ಆ್ಯಪ್ನಗರ

WhatsApp: ನಿಮ್ಮ ಖಾತೆ ಬ್ಯಾನ್ ಆಗಬಹುದು! ಎಚ್ಚರ

ಬ್ಯಾನ್‌ಗೊಳಗಾದ ಬಳಕೆದಾರರಿಗೆ 'ನಿಮ್ಮ ಫೋನ್‌ ನಂಬರ್ ಅನ್ನು ಬ್ಯಾನ್ ಮಾಡಲಾಗಿದೆ. ಸಹಾಯಕ್ಕಾಗಿ ವಾಟ್ಸಪ್ ಹೆಲ್ಪ್ ಸಂಪರ್ಕಿಸಿ' ಎಂಬ ಸಂದೇಶ ಕಾಣಿಸಿಕೊಂಡಿದೆ.

Vijaya Karnataka Web 11 Mar 2019, 2:28 pm
ಜನಪ್ರಿಯ ಮೆಸೇಜಿಂಗ್ ಸೇವೆ ನೀಡುತ್ತಿರುವ ಆ್ಯಪ್ ವಾಟ್ಸಪ್ ಬಳಸುತ್ತಿರುವ ಹಲವು ಬಳಕೆದಾರರನ್ನು ವಾಟ್ಸಪ್‌ ಬ್ಯಾನ್ ಮಾಡಿದ್ದು, ಖಾತೆಯನ್ನು ಬ್ಲಾಕ್ ಮಾಡಿದೆ.
Vijaya Karnataka Web Whatsapp


ಬ್ಯಾನ್‌ಗೊಳಗಾದ ಬಳಕೆದಾರರಿಗೆ 'ನಿಮ್ಮ ಫೋನ್‌ ನಂಬರ್ ಅನ್ನು ಬ್ಯಾನ್ ಮಾಡಲಾಗಿದೆ. ಸಹಾಯಕ್ಕಾಗಿ ವಾಟ್ಸಪ್ ಹೆಲ್ಪ್ ಸಂಪರ್ಕಿಸಿ' ಎಂಬ ಸಂದೇಶ ಕಾಣಿಸಿಕೊಂಡಿದೆ.

ವಾಟ್ಸಪ್ ಅನ್ನು ಥರ್ಡ್ ಪಾರ್ಟಿ ವೆಬ್‌ಸೈಟ್ ಮತ್ತು ಆ್ಯಪ್ ಡೆವಲಪರ್‌ಗಳ ಮೂಲಕ ಡೌನ್‌ಲೋಡ್ ಮಾಡಿಕೊಂಡು, ವಾಟ್ಸಪ್‌ನ ಎಪಿಕೆ ಫೈಲ್ ಇನ್‌ಸ್ಟಾಲ್ ಮಾಡಿಕೊಂಡವರು ಮತ್ತು ವಾಟ್ಸಪ್ ಪರಿವರ್ತಿತ ಆವೃತ್ತಿ ಬಳಸುತ್ತಿರುವವರಿಗೆ ಸಮಸ್ಯೆ ಕಾಣಿಸಿಕೊಂಡಿದ್ದು, ಅವರ ವಾಟ್ಸಪ್ ಖಾತೆ ಬ್ಯಾನ್ ಆಗಿದೆ.

ಪರಿವರ್ತಿತ ವಾಟ್ಸಪ್ ಆವೃತ್ತಿಯಲ್ಲಿ ಸಾಮಾನ್ಯ ಆವೃತ್ತಿಗಿಂತ ಹೆಚ್ಚಿನ ಕೆಲವೊಂದು ಆಯ್ಕೆಗಳು ದೊರೆಯುತ್ತವೆ. ಆದರೆ ಅದು ಸುರಕ್ಷಿತವಲ್ಲ ಮತ್ತು ಬಳಕೆದಾರರ ಮಾಹಿತಿ, ಚಾಟ್ ವಿವರ ಮೂರನೇ ವ್ಯಕ್ತಿಗೆ ದೊರೆಯುವ ಸಾಧ್ಯತೆಯಿರುತ್ತದೆ. ಹೀಗಾಗಿ ಭದ್ರತೆ ಮತ್ತು ಸುರಕ್ಷತೆಯ ಕಾರಣದಿಂದ ಅಂತಹ ಆವೃತ್ತಿ ಬಳಸುತ್ತಿರುವ ವಾಟ್ಸಪ್ ಖಾತೆಯನ್ನು ಬ್ಯಾನ್ ಮಾಡಲಾಗಿದೆ.

ಬ್ಯಾನ್ ಆದರೆ ಏನು ಮಾಡಬೇಕು?ನೀವು ಕೂಡ ವಾಟ್ಸಪ್ ಥರ್ಡ್ ಪಾರ್ಟಿ ಆ್ಯಪ್ ಬಳಸಿ, ನಿಮ್ಮ ಖಾತೆ ಬ್ಲಾಕ್ ಆಗಿದ್ದರೆ, ಅದನ್ನು ಅನ್‌ಇನ್‌ಸ್ಟಾಲ್ ಮಾಡಿಕೊಂಡು, ನಂತರ ಹೊಸದಾಗಿ ಗೂಗಲ್ ಪ್ಲೇ ಸ್ಟೋರ್‌ನಿಂದ ವಾಟ್ಸಪ್ ಡೌನ್‌ಲೋಡ್ ಮಾಡಿ, ಇನ್‌ಸ್ಟಾಲ್ ಮಾಡಿಕೊಳ್ಳಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌