ಆ್ಯಪ್ನಗರ

ಜ.4 ರಂದು ಬಿಡುಗಡೆಯಾಗಲಿರುವ Realme GT 2 ಫೀಚರ್ಸ್ ಯಾವುವು ನೋಡಿ!

Geekbench ಪ್ಲಾಟ್‌ಫಾರ್ಮ್‌ನಲ್ಲಿ ಸೇರಿದಂತೆ ಈಗಾಗಲೇ NBTC, TENNA, ಮತ್ತು BIS ನಂತಹ ಇತರ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ Realme GT 2 ಸ್ಮಾರ್ಟ್‌ಫೋನ್ ಅನ್ನು ಗುರುತಿಸಲಾಗಿದ್ದು, ಈ ಮೂಲಕ ಸ್ಮಾರ್ಟ್‌ಫೋನಿನ ಬಹು ಫೀಚರ್ಸ್ ಮಾಹಿತಿಗಳು ಬಹುತೇಕ ಖಚಿತಗೊಂಡಂತಾಗಿವೆ.

Vijaya Karnataka Web 30 Dec 2021, 5:32 pm
ಜನವರಿ 4, 2021 ರಂದು ಬಿಡುಗಡೆಯಾಗಲಿರುವ Realme ಕಂಪೆನಿಯ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್ Realme GT 2 ಯನ್ನು Geekbench ಪ್ಲಾಟ್‌ಫಾರ್ಮ್‌ನಲ್ಲಿ ಗುರುತಿಸಲಾಗಿದ್ದು, Realme GT 2 ಸ್ಮಾರ್ಟ್‌ಫೋನಿನ ಬಹು ವಿಶೇಷತೆಗಳ ಮಾಹಿತಿಯನ್ನು ಬಹಿರಂಗಪಡಿಸಲಾಗಿದೆ. ಗೀಕ್‌ಬೆಂಚ್‌ನಲ್ಲಿ 1125 ರ ಸಿಂಗಲ್-ಕೋರ್ ಸ್ಕೋರ್ ಮತ್ತು 3278 ಮಲ್ಟಿ-ಕೋರ್ ಸ್ಕೋರ್‌ನೊಂದಿಗೆ Realme GT 2 ಫೋನನ್ನು ಪಟ್ಟಿಮಾಡಲಾಗಿದ್ದು, ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 SoC ಆನ್‌ಬೋರ್ಡ್‌ನೊಂದಿಗೆ Android 12 ನಲ್ಲಿ ರನ್ ಆಗುತ್ತಿದೆ ಮತ್ತು 12GB RAM ರೂಪಾಂತರದಲ್ಲಿ ಬರಲಿರುವ ಬಗ್ಗೆ ಖಚಿತ ಮಾಹಿತಿ ದೊರೆತಿದೆ.
Vijaya Karnataka Web ಜ.4 ರಂದು ಬಿಡುಗಡೆಯಾಗಲಿರುವ Realme GT 2 ಫೀಚರ್ಸ್ ಯಾವುವು ನೋಡಿ!


Geekbench ಪ್ಲಾಟ್‌ಫಾರ್ಮ್‌ನಲ್ಲಿ ಸೇರಿದಂತೆ ಈಗಾಗಲೇ NBTC, TENNA, ಮತ್ತು BIS ನಂತಹ ಇತರ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ Realme GT 2 ಸ್ಮಾರ್ಟ್‌ಫೋನ್ ಅನ್ನು ಗುರುತಿಸಲಾಗಿದ್ದು, ಈ ಮೂಲಕ ಸ್ಮಾರ್ಟ್‌ಫೋನಿನ ಬಹು ಫೀಚರ್ಸ್ ಮಾಹಿತಿಗಳು ಬಹುತೇಕ ಖಚಿತಗೊಂಡಂತಾಗಿವೆ. Realme GT 2 ಸ್ಮಾರ್ಟ್‌ಫೋನಿನಲ್ಲಿ 6.62-ಇಂಚಿನ AMOLED ಡಿಸ್ಪ್ಲೇಯನ್ನು ತರಲಾಗಿದೆ ಎಂಬುದು ಈ ಮೊದಲೇ ಬಹಿರಂಗವಾಗಿದೆ. ಇದಲ್ಲದೇ, ಸಾಧನದ ಸೋರಿಕೆಯಾದ ಚಿತ್ರಗಳಿಂದ, ಹಿಂಭಾಗದಲ್ಲಿ ಟ್ರಿಪಲ್-ಕ್ಯಾಮೆರಾ ಸೆಟಪ್ ಇದೆ ಎಂದು ತಿಳಿದುಬಂದಿದ್ದು, ಇದರಲ್ಲಿ ಸಂವೇದಕವು 8MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 2MP ಸಂವೇದಕದೊಂದಿಗೆ ಜೋಡಿಯಾಗಿರುವ 50MP ಲೆನ್ಸ್ ಅನ್ನು ಹೊಂದಿದೆ ಎಂದು ಹೇಳಲಾಗುತ್ತದೆ.

ಇದೀಗ ಈ ಮಾಹಿತಿಗಳ ಜೊತೆಗೆ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 SoC ಆನ್‌ಬೋರ್ಡ್‌ನೊಂದಿಗೆ Android 12 ನಲ್ಲಿ ರನ್ ಆಗುತ್ತಿದೆ ಮತ್ತು 12GB RAM ರೂಪಾಂತರದಲ್ಲಿ ಬರಲಿರುವ ಬಗ್ಗೆ ಮಾಹಿತಿ ದೊರೆತಿದೆ. ಇನ್ನು ಈ ಸ್ಮಾರ್ಟ್‌ಫೋನ್ 65W ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಪ್ಯಾಕ್ ಮಾಡುವ ನಿರೀಕ್ಷೆಯಿದೆ. ಇದು 8GB + 128GB ಮತ್ತು 12GB + 256GB ಯೊಂದಿಗೆ ಎರಡು ರೂಪಾಂತರಗಳಲ್ಲಿ ಬರಬಹುದು ಹಾಗೂ GT 2 ಸರಣಿಯು ವೆನಿಲ್ಲಾ Realme GT 2, Realme GT 2 Pro ಮತ್ತು ಕ್ಯಾಮರಾ-ಕೇಂದ್ರಿತ ಮಾದರಿ ಸೇರಿದಂತೆ ಮೂರು ಸಾಧನಗಳೊಂದಿಗೆ ಬರುವ ನಿರೀಕ್ಷೆಯಿದೆ ಎಂದು ಪ್ರಮುಖ ಟೆಕ್ ಮಾಧ್ಯಮಗಳು ವರದಿ ಮಾಡಿವೆ.
ಜಿಯೋವಿನ ಅತ್ಯಂತ ಅಗ್ಗದ ಪ್ಲ್ಯಾನ್‌ಗೆ ಬ್ರೇಕ್!..ಗ್ರಾಹಕರ ಆಕ್ರೋಶ!
Realme GT 2 ಬಿಡುಗಡೆಯ ಜೊತೆಗೆ Realme GT 2 Pro ಸ್ಮಾರ್ಟ್‌ಫೋನ್ ಬಿಡುಗಡೆ ಕುರಿತಂತೆಯೂ ವದಂತಿಗಳು ಹರಿದಾಡಿವೆ. Realme GT 2 Pro ಸ್ಮಾರ್ಟ್‌ಫೋನ್ Qualcomm ನ ಪ್ರಮುಖ ಚಿಪ್‌ಸೆಟ್, Snapdragon 8 Gen1 ನೊಂದಿಗೆ ಬರುವ ನಿರೀಕ್ಷೆಯಿದೆ. Realme GT 2 Pro ಪೋನ್ 1TB ವರೆಗಿನ ಶೇಖರಣಾ ಆಯ್ಕೆಯೊಂದಿಗೆ ಬರಬಹುದು ಎಂಬ ವದಂತಿಗಳಿವೆ. ಸೋರಿಕೆಯಾದ ವಿಶೇಷಣಗಳಿಂದ, Realme GT 2 ಸರಣಿಯು ಅತ್ಯಂತ ಬಲವಾದ ಪ್ರಮುಖ ಸ್ಮಾರ್ಟ್‌ಫೋನ್ ಸರಣಿಯಂತೆ ಕಾಣುತ್ತದೆ. ಹೈ ಎಂಡ್ ಫೀಚರ್ಸ್ ಹೊತ್ತಿರುವ ಈ ಸ್ಮಾರ್ಟ್‌ಫೋನ್‌ಗಳ ಬೆಲೆಗಳ ಮೇಲೆ ಎಲ್ಲರ ದೃಷ್ಟಿಯಿದೆ. ಒಟ್ಟಿನಲ್ಲಿ ಜನವರಿ 4 ರಂದು ಈ ಎಲ್ಲ ವದಂತಿಗಳಿಗೂ ಬ್ರೇಕ್ ಬೀಳಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌