ಆ್ಯಪ್ನಗರ

Samsung Galaxy S10 ಬಿಡುಗಡೆ ಸನ್ನಿಹಿತ; 5ಜಿ ಬೆಂಬಲ

10ರ ಸಂಭ್ರಮದಲ್ಲಿರುವ ಸ್ಯಾಮ್‌ಸಂಗ್ ಎಸ್ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳ ಸಾಲಿಗೆ ನೂತನ ಗ್ಯಾಲಕ್ಸಿ ಎಸ್10 ಸೇರ್ಪಡೆಯಾಗಲಿದೆ. ಅಲ್ಲದೆ ಅತಿ ನೂತನ 5ಜಿ ಬೆಂಬಲಿತ ಎಸ್10 ಬಿಡುಗಡೆ ಮಾಡುವ ಯೋಜನೆಯನ್ನು ಸಂಸ್ಥೆ ಹೊಂದಿದೆ.

Vijaya Karnataka Web 11 Jan 2019, 2:44 pm
ಹೊಸದಿಲ್ಲಿ: ಎಲೆಕ್ಟ್ರಾನಿಕ್ಸ್ ದೈತ್ಯ ಸ್ಯಾಮ್‌ಸಂಗ್ ಮಗದೊಂದು ಅತ್ಯಾಕರ್ಷಕ ಗ್ಯಾಲಕ್ಸಿ ಎಸ್10 ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಬಲ್ಲ ಮೂಲಗಳ ಪ್ರಕಾರ ಬಹುನಿರೀಕ್ಷಿತ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್10, ಮುಂದಿನ ತಿಂಗಳಲ್ಲಿ ಮಾರುಕಟ್ಟೆ ಪ್ರವೇಶ ಪಡೆಯಲಿದೆ.
Vijaya Karnataka Web samsung-galaxy-s10-01


ಫೆಬ್ರವರಿ 20ರಂದು ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಗ್ಯಾಲಕ್ಸಿ ಎಸ್10 ಲಗ್ಗೆಯಿಡಲಿದೆ. ಈ ಮೂಲಕ ಗ್ಯಾಲಕ್ಸಿ ಎಸ್ ಶ್ರೇಣಿಯ ಸ್ಮಾರ್ಟ್‌ಫೋನ್‌‌ಗಳಿಗೆ ದಶಕದ ಸಂಭ್ರಮಕ್ಕೆ ಭಾರಿ ಸಿದ್ಧತೆಯನ್ನು ನಡೆಸಿದೆ.

ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ ಮೂರು ವೆರಿಯಂಟ್‌ಗಳು ಬಿಡುಗಡೆಯಾಗಲಿದೆ. ಅವುಗಳೆಂದರೆ ಎಸ್10 ಲೈಟ್, ಎಸ್10 ಮತ್ತು ಎಸ್10 ಪ್ಲಸ್.

ಇದೇ ವೇಳೆಯಲ್ಲಿ ಸ್ಯಾಮ್‌ಸಂಗ್ ಎಸ್10 ಸ್ಮಾರ್ಟ್‌ಫೋನ್‌ನ 5ಜಿ ಆವೃತ್ತಿಯನ್ನು ಪರಿಚಯಿಸುವ ಗುರಿ ಹೊಂದಿದೆ.

ಪಂಚ್-ಹೋಲ್ ಡಿಸ್‌ಪ್ಲೇ ಮಗದೊಂದು ವೈಶಿಷ್ಟ್ಯವಾಗಿರಲಿದೆ. ಇದನ್ನು ಸಂಸ್ಥೆಯು ಇನ್ಪಿನಿಟಿ-ಒ-ಡಿಸ್‌ಪ್ಲೇ ಎಂಬುದಾಗಿ ವಿಶ್ಲೇಷಿಸಲಿದೆ. ಡಿಸ್‌ಪ್ಲೇನಲ್ಲಿ ಕ್ಯಾಮೆರಾಗೆ ಮಾತ್ರ ಜಾಗವಿರುವುದರಿಂದ ಅತಿ ಕಡಿಮೆ ಬಿಝೆಲ್ ಬಳಕೆ ಮಾಡಲಾಗಿದೆ.

ಇನ್ನು ಅಮೆರಿಕದಲ್ಲಿ ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸಸರ್ ಹಾಗೂ ಭಾರತದಲ್ಲಿ Exynos 9820 ಪ್ರೊಸೆಸರ್ ಮತ್ತು OneUI ತಳಹದಿಯ ಆಂಡ್ರಾಯ್ಡ್ 9 ಪೈ ಆಪರೇಟಿಂಗ್ ಸಿಸ್ಟಂ ಬಳಕೆಯಾಗುವ ಸಾಧ್ಯತೆಯಿದೆ.

ಏತನ್ಮಧ್ಯೆ 5ಜಿ ಬೆಂಬಲಿತ ಗ್ಯಾಲಕ್ಸಿ ಎಸ್10, ಬೃಹತ್ತಾದ 6.7 ಇಂಚುಗಳ ಡಿಸ್‌ಪ್ಲೇ ಜತೆ ಹಿಂದುಗಡೆ ನಾಲ್ಕು ಕ್ಯಾಮೆರಾಗಳು ಇತ್ಯಾದಿ ವಿಶಿಷ್ಟತೆಯನ್ನು ಒಳಗೊಂಡಿರಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌