ಆ್ಯಪ್ನಗರ

Jio TV+: ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಸಹಿತ 12 ಒಟಿಟಿ ಸೇವೆಗಳಿಗೆ ಒಂದೇ ವೇದಿಕೆ!

ರಿಲಯನ್ಸ್ ಜಿಯೋ ಗ್ಲಾಸ್, ಜಿಯೋಮಾರ್ಟ್, ಜಿಯೋ 5G ಸೇವೆಗಳನ್ನು ಕೂಡ ದೇಶದಲ್ಲಿ ಘೋಷಿಸಿದೆ. ಅಲ್ಲದೆ, ಗೂಗಲ್ ಕೂಡ ಜಿಯೋದಲ್ಲಿ 33,737 ಕೋಟಿ ರೂ. ಹೂಡಿಕೆ ಮಾಡಲಿದೆ.

Times Now 15 Jul 2020, 5:42 pm
ಬುಧವಾರ ನಡೆದ ರಿಲಯನ್ಸ್ ವಾರ್ಷಿಕ ಸಭೆಯಲ್ಲಿ ಮುಕೇಶ್ ಅಂಬಾನಿ ಡಿಜಿಟಲ್ ಇಂಡಿಯಾ ಯೋಜನೆಗೆ ಪೂರಕವಾದ ಭರಪೂರ ಕಾರ್ಯಕ್ರಮಗಳನ್ನು ಘೋಷಿಸಿದ್ದಾರೆ. ದೇಶದಲ್ಲಿ ರಿಲಯನ್ಸ್ ಜಿಯೋ, ಜಿಯೋ ಟಿವಿ+ ಎನ್ನುವ ವಿಶಿಷ್ಟ ವ್ಯವಸ್ಥೆಯನ್ನು ಪರಿಚಯಿಸುತ್ತಿದೆ. ಅಮೆಜಾನ್ ಪ್ರೈಮ್, ನೆಟ್‌ಫ್ಲಿಕ್ಸ್ ಸಹಿತ 12 ವಿವಿಧ ಒಟಿಟಿ ಸೇವೆಗಳನ್ನು ಒಂದೇ ವೇದಿಕೆಯಲ್ಲಿ ಜಿಯೋ ಟಿವಿ+ ಒದಗಿಸಲಿದೆ.
Vijaya Karnataka Web Jio TV+
JioTV+


ಒಂದೇ ಸೈನ್‌ ಇನ್!
ಮುಂದೆ ಪ್ರತ್ಯೇಕವಾಗಿ ಒಂದೊಂದು ಒಟಿಟಿ ಯೋಜನೆಗಳನ್ನು ಬಳಸುವ ಬದಲು, ಜಿಯೋ ಟಿವಿ+ ಮೂಲಕ ಒಂದೇ ಸೈನ್‌ ಇನ್ ಮೂಲಕ 12 ವಿವಿಧ ಸೇವೆಗಳನ್ನು ಪಡೆಯಬಹುದಾಗಿದೆ. ಅಲ್ಲದೆ, ಮೂವೀಸ್, ಸಾಂಗ್ಸ್, ವಿಡಿಯೋ, ಮ್ಯೂಸಿಕ್ ವಿಡಿಯೋ, ಟ್ರೈಲರ್ ಎನ್ನುವ ವಿಭಾಗಗಳಿದ್ದು, ಮತ್ತು ವಾಯ್ಸ್ ಸರ್ಚ್ ಆಯ್ಕೆಯಿದ್ದು, ಅದನ್ನು ಬಳಸಿಕೊಂಡು ಗ್ರಾಹಕರು ತಮ್ಮಿಷ್ಟದ ಕಾರ್ಯಕ್ರಮ ವೀಕ್ಷಿಸಬಹುದು.

ಯಾವೆಲ್ಲ ಸೇವೆಗಳು ಲಭ್ಯ?
ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ, ಡಿಸ್ನೀ ಪ್ಲಸ್ ಹಾಟ್‌ಸ್ಟಾರ್, ವೂಟ್, ಸೋನಿ ಲೈವ್, ಝೀ5, ಲಯನ್ಸ್‌ಗೇಟ್ ಪ್ಲೇ, ಜಿಯೋಸಿನಿಮಾ, ಶೆಮರೂ, ಜಿಸಾವನ್, ಯೂಟ್ಯೂಬ್ ಮತ್ತು ಇರೋಸ್‌ನೌ ಜಿಯೋ ಟಿವಿ+ ಮೂಲಕ ದೊರೆಯುತ್ತವೆ. ಎಲ್ಲದಕ್ಕೂ ಒಂದೇ ಲಾಗಿನ ಐಡಿ ಇರಲಿದ್ದು, ಅದರ ಮೂಲಕ ಬಳಕೆದಾರರು ತಮ್ಮಿಷ್ಟದ ಸೇವೆಯನ್ನು ಒಂದೇ ವೇದಿಕೆಯಡಿ ಪಡೆಯಬಹುದು.

Huawei Ban: ಬ್ರಿಟನ್‌ನಲ್ಲಿ ಚೀನಾದ ಹುವೈಗೆ ನಿರ್ಬಂಧ

ಅದರ ಜತೆಗೇ ರಿಲಯನ್ಸ್ ಜಿಯೋ ಗ್ಲಾಸ್, ಜಿಯೋಮಾರ್ಟ್, ಜಿಯೋ 5G ಸೇವೆಗಳನ್ನು ಕೂಡ ದೇಶದಲ್ಲಿ ಘೋಷಿಸಿದೆ. ಅಲ್ಲದೆ, ಗೂಗಲ್ ಕೂಡ ಜಿಯೋದಲ್ಲಿ 33,737 ಕೋಟಿ ರೂ. ಹೂಡಿಕೆ ಮಾಡಲಿದೆ.

WhatsApp QR Code: ದೇಶದ ಬಳಕೆದಾರರಿಗೆ ಲಭ್ಯವಾಗುತ್ತಿದೆ ವಾಟ್ಸಪ್ ಹೊಸ ಫೀಚರ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌