ಆ್ಯಪ್ನಗರ

Samsung Galaxy Z Fold 3: ಮೂರು ಮಡಚಬಲ್ಲ ಸ್ಕ್ರೀನ್ ಸಹಿತ ಸ್ಯಾಮ್‌ಸಂಗ್ ಹೊಸ ಗ್ಯಾಲಕ್ಸಿ

ಸ್ಯಾಮ್‌ಸಂಗ್, ಹೊಸದಾಗಿ ಗ್ಯಾಲಕ್ಸಿ ಮಡಚಬಲ್ಲ ಫೋನ್ ಸರಣಿ ಬಿಡುಗಡೆ ಮಾಡಿದ ಬಳಿಕ, ಇತರ ಹಲವು ಕಂಪನಿಗಳು ಕೂಡ ಫೋಲ್ಡಿಂಗ್ ವಿನ್ಯಾಸದ ಫೋನ್ ಬಿಡುಗಡೆ ಮಾಡಲು ಮುಂದಾಗಿವೆ.

Times Now 30 Oct 2020, 10:48 pm
ಸ್ಯಾಮ್‌ಸಂಗ್ ನೂತನ ಗ್ಯಾಲಕ್ಸಿ ಫೋನ್ ಸರಣಿಯಲ್ಲಿ ಗ್ಯಾಲಕ್ಸಿ Z ಫೋಲ್ಡ್ 3 ಫೋನ್ ಶೀಘ್ರದಲ್ಲಿ ಬಿಡುಗಡೆಯಾಗಲಿದ್ದು, ಹೊಸ ಫೋನ್‌ನಲ್ಲಿ 3 ಮಡಚಬಲ್ಲ ಸ್ಕ್ರೀನ್ ಇರಲಿದೆ ಎಂದು ವರದಿಯಾಗಿದೆ. ಜತೆಗೆ ಸ್ಲೈಡ್ ಮಾಡಬಲ್ಲ ಸ್ಕ್ರೀನ್ ಕೂಡ ಇರಲಿದೆ ಎನ್ನಲಾಗಿದೆ.
Vijaya Karnataka Web Samsung Galaxy Z Fold 3
Samsung Galaxy Z Fold 3


ಹೊಸ ವಿನ್ಯಾಸ ಸೋರಿಕೆ
ಸ್ಯಾಮ್‌ಸಂಗ್ ನೂತನ ಗ್ಯಾಲಕ್ಸಿ Z Fold 3 ಫೋನ್ ಸೋರಿಕೆಯಾಗಿರುವ ವಿನ್ಯಾಸ ಗಮನಿಸಿದರೆ ಅದರಲ್ಲಿ ಇರುವಂತೆ ಮೂರು ಸ್ಕ್ರೀನ್ ಮತ್ತು ಸ್ಲೈಡ್ ಮಾಡಬಲ್ಲ ಕೀಬೋರ್ಡ್ ಇರಲಿದೆ. ಈ ಕುರಿತು ಲೆಟ್ಸ್‌ಗೋಡಿಜಿಟಲ್ ವರದಿ ಮಾಡಿದ್ದು, ಸ್ಯಾಮ್‌ಸಂಗ್ ಹೊಸ ಸಾಧ್ಯತೆಗಳನ್ನು ಸ್ಮಾರ್ಟ್‌ಫೋನ್‌ಗಳಲ್ಲಿ ಪರಿಚಯಿಸಲಿದೆ ಎನ್ನಲಾಗಿದೆ.

ಗ್ಯಾಲಕ್ಸಿ Z ಫೋಲ್ಡ್
ಸ್ಯಾಮ್‌ಸಂಗ್ ಮಡಚಬಲ್ಲ ಫೋನ್ ಸರಣಿಯಲ್ಲಿ ಈಗಾಗಲೇ ಎರಡು ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಪೈಕಿ ಗ್ಯಾಲಕ್ಸಿ ಝೆಡ್ ಫೋಲ್ಡ್ 2 ಹೆಚ್ಚು ಆಕರ್ಷಕ ವಿನ್ಯಾಸ ಹೊಂದಿದೆ. ಫೋಲ್ಡ್ ಸರಣಿಯಲ್ಲಿ ಮುಂದೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಝೆಡ್ ಫೋಲ್ಡ್ 3 ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಲಾಗುತ್ತದೆ.

SAI App: ವಾಟ್ಸಪ್ ಮಾದರಿಯ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ ಭಾರತೀಯ ಸೇನೆ

ಮಾರುಕಟ್ಟೆಗೆ ಮಾದರಿಯಾದ ಸ್ಯಾಮ್‌ಸಂಗ್
ಸ್ಯಾಮ್‌ಸಂಗ್, ಹೊಸದಾಗಿ ಗ್ಯಾಲಕ್ಸಿ ಮಡಚಬಲ್ಲ ಫೋನ್ ಸರಣಿ ಬಿಡುಗಡೆ ಮಾಡಿದ ಬಳಿಕ, ಇತರ ಹಲವು ಕಂಪನಿಗಳು ಕೂಡ ಫೋಲ್ಡಿಂಗ್ ವಿನ್ಯಾಸದ ಫೋನ್ ಬಿಡುಗಡೆ ಮಾಡಲು ಮುಂದಾಗಿವೆ. ಹೀಗಾಗಿ ಹೊಸ ವಿನ್ಯಾಸ ಪರಿಚಯಿಸಿ ಸ್ಯಾಮ್‌ಸಂಗ್ ನೂತನ ಆಯ್ಕೆಯನ್ನು ಗ್ರಾಹಕರಿಗೆ ನೀಡುತ್ತಿದೆ.

iPhone 12 Pro: ಹೊಸ ಸರಣಿಯ ಆ್ಯಪಲ್ ಐಫೋನ್ ದೇಶದಲ್ಲಿ ಮಾರಾಟ ಆರಂಭ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌