕ್ ಥೀಮ್ ಮತ್ತು ಫುಲ್ ಸ್ಕ್ರೀನ್ ಗೆಶ್ಚರ್, ಸ್ಮೂತ್ ನ್ಯಾವಿಗೇಶನ್ ಆಯ್ಕೆಗಳನ್ನು ಪರಿಚಯಿಸಲಿದೆ.

ಒಪ್ಪೋ ಕಲರ್ ಓಎಸ್ ಚೀನಾದಲ್ಲಿ ನ.20ಕ್ಕೆ ಬಿಡುಗಡೆಯಾಗಲಿದೆ. ಅದಾದ ಬಳಿಕ ದೇಶದಲ್ಲಿ ನ. 26ರಂದು ಲಭ್ಯವಾಗಲಿದೆ. ಒಪ್ಪೋ ಮತ್ತು ಆಯ್ದ ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳಿಗೆ ದೊರೆಯಲಿದೆ.

ಹೊಸ ಓಎಸ್ ಕುರಿತ ಚಿತ್ರಗಳು ಚೀನಾದ ಸಾಮಾಜಿಕ ತಾಣ ವೆಬೋದಲ್ಲಿ ಹರಿದಾಡಿವೆ. ಅದರ ಪ್ರಕಾರ, ಒಪ್ಪೋ ಕಲರ್‌ಓಎಸ್ 7, ಹೊಸ ಅನಿಮೇಶನ್ ಮತ್ತು ಟ್ರಾನ್ಸಿಶನ್ ಹೊಂದಿದೆ.

SpaceX: 60 ಮಿನಿ ಉಪಗ್ರಹಗಳು ಕಕ್ಷೆಗೆ

ಹೆಚ್ಚಿನ ಭದ್ರತೆ
ಹೊಸ ಓಎಸ್ ಆವೃತ್ತಿಯಲ್ಲಿ ಹೆಚ್ಚಿನ ಭದ್ರತಾ ವೈಶಿಷ್ಟ್ಯ ಮತ್ತು ಗೇಮ್ ಬೂಸ್ಟ್‌ ದೊರೆಯಲಿದೆ. ಬಳಕೆದಾರರಿಗೆ ಸುಲಭ ಮತ್ತು ಸರಳ ಅನುಭವ ಕಲರ್‌ಓಎಸ್ 7ರಲ್ಲಿ ದೊರೆಯಲಿದೆ.

ಹೊಸ ಓಎಸ್ ಪರಿಚಯಿಸಿದ ಬಳಿಕ, ಒಪ್ಪೋ ನೂತನ ಅಪ್‌ಡೇಟ್ ಲಭ್ಯವಿರುವ ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ದೇಶದಲ್ಲಿ ಬಿಡುಗಡೆ ಮಾಡಲಿದೆ.

Instagram: ಲೈಕ್‌ ಕೌಂಟ್ ಅಡಗಿಸಿದ ಇನ್‌ಸ್ಟಾ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌