ಆ್ಯಪ್ನಗರ

Realme Fitness Band: ಮಾರುಕಟ್ಟೆಗೆ ಆಕರ್ಷಕ ಫಿಟ್ನೆಸ್ ಬ್ಯಾಂಡ್

ಜನರಿಗೆ ಫಿಟ್ನೆಸ್ ಮತ್ತು ಸ್ಮಾರ್ಟ್‌ಬ್ಯಾಂಡ್ ಕ್ರೇಜ್ ಹೆಚ್ಚುತ್ತಿದ್ದು, ರಿಯಲ್‌ಮಿ ನೂತನ ಉತ್ಪನ್ನವನ್ನು ಪರಿಚಯಿಸಿದೆ. ಶವೋಮಿ ಮತ್ತು ಹೊನೊರ್‌ಗೆ ಇದು ನೇರ ಸ್ಪರ್ಧೆ ಒಡ್ಡಲಿದೆ.

Times Now 5 Mar 2020, 4:33 pm
ಚೀನಾ ಮೂಲದ ಒಪ್ಪೋ ಕಂಪನಿಯ ಸಹಬ್ರ್ಯಾಂಡ್ ಆಗಿರುವ ರಿಯಲ್‌ಮಿ ಇದೇ ಮೊದಲ ಬಾರಿಗೆ ಆಕರ್ಷಕ ಸ್ಮಾರ್ಟ್‌ ಫಿಟ್ನೆಸ್ ಬ್ಯಾಂಡ್ ಬಿಡುಗಡೆ ಮಾಡಿದೆ.
Vijaya Karnataka Web Realme
Realme band


ಗುರುವಾರ ನಡೆದ ವಿಶೇಷ ಕಾರ್ಯಕ್ರಮದಲ್ಲಿ ರಿಯಲ್‌ಮಿ 6 ಮತ್ತು ರಿಯಲ್‌ಮಿ 6 ಪ್ರೊ ಸ್ಮಾರ್ಟ್‌ಫೋನ್ ಬಿಡುಗಡೆಯ ಜತೆಗೆ ನೂತನ ಫಿಟ್ನೆಸ್ ಬ್ಯಾಂಡ್ ಅನ್ನು ಕೂಡ ಪರಿಚಯಿಸಲಾಗಿದೆ.

ಈಗಾಗಲೇ ಮಾರುಕಟ್ಟೆಯಲ್ಲಿರುವ ಶವೋಮಿ ಎಂಐ ಮತ್ತು ಹುವೈ ಹೊನೊರ್ ಬ್ಯಾಂಡ್‌ಗೆ ರಿಯಲ್‌ಮಿ ಬ್ಯಾಂಡ್ ಸ್ಪರ್ಧೆ ಒಡ್ಡಲಿದೆ.
ವಿಶೇಷತೆಯೇನು?

ರಿಯಲ್‌ಮಿ ಬ್ಯಾಂಡ್ IP68 ವಾಟರ್ ರೆಸಿಸ್ಟಂಟ್ ಹೊಂದಿದೆ. ಜತೆಗೆ 24x7 ಹಾರ್ಟ್ ರೇಟ್ ಸೆನ್ಸರ್ ಇದರ ವಿಶೇಷತೆಯಾಗಿದ್ದು, ಕೇಬಲ್ ರಹಿತ ಯುಎಸ್‌ಬಿ ಡೈರೆಕ್ಟ್ ಚಾರ್ಜಿಂಗ್ ವ್ಯವಸ್ಥೆ ಹೊಂದಿದೆ. 9 ದಿನಗಳ ಬ್ಯಾಟರಿ ಬಾಳಿಕೆ ರಿಯಲ್‌ಮಿ ಬ್ಯಾಂಡ್‌ನಲ್ಲಿದೆ.

Messenger: ಫೇಸ್‌ಬುಕ್ ಮೆಸೆಂಜರ್‌ ಹೊಸ ಅಪ್‌ಡೇಟ್

ಬೆಲೆ ವಿವರ
ರಿಯಲ್‌ಮಿ ಬ್ಯಾಂಡ್ 1,499 ರೂ.ಗೆ ಲಭ್ಯವಿದ್ದು, ರಿಯಲ್‌ಮಿ.ಕಾಂ ಮೂಲಕ ದೊರೆಯುತ್ತದೆ. ಅಲ್ಲದೆ ಅಮೆಜಾನ್.ಇನ್ ಮತ್ತು ರಿಟೇಲ್ ಮಳಿಗೆಗಳ ಮೂಲಕವೂ ಶೀಘ್ರದಲ್ಲೇ ದೊರೆಯಲಿದೆ. ಕಪ್ಪು, ಹಸಿರು ಮತ್ತು ಹಳದಿ ಎಂಬ ಮೂರು ಬಣ್ಣಗಳ ಸ್ಟ್ರಾಪ್ ಆಯ್ಕೆ ಲಭ್ಯವಿದೆ.
ಸೋಶಿಯಲ್ ನೋಟಿಫಿಕೇಶನ್, ವಾಕಿಂಗ್, ರನ್ನಿಂಗ್ ಮತ್ತು ಯೋಗ ಹಾಗೂ ಇನ್ನಿತರ ಹಲವು ಆಕ್ಟಿವಿಟಿಗೆ ಬೆಂಬಲ ನೀಡುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌