ಆ್ಯಪ್ನಗರ

ಕಡಿಮೆಯಾಗುತ್ತಿರುವ ಬೇಡಿಕೆ: ಬಳಕೆದಾರರನ್ನು ಹೆಚ್ಚಿಸಲು ಮಾಸ್ಟರ್ ಪ್ಲ್ಯಾನ್ ಮಾಡಿದ ಜಿಯೋ

ಜಿಯೋನ ಪ್ರತಿ ತಿಂಗಳು ಸರಾಸರಿ 4.7 ಮಿಲಿಯನ್ನಿವ್ವಳ ಚಂದಾದಾರರನ್ನು ತನ್ನ ಕುಟುಂಬಕ್ಕೆ ಸೇರಿಸಿಕೊಳ್ಳುತ್ತಿತ್ತು. ಆದರೆ ಮಾರ್ಚ್ 2020 ರಲ್ಲಿ ಸರಾಸರಿ 2.3 ಮಿಲಿಯನ್ ಚಂದದಾರರು ಮಾತ್ರವೇ ಹೊಸದಾಗಿ ಜಿಯೋಕ್ಕೆ ಸೇರ್ಪಡೆಯಾಗಿದ್ದಾರೆ.

Vijaya Karnataka Web 5 Apr 2021, 8:50 am
ಆಕ್ರಮಣಕಾರಿ ತಂತ್ರಕ್ಕೆ ಮುಂದಾಗಿರುವ ರಿಲಯನ್ಸ್ ಜಿಯೋಹೊಸ ಜಿಯೋಫೋನ್ ಕೊಡುಗೆಗಳು ಮತ್ತು ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ಲಾಂಚ್ ಮಾಡುವ ಮೂಲಕ ಚಂದಾದಾರರ ಸಂಖ್ಯೆಯನ್ನು ಏರಿಕೆ ಮಾಡಿಕೊಳ್ಳಿದೆ ಎಂದು ವರದಿಯೊಂದು ತಿಳಿಸಿದೆ.
Vijaya Karnataka Web ಕಡಿಮೆಯಾಗುತ್ತಿರುವ ಬೇಡಿಕೆ: ಬಳಕೆದಾರರನ್ನು ಹೆಚ್ಚಿಸಲು ಮಾಸ್ಟರ್ ಪ್ಲ್ಯಾನ್ ಮಾಡಿದ ಜಿಯೋ


ಜಿಯೋನ ಪ್ರತಿ ತಿಂಗಳು ಸರಾಸರಿ 4.7 ಮಿಲಿಯನ್ನಿವ್ವಳ ಚಂದಾದಾರರನ್ನು ತನ್ನ ಕುಟುಂಬಕ್ಕೆ ಸೇರಿಸಿಕೊಳ್ಳುತ್ತಿತ್ತು. ಆದರೆ ಮಾರ್ಚ್ 2020 ರಲ್ಲಿ ಸರಾಸರಿ 2.3 ಮಿಲಿಯನ್ ಚಂದದಾರರು ಮಾತ್ರವೇ ಹೊಸದಾಗಿ ಜಿಯೋಕ್ಕೆ ಸೇರ್ಪಡೆಯಾಗಿದ್ದಾರೆ. ಈ ಹಿನ್ನಲೆಯಲ್ಲಿ ಬಳಕೆದಾರರ ಸಂಖ್ಯೆಯನ್ನು ಏರಿಸಿಕೊಳ್ಳು ಹೊಸ ತಂತ್ರಕ್ಕೆ ಜಿಯೋ ಕೈ ಹಾಕಲಿದೆ.

ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ಡೌನ್ಲೋಡ್ ಮಾಡಲು ಈ ಟ್ರಿಕ್ ಉಪಯೋಗಿಸಿ

ಹೊಸ ಜಿಯೋಫೋನ್ ಯೋಜನೆಗಳ ಮೂಲಕ ಚಂದಾದಾರರನ್ನು ಸೆಳೆಯುವುದರೊಂದಿಗೆ ಹೊಸ ಮಾದರಿಯ ಕಡಿಮೆ ಬೆಲೆಯ ಸ್ಮಾರ್ಟ್‌ ಫೋನ್ ಲಾಂಚ್ ಮಾಡುವುದು ಸಹ ಹೊಸ ಅಸ್ತ್ರವಾಗಲಿದೆ.

ಕೋವಿಡ್‌ ನಂತರದ ದತ್ತಾಂಶ ಬಳಕೆಯ ಹೆಚ್ಚಳದಿಂದಾಗಿ ಜಿಯೋನ ಚಂದಾದಾರರ ಸಂಖ್ಯೆ 21 ಹಣಕಾಸಿನ ಅವಧಿಯಲ್ಲಿ ತಟಸ್ಥವಾಗಿದೆ,ಆದರೆ ಮೊಬೈಲ್ ಬ್ರಾಡ್ಬ್ಯಾಂಡ್ ಚಂದಾದಾರರ ಹೆಚ್ಚಿನ ಪಾಲನ್ನು ಸಮೀಪ ಸ್ಪರ್ಧಿ (ಭಾರ್ತಿ) ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ಜೆಮ್‌ ಫೈನಾಷಿಯಲ್ ವರದಿ ಮಾಡಿದೆ.

ನಿಮ್ಮ ದೈನಂದಿನ ಡೇಟಾ ಖಾಲಿಯಾಗಿದ್ರೂ ಇಂಟರ್ನೆಟ್ ಸ್ಪೀಡ್ ಹೆಚ್ಚಿಸುವುದು ಹೇಗೆ?

ಹೆಚ್ಚುವರಿಯಾಗಿ, ಹೊಸ "ಆಕ್ರಮಣಕಾರಿ" ಜಿಯೋಫೋನ್ ಕೊಡುಗೆಗಳು, ಕಡಿಮೆ ವೆಚ್ಚದ ಸ್ಮಾರ್ಟ್ಫೋನ್ಗಳ ಬಿಡುಗಡೆಯು ಜಿಯೋಗೆ ಚಂದಾದಾರರನ್ನು ಮರಳಿ ಪಡೆಯಲು ಸಹಾಯ ಮಾಡುತ್ತದೆ ಎಂದು ತಿಳಿಸಿದೆ. ಹೊಸ ಜಿಯೋಫೋನ್ ಕೊಡುಗೆಗಳು ಹಾಗೂ ಸ್ಮಾರ್ಟ್‌ಫೋನ್ ಲಾಂಚ್ ಚಂದಾದಾರರ ಸೇರ್ಪಡೆ ಹೆಚ್ಚಿಸಲು ಜಿಯೋಗೆ ಅನುವು ಮಾಡಿಕೊಡಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌