ಆ್ಯಪ್ನಗರ

ಒಪ್ಪೊ ರೆನೊ ಸ್ಮಾರ್ಟ್‌ಫೋನ್‌ ಇಂದು ಬಿಡುಗಡೆ: ಈ ಫೋನ್‌ ವಿಶೇಷಣಗಳು ಏನು ಗೊತ್ತಾ?

ಒಪ್ಪೊ ರೆನೊ ಸ್ಮಾರ್ಟ್‌ಫೋನ್‌ ಇವತ್ತು ಚೀನಾದ ಬೀಜಿಂಗ್‌ನಲ್ಲಿ ರಿಲೀಸ್ ಆಗುತ್ತಿದ್ದು, ಇದರಲ್ಲಿ ಹಲವಾರು ವಿಶೇಷಣಗಳನ್ನು ಹೊಂದಿದೆ ಎನ್ನಲಾಗಿದೆ. ಉತ್ತಮ ಕ್ಯಾಮೆರಾದ ಸಾಮರ್ಥ್ಯಗಳೇ ಇದರ ಪ್ರಮುಖ ಹೈಲೈಟ್‌ ಆಗಿದೆ.

Gadgets Now 10 Apr 2019, 11:38 am
ಹೊಸದಿಲ್ಲಿ: ಪ್ರಖ್ಯಾತ ಒಪ್ಪೊ ಸ್ಮಾರ್ಟ್‌ಫೋನ್‌ ಕಂಪನಿ ಇವತ್ತು (ಏಪ್ರಿಲ್ 10,2019)ರಂದು ಹೊಸ ಉಪ ಬ್ರ್ಯಾಂಡ್‌ ರೆನೋ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಲಿದೆ. ಚೀನಾದ ಬೀಜಿಂಗ್‌ನಲ್ಲಿ ಒಪ್ಪೊ ರೆನೊ ಸ್ಮಾರ್ಟ್‌ಫೋನ್‌ ಬಿಡುಗಡೆಯಾಗಲಿದ್ದು, ಈ ಕಾರ್ಯಕ್ರಮವನ್ನು ಲೈವ್‌ಸ್ಟ್ರೀಮ್‌ನಲ್ಲಿ ನೋಡಬಹುದಾಗಿದೆ.
Vijaya Karnataka Web oppo reno


ಒಪ್ಪೊ ರೆನೊ ಹ್ಯಾಂಡ್‌ಸೆಟ್‌ ಚೀನಾದಲ್ಲಿ ಬಿಡುಗಡೆಯಾಗಿದ್ದು, ಈ ಕಾರ್ಯಕ್ರಮವನ್ನು ಲೈವ್‌ಸ್ಟ್ರೀಮ್‌ನಲ್ಲಿ ನೋಡಬಹುದಾಗಿದೆ. ಈ ಕಾರ್ಯಕ್ರಮವನ್ನು ಲೈವ್‌ನಲ್ಲಿ ನೋಡಲು ಇಚ್ಛಿಸುವವರು ಈ ವೆಬ್‌ಸೈಟ್‌ ಕ್ಲಿಕ್‌ ಮಾಡಿ - https://hd.opposhop.cn/2019/Reno/index.html

ಜಾಗತಿಕ ಗ್ರಾಹಕರಿಗೆ ಈ ಸ್ಮಾರ್ಟ್‌ಫೋನ್‌ ಏಪ್ರಿಲ್ 24ರಂದು ಬಿಡುಗಡೆಯಾಗಲಿದೆ ಎಂದು ಈ ಹಿಂದೆ ಹೇಳಲಾಗಿತ್ತಾದರೂ ಇಂದೇ ಬಿಡುಗಡೆಯಾಗುತ್ತಿದೆ.

ಒಪ್ಪೊ ರೆನೊದ ನಿರೀಕ್ಷಿತ ವಿಶೇಷಣಗಳು
ಒಪ್ಪೊ ರೆನೊ ಸ್ಮಾರ್ಟ್‌ಫೋನ್‌ನ ರಿಸರ್ವೇಶನ್‌ ಪೇಜ್‌ ಈಗಾಗಲೇ ಒಪ್ಪೊಶಾಪ್‌ ವೆಬ್‌ಸೈಟ್‌ನಲ್ಲಿ ಲೈವ್‌ ಆಗಿದೆ. ಇದರ ಪ್ರಕಾರ ಈ ಫೋನ್ 6ಜಿಬಿ ರ‍್ಯಾಮ್ ಹಾಗೂ 8ಜಿಬಿ ರ‍್ಯಾಮ್ ಎಂಬ 2 ವಿಧಗಳಲ್ಲಿ ಬರುತ್ತದೆ. ಅಲ್ಲದೆ, 128ಜಿಬಿ ಹಾಗೂ 256ಜಿಬಿಯಲ್ಲಿ ಬರುತ್ತದೆ. ಈ ಹ್ಯಾಂಡ್‌ಸೆಟ್‌ 4 ಆಕರ್ಷಕ ಬಣ್ಣಗಳಾದ ಎಕ್ಸ್‌ಟ್ರೀಮ್‌ ಮಿಡ್‌ನೈಟ್‌ ಬ್ಲ್ಯಾಕ್‌, ನೆಬ್ಯುಲಾ ಪರ್ಪಲ್‌, ಫಾಗ್‌ ಸೀ ಗ್ರೀನ್‌ ಹಾಗೂ ಮಿಸ್ಟ್‌ ಪೌಡರ್‌ನಲ್ಲಿ ಬಿಡುಗಡೆಯಾಗಲಿದೆ.

ಇನ್ನು, ಈ ಸ್ಮಾರ್ಟ್‌ಫೋನ್‌ ಎರಡು ಆವೃತ್ತಿಗಳಲ್ಲಿ ಬಿಡುಗಡೆಯಾಗುತ್ತಿದ್ದು, ಸ್ಟ್ಯಾಂಡರ್ಡ್ ಮಾದರಿಯಲ್ಲಿ ಡ್ಯುಯಲ್ ಹಿಂಬದಿ ಕ್ಯಾಮೆರಾವನ್ನು ಹೊಂದಿದ್ದು, ಹೈ ಎಂಡ್‌ ಫೋನ್‌ನಲ್ಲಿ ಟ್ರಿಪಲ್‌ ಲೆನ್ಸ್ ಕ್ಯಾಮೆರಾವನ್ನು ಹೊಂದಿದೆ ಎಂದು ತಿಳಿದುಬಂದಿದೆ. ಅಲ್ಲದೆ, 48 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮೆರಾ ಹೊಂದಿದ್ದು, ಇದರೊಂದಿಗೆ ಸೋನಿ ಐಎಂಎಕ್ಸ್ 586 ಸೆನ್ಸಾರ್, 8 ಮೆಗಾಪಿಕ್ಸೆಲ್ ಸೂಪರ್ ವೈಡ್‌ ಆ್ಯಂಗಲ್‌ ಲೆನ್ಸ್ ಹಾಗೂ 13 ಮೆಗಾಪಿಕ್ಸೆಲ್ ಪೆರಿಸ್ಕೋಪ್‌ ಲೆನ್ಸ್ ಅನ್ನು ಒಪ್ಪೊ ರೆನೊ ಸ್ಮಾರ್ಟ್‌ಫೋನ್‌ ಹೊಂದಿದೆ ಎನ್ನಲಾಗಿದೆ.

ಈ ಸ್ಮಾರ್ಟ್‌ಫೋನ್‌ನ ಕ್ಯಾಮೆರಾದ ಸಾಮರ್ಥ್ಯಗಳೇ ಇದರ ಪ್ರಮುಖ ಹೈಲೈಟ್‌ ಆಗಿದೆ. ಅಲ್ಲದೆ, ಹೈ ಎಂಡ್‌ ಮಾಡೆಲ್‌ನಲ್ಲಿ 10X ಆಪ್ಟಿಕಲ್ ಝೂಮ್‌ ಆಯ್ಕೆಯ ತಂತ್ರಜ್ಞಾನವನ್ನು ಒಳಗೊಂಡಿರಲಿದೆ ಎನ್ನಲಾಗಿದೆ.

ಇನ್ನು, ಒಪ್ಪೊ ರೆನೊದಲ್ಲಿ ಪಾಪ್‌ ಅಪ್‌ ಸೆಲ್ಫೀ ಕ್ಯಾಮೆರಾ ಸಹ ಇರಲಿದೆ ಎನ್ನಲಾಗುತ್ತಿದ್ದು, ಅದನ್ನು ಒಪ್ಪೊ ಶಾರ್ಕ್‌ಫಿನ್‌ ಡಿಸೈನ್‌ ಎಂದು ಕರೆಯುತ್ತಿದೆ. ಅಲ್ಲದೆ, ಆಂಡ್ರಾಯ್ಡ್ ಪೈ ಆಧಾರಿತ ಕಲರ್ ಒಎಸ್‌ 6 ಹಾಗೂ ಪ್ಯಾನೊರಾಮಿಕ್‌ ಸ್ಟ್ರೀನ್‌ ವಿತ್‌ 93.1% ಸ್ಟ್ರೀನ್‌ ಟು ಬಾಡಿ ಅನುಪಾತವನ್ನು ಒಳಗೊಂಡಿರಲಿದೆ ಎನ್ನಲಾಗಿದೆ. ಜತೆಗೆ, ಒಪ್ಪೋದ ವಿಒಒಸಿ 3.0 ವೇಗ ಚಾರ್ಜಿಂಗ್‌ ತಂತ್ರಜ್ಞಾನವನ್ನು ಒದಗಿಸಲಾಗುವುದು ಎಂದೂ ಹೇಳಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌