ಆ್ಯಪ್ನಗರ

35,999 ಬೆಲೆಯಲ್ಲಿ ಸೆ.1 ರಂದು ಲಾಂಚ್ ಆಗುತ್ತಿದೆ ಗ್ಯಾಲಕ್ಸಿ A52s 5G!

6 ಜಿಬಿ+128 ಜಿಬಿ ಮತ್ತು 8 ಜಿಬಿ+128 ಜಿಬಿ ಎರಡು ಮಾದರಿಗಳಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ 52 ಎಸ್ 5 ಜಿ ಸ್ಮಾರ್ಟ್‌ಫೋನ್ ಬಿಡುಗಡೆಯಾಗುತ್ತಿದ್ದು, ಹ್ಯಾಂಡ್‌ಸೆಟ್‌ನ ಬೆಲೆಗಳು ಕ್ರಮವಾಗಿ 6GB+128GB ಮಾದರಿಗೆ ರೂ. 35,999 ಮತ್ತು 8GB+128GB ರೂಪಾಂತರಕ್ಕೆ ರೂ. 37,499 ಆಗಿರಲಿದೆ ಎಂದು ತಿಳಿದುಬಂದಿದೆ.

Vijaya Karnataka Web 31 Aug 2021, 10:16 am
ಮಧ್ಯಮ ಬೆಲೆಯಲ್ಲಿ ಭಾರತದ ಪ್ರೀಮಿಯಂ ಸ್ಮಾರ್ಟ್‌ಫೋನ್ ಮಾರುಕಟ್ಟೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಮುಂದಾಗಿರುವ ಸ್ಯಾಮ್‌ಸಂಗ್ ಮೊಬೈಲ್ ಕಂಪೆನಿ, ಇದೇ ಸೆಪ್ಟೆಂಬರ್ 1 ನೇ ತಾರೀಖಿನಂದು ಗ್ಯಾಲಕ್ಸಿ A52s 5G ಸ್ಮಾರ್ಟ್‌ಫೋನನ್ನು ಬಿಡುಗಡೆ ಮಾಡುವುದಾಗಿ ಅಧಿಕೃತವಾಗಿ ಹೇಳಿದೆ. ಈ ಕುರಿತು ಕಂಪನಿಯು ಮಾಡಿರುವ ಅಧಿಕೃತ ಟ್ವೀಟ್ ನಲ್ಲಿ, ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ A52s 5G ಸ್ಮಾರ್ಟ್‌ಫೋನನ್ನು ಸೆಪ್ಟೆಂಬರ್ 1, 2021 ರ ಬುಧವಾರದಂದು ಮಧ್ಯಾಹ್ನ 12 ಗಂಟೆಗೆ ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿಸಿದೆ.
Vijaya Karnataka Web 35,999 ಬೆಲೆಯಲ್ಲಿ ಸೆ.1 ರಂದು ಲಾಂಚ್ ಆಗುತ್ತಿದೆ ಗ್ಯಾಲಕ್ಸಿ A52s 5G!


6 ಜಿಬಿ+128 ಜಿಬಿ ಮತ್ತು 8 ಜಿಬಿ+128 ಜಿಬಿ ಎರಡು ಮಾದರಿಗಳಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ 52 ಎಸ್ 5 ಜಿ ಸ್ಮಾರ್ಟ್‌ಫೋನ್ ಬಿಡುಗಡೆಯಾಗುತ್ತಿದ್ದು, ಹ್ಯಾಂಡ್‌ಸೆಟ್‌ನ ಬೆಲೆಗಳು ಕ್ರಮವಾಗಿ 6GB+128GB ಮಾದರಿಗೆ ರೂ. 35,999 ಮತ್ತು 8GB+128GB ರೂಪಾಂತರಕ್ಕೆ ರೂ. 37,499 ಆಗಿರಲಿದೆ ಎಂದು ತಿಳಿದುಬಂದಿದೆ. ಇನ್ನು ಈ ಸ್ಮಾರ್ಟ್‌ಫೋನನ್ನು ಇ-ಕಾಮರ್ಸ್ ದಿಗ್ಗಜ ವೆಬ್‌ಸೈಟ್ ಅಮೆಜಾನ್ ಇಂಡಿಯಾದಲ್ಲಿ ಪಟ್ಟಿ ಮಾಡಲಾಗಿದ್ದು, ಅಧಿಕೃತ ಖರೀದಿಗೆ ಯಾವಾಗ ಸಿಗಲಿದೆ ಎಂಬುದು ಇದೇ ಸೆಪ್ಟೆಂಬರ್ 1 ರಂದು ತಿಳಿಯಲಿದೆ.

ಇನ್ನು ಈ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ 52 ಎಸ್ 5 ಜಿ ಸ್ಮಾರ್ಟ್‌ಫೋನಿನ ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಗ್ಯಾಲಕ್ಸಿ A52s ಫೋನಿನಲ್ಲಿ 2,400 X 1,080 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.5-ಇಂಚಿನ S-AMOLED ಡಿಸ್‌ಪ್ಲೇ ನೀಡಲಾಗಿದೆ. ಪಂಚ್ ಹೋಲ್ ಸ್ಕ್ರೀನ್ ಮತ್ತು 120Hz ರಿಫ್ರೆಶ್ ರೇಟ್ ಹೊಂದಿರುವ ಸ್ಕ್ರೀನ್ ಇದಾಗಿದ್ದು, ಇದು 8GB ವರೆಗೆ RAM ಹೊಂದಿದೆ. ಹಾಗೆಯೇ, ಫೋನ್ 128GB ಆಂತರಿಕ ಸಂಗ್ರಹಣೆಯನ್ನು ಹೊಂದಿರುವ ಫೋನ್ ಆಂಡ್ರಾಯ್ಡ್ 11 ಆಧಾರಿತ One UI 3.1 ನಲ್ಲಿ ಕಾರ್ಯನಿರ್ವಹಿಸುತ್ತದೆ.

Snapdragon 778G ಚಿಪ್‌ಸೆಟ್‌ನೊಂದಿಗೆ 5ಜಿ ಸೇವೆಯನ್ನು ಒದಗಿಸಲಿರುವ ಈ ಸ್ಮಾರ್ಟ್‌ಫೋನ್ ಬಾಹ್ಯ ಮೆಮೊರಿಯನ್ನು ಎಸ್‌ಡಿ ಕಾರ್ಡ್‌ ಸಹಾಯದಿಂದ ವಿಸ್ತರಿಸಿಕೊಳ್ಳಬದು.ಇನ್ನು ಕ್ಯಾಮೆರಾ ಸೆಟಪ್ ಕುರಿತು ಹೇಳುವುದಾದರೆ, ಗ್ಯಾಲಕ್ಸಿ ಎ 52 ಎಸ್ 5 ಜಿ ಫೋನಿನಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 32MP ಫ್ರಂಟ್ ಕ್ಯಾಮೆರಾವನ್ನು ನೀಡಲಾಗಿದೆ. ಹಾಗೂ ಫೋನಿನ ಹಿಂಭಾಗದಲ್ಲಿ 64MP ಪ್ರಾಥಮಿಕ ಕ್ಯಾಮೆರಾ, 12MP ಅಲ್ಟ್ರಾ ವೈಡ್ ಆಂಗಲ್ ಸೆನ್ಸರ್ ಮತ್ತು ಎರಡು 5MP-5MP ಡೆಪ್ತ್ ಸೆನ್ಸರ್‌ಗಳನ್ನು ಪ್ಯಾಕ್ ಮಾಡಲಾಗಿರುವುದು ವಿಶೇಷ.

ಇಷ್ಟೇಲ್ಲಾ ವಿಶೇಷತೆಗಳನ್ನು ಹೊಂದಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ 52 ಎಸ್ 5 ಜಿ ಸ್ಮಾರ್ಟ್‌ಫೋನಿನ ಬ್ಯಾಟರಿ ಸಾಮರ್ಥ್ಯ ಕೂಡ ಅದ್ಭುತವಾಗಿದ್ದು, 25W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 4500mAh ಬ್ಯಾಟರಿಯನ್ನು ಸ್ಮಾರ್ಟ್‌ಫೋನಿನಲ್ಲಿ ಅಳವಡಿಸಲಾಗಿದೆ. 5G ಮತ್ತು 4G LTE ಕನೆಕ್ಟಿವಿಟಿ, ಡ್ಯುಯಲ್-ಬ್ಯಾಂಡ್ ವೈ-ಫೈ, ಬ್ಲೂಟೂತ್ 5.0, GPS, NFC ಮತ್ತು USB ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಅನ್ನು ಸಂಪರ್ಕದ ವೈಶಿಷ್ಟ್ಯಗಳಲ್ಲಿ ನೀಡಲಾಗಿದೆ. ಹಾಗೂ ಕಪ್ಪು, ಆಕರ್ಷಕ ಬಿಳಿ ಮತ್ತು ಅದ್ಭುತವಾದ ನೇರಳೆ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌