ಆ್ಯಪ್ನಗರ

Jio Free Data: ರಿಲಯನ್ಸ್ ಜಿಯೋ ಆಯ್ದ ಗ್ರಾಹಕರಿಗೆ ಉಚಿತ 2GB 4G ಡೇಟಾ

ಅಲ್ಲದೆ, ರಿಲಯನ್ಸ್ ಜಿಯೋ ವರ್ಕ್ ಫ್ರಮ್ ಹೋಮ್ ಆಡ್ ಆನ್ ಪ್ಯಾಕ್ ಈಗ 30 ದಿನದ ವ್ಯಾಲಿಡಿಟಿ ಹೊಂದಿದ್ದು, ಈಗ ಬಳಕೆಯಲ್ಲಿರುವ ಪ್ಲ್ಯಾನ್ ಜತೆಗೆ ಹೆಚ್ಚುವರಿಯಾಗಿ ಬಳಸಿಕೊಳ್ಳಬಹುದಾಗಿದೆ.

Times Now 2 Jun 2020, 9:26 am
ವಿವಿಧ ಕೊಡುಗೆ ಮೂಲಕ ಲಾಕ್‌ಡೌನ್ ಅವಧಿಯಲ್ಲಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿರುವ ರಿಲಯನ್ಸ್ ಜಿಯೋ, ಈಗ ಸರ್‌ಪ್ರೈಸ್ ಕೊಡುಗೆ ಮೂಲಕ ಉಚಿತ 2 GB 4G ಡೇಟಾ ಆಫರ್ ಅನ್ನು ಆಯ್ದ ಗ್ರಾಹಕರಿಗೆ ನೀಡುತ್ತಿದೆ. ಕಳೆದ ತಿಂಗಳು ಕೂಡ ರಿಲಯನ್ಸ್ ಜಿಯೋ ಉಚಿತ 2 GB 4G ಡೇಟಾವನ್ನು ನಾಲ್ಕು ದಿನ ನೀಡಿತ್ತು. ಈ ಬಾಗಿ ಆಯ್ದ ಗ್ರಾಹಕರಿಗೆ ಐದು ದಿನದ ಮಟ್ಟಿಗೆ, ಪ್ರತಿದಿನ ತಲಾ 2 GB 4G ಹೈಸ್ಪೀಡ್ ಡೇಟಾ ಲಭ್ಯವಾಗುತ್ತಿದೆ.
Vijaya Karnataka Web Jio Free Data
Reliance Jio


ಹೆಚ್ಚುವರಿ ಡೇಟಾ ಕೊಡುಗೆಯನ್ನು ರಿಲಯನ್ಸ್ ಜಿಯೋ ಗ್ರಾಹಕರು ಜಿಯೋ ಆ್ಯಪ್‌ನಲ್ಲಿರುವ ಮೈ ಪ್ಲ್ಯಾನ್ಸ್ ಸೆಕ್ಷನ್ ಮೂಲಕ ತಿಳಿದುಕೊಳ್ಳಬಹುದು.

ಓನ್ಲಿಟೆಕ್ ಫೋರಂನಲ್ಲಿ ರಿಲಯನ್ಸ್ ಜಿಯೋ ಗ್ರಾಹಕರು ಉಚಿತ 2 GB 4G ಹೈಸ್ಪೀಡ್ ಡೇಟಾ ಪಡೆದುಕೊಂಡಿರುವ ಬಗ್ಗೆ ತಿಳಿಸಿದ್ದಾರೆ. ಆಡ್‌ ಆನ್ ಪ್ಯಾಕ್ ರೂಪದಲ್ಲಿ ಜಿಯೋ ಆಯ್ದ ಗ್ರಾಹಕರಿಗೆ 2 GB 4G ಹೈಸ್ಪೀಡ್ ಡೇಟಾ ಆಫರ್ ನೀಡುತ್ತಿದೆ.

ಅಲ್ಲದೆ, ಜಿಯೋ ವರ್ಕ್ ಫ್ರಮ್ ಹೋಮ್ ಆಡ್ ಆನ್ ಪ್ಯಾಕ್ ಈಗ 30 ದಿನದ ವ್ಯಾಲಿಡಿಟಿ ಹೊಂದಿದ್ದು, ಈಗ ಬಳಕೆಯಲ್ಲಿರುವ ಪ್ಲ್ಯಾನ್ ಜತೆಗೆ ಹೆಚ್ಚುವರಿಯಾಗಿ ಬಳಸಿಕೊಳ್ಳಬಹುದಾಗಿದೆ.

Redmi Note 8: ಮತ್ತೆ ಶವೋಮಿ ರೆಡ್ಮಿ ಫೋನ್ ಬೆಲೆ ಏರಿಕೆ!

ಉಳಿದಂತೆ ವಿವಿಧ ವ್ಯಾಲಿಡಿಟಿ ಮತ್ತು ಡೇಟಾ ಅಗತ್ಯಕ್ಕೆ ತಕ್ಕಂತೆ ರಿಲಯನ್ಸ್ ಜಿಯೋ ಕಾಂಬೋ ಪ್ಲ್ಯಾನ್‌ ಅನ್ನು ಪರಿಷ್ಕರಿಸುತ್ತದೆ. ಹೀಗಾಗಿ ಪ್ರಿಪೇಯ್ಡ್ ಗ್ರಾಹಕರು ತಮಗೆ ಅಗತ್ಯವಾಗಿರುವ ಪ್ಲ್ಯಾನ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು.

Reliance Jio Prepaid Plans: ಜೂನ್ ತಿಂಗಳ ವಿಶೇಷ ಆಫರ್ ಇಲ್ಲಿದೆ..

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌