ಆ್ಯಪ್ನಗರ

Ola: ಹೆಚ್ಚು ಡೌನ್‌ಲೋಡ್‌ ಆದ 3ನೇ ಆ್ಯಪ್‌

ರೈಡ್ ಶೇರ್ ಮತ್ತು ಕ್ಯಾಬ್ ಬುಕಿಂಗ್ ಆ್ಯಪ್‌ ದೇಶದಲ್ಲಿ ಜನಪ್ರಿಯವಾಗುತ್ತಿದೆ. ಹೊಸ ಜಮಾನದ ಸ್ಟಾರ್ಟ್ಪ್ ಆಗಿ ಗುರುತಿಸಿಕೊಂಡ ಓಲಾ ಈಗ ಮತ್ತೊಂದು ಹೆಗ್ಗಳಿಕೆ ಪಡೆದುಕೊಂಡಿದೆ.

THE ECONOMIC TIMES 20 Nov 2019, 9:20 am
ದೇಶದ ರೈಡ್‌-ಶೇರಿಂಗ್‌ ಆ್ಯಪ್‌ ಓಲಾ, ವಿಶ್ವದಲ್ಲಿಅತಿ ಹೆಚ್ಚು ಡೌನ್‌ಲೋಡ್‌ ಆದ 'ಟಾಪ್‌-5' ಆ್ಯಪ್‌ಗಳಲ್ಲಿಒಂದಾಗಿದೆ. ಅಕ್ಟೋಬರ್‌ ತಿಂಗಳ ಮಾಹಿತಿ ಪ್ರಕಾರ, ವಿಶ್ವದಲ್ಲಿನ ಆ್ಯಂಡ್ರಾಯ್ಡ್‌ ಮೊಬೈಲ್‌ಗಳಲ್ಲಿ ಹೆಚ್ಚು ಡೌನ್‌ಲೋಡ್‌ ಆದ ಮೂರನೇ ಆ್ಯಪ್‌ ಆಗಿ ಗುರುತಿಸಿಕೊಂಡಿದೆ.
Vijaya Karnataka Web ola
Ola App


ಆ್ಯಪ್‌ ರೀಸರ್ಚ್ ಸಂಸ್ಥೆ ಸೆನ್ಸರ್‌ ಟವರ್‌ ಡೇಟಾ ಪ್ರಕಾರ-ರೈಡ್‌ಶೇರಿಂಗ್‌ ಆ್ಯಪ್‌ಗಳಲ್ಲಿ ವಿಶ್ವದಲ್ಲೇ ಹೆಚ್ಚು ಡೌನ್‌ಲೋಡ್‌ ಆದ ನಾಲ್ಕನೇ ಆ್ಯಪ್‌ ಮತ್ತು ಆ್ಯಂಡ್ರಾಯ್ಡ್‌ನಲ್ಲಿ(ಗೂಗಲ್‌ ಪ್ಲೇಸ್ಟೋರ್‌) ಹೆಚ್ಚು ಡೌನ್‌ಲೋಡ್‌ ಆದ ಮೂರನೇ ಆ್ಯಪ್‌ ಆಗಿ ಓಲಾ ಅಕ್ಟೋಬರ್‌ನಲ್ಲಿ ಹೊರಹೊಮ್ಮಿದೆ.

ಬೆಂಗಳೂರು ಮೂಲದ ಓಲಾ ಆ್ಯಪ್‌ ಸೇವೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ20 ನಗರಗಳಲ್ಲಿ ಲಭ್ಯವಿದೆ. ಆಸ್ಪ್ರೇಲಿಯಾದಲ್ಲಿ 9, ಬ್ರಿಟನ್‌ನಲ್ಲಿ7 ಮತ್ತು ನ್ಯೂಜಿಲೆಂಡ್‌ನಲ್ಲಿ 3 ನಗರಗಳಲ್ಲಿಓಲಾ ಸಕ್ರಿಯವಾಗಿದೆ.

Social Commerce: ನೆಟ್‌ನಂಟ್‌ನಲ್ಲಿ ಖರೀದಿ ಖುಷಿ

ಓಲಾ ಪ್ರತಿಸ್ಪರ್ಧಿ ಆ್ಯಪ್‌ ಉಬರ್‌, ವಿಶ್ವದಲ್ಲಿಯೇ ಅಕ್ಟೋಬರ್‌ನಲ್ಲಿ ಹೆಚ್ಚು ಡೌನ್‌ಲೋಡ್‌ ಆದ ರೈಡ್‌ ಶೇರಿಂಗ್‌ ಮತ್ತು ಟ್ಯಾಕ್ಸಿ ಆ್ಯಪ್‌ ಆಗಿ ಗುರುತಿಸಿಕೊಂಡಿದೆ. ಅಕ್ಟೋಬರ್‌ನಲ್ಲಿ 1.24 ಲಕ್ಷ ಇನ್‌ಸ್ಟಾಲ್‌ಗಳಾಗಿವೆ. 60 ದೇಶಗಳಲ್ಲಿ ಮತ್ತು 400 ನಗರಗಳಲ್ಲಿಓಲಾ ಸೇವೆ ಲಭ್ಯವಿದೆ. ಎರಡನೇ ಸ್ಥಾನದಲ್ಲಿಗ್ರಾಬ್‌ ಇದೆ.

Location History: ಗೂಗಲ್ ಮ್ಯಾಪ್‌ನಲ್ಲಿ ಡಿಲೀಟ್ ಮಾಡುವುದು ಹೇಗೆ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌