ಆ್ಯಪ್ನಗರ

Galaxy 10: ಕೈಗೆಟುಕುವ ದರದಲ್ಲಿ ಸ್ಯಾಮ್‌ಸಂಗ್ ದುಬಾರಿ ಫೋನ್‌

ದೇಶದ ಪ್ರಮುಖ ಸ್ಮಾರ್ಟ್‌ಫೋನ್ ಕಂಪನಿ ಸ್ಯಾಮ್‌ಸಂಗ್ ಪ್ರಸ್ತುತ ಮಾರುಕಟ್ಟೆಯಲ್ಲಿನ ಸ್ಪರ್ಧೆಗೆ ಅನುಗುಣವಾಗಿ ವಿವಿಧ ಫೋನ್ ಬಿಡುಗಡೆ ಮಾಡುತ್ತಿದೆ. ದುಬಾರಿ ಮಾದರಿಯ ಆವೃತ್ತಿಯನ್ನು ಹೋಲುವ, ಕಡಿಮೆ ದರದ ಫೋನ್ ಪರಿಚಯಿಸಲು ಸ್ಯಾಮ್‌ಸಂಗ್ ಮುಂದಾಗಿದೆ.

TNN & Agencies 14 Oct 2019, 9:42 am
ಸ್ಯಾಮ್‌ಸಂಗ್‌ ತನ್ನ ಅತ್ಯಂತ ದುಬಾರಿ ಸ್ಮಾರ್ಟ್‌ಫೋನ್‌ಗಳ ಅಗ್ಗದ ಆವೃತ್ತಿಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ. ಈಗಾಗಲೇ ಸ್ಯಾಮ್‌ಸಂಗ್‌ ಅಂದಾಜು 80 ಸಾವಿರ ರೂಪಾಯಿ ಮೌಲ್ಯದ ಗ್ಯಾಲಕ್ಸಿ ನೋಟ್‌ ಪ್ಲಸ್‌ ಮತ್ತು ಗ್ಯಾಲಕ್ಸಿ 10 ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.
Vijaya Karnataka Web Samsung


ಇದೀಗ ಈ ದುಬಾರಿ ಫೋನ್‌ಗಳ ಅಗ್ಗದ ಆವೃತ್ತಿಯಾಗಿ ಗ್ಯಾಲಕ್ಸಿ ನೋಟ್‌ 10 ಲೈಟ್‌ ಫೋನ್‌ಗಳು ಮಾರುಕಟ್ಟೆಗೆ ಬರುವ ಸಾಧ್ಯತೆಗಳಿವೆ. ಆದರೆ, ಈ ಬಗ್ಗೆ ಇನ್ನೂ ಘೋಷಣೆಯಾಗಿಲ್ಲ. ಹೊಸ ಫೋನ್‌ಗಳನ್ನು ಸ್ಯಾಮ್‌ಸಂಗ್‌ ಸಾಮಾನ್ಯವಾಗಿ ಫೆಬ್ರವರಿಯಲ್ಲಿ ಘೋಷಿಸುತ್ತದೆ.

ಕೆಂಪು ಮತ್ತು ಕಪ್ಪು ಬಣ್ಣದ ನೋಟ್‌ 10 ಲೈಟ್‌ ಫೋನ್‌ ಅನ್ನು ಯುರೋಪ್‌ನಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈ ಹೊಸ ಫೋನ್‌ ಕೈಗೆಟುಕುವ ದೊರೆಯಲಿದೆ ಎನ್ನಲಾಗುತ್ತಿದೆಯಾದರೂ, ಎಷ್ಟು ಬೆಲೆ ನಿಗದಿ ಮಾಡಲಿದೆ ಎಂಬುದು ಇನ್ನೂ ಗೊತ್ತಾಗಿಲ್ಲ.

ಭಾರತವು ಸೇರಿದಂತೆ ಹಲವು ರಾಷ್ಟ್ರಗಳಲ್ಲಿಸ್ಯಾಮ್‌ಸಂಗ್‌ ಮಾರುಕಟ್ಟೆಯಲ್ಲಿ ತನ್ನದೇ ಪಾಲು ಹೊಂದಿದೆ. ಅಂಡ್ರಾಯ್ಡ್ ಸ್ಮಾರ್ಟ್‌ಫೋನ್ ಮಾರುಕಟ್ಟೆ ಗರಿಷ್ಠ ಸ್ಪರ್ಧೆ ಹೊಂದಿದ್ದು, ದೇಶದಲ್ಲಿ ಅತ್ಯಂತ ಹೆಚ್ಚಿನ ಫೋನ್‌ಗಳನ್ನು ಸ್ಯಾಮ್‌ಸಂಗ್ ಮಾರಾಟ ಮಾಡುತ್ತದೆ.

ಹೀಗಾಗಿ ಮಧ್ಯಮ ಮತ್ತು ಬಜೆಟ್ ಸರಣಿಯಲ್ಲಿ ಫೋನ್ ಕೊಳ್ಳುವ ಗ್ರಾಹಕರನ್ನು ಸೆಳೆಯಲು ಸ್ಯಾಮ್‌ಸಂಗ್ ಮುಂದಾಗಿದ್ದು, ಕಡಿಮೆ ಬೆಲೆಗೆ ಆಕರ್ಷಕ ವಿನ್ಯಾಸದ ಗ್ಯಾಲಕ್ಸಿ ಫೋನ್ ಪರಿಚಯಿಸುವ ತಂತ್ರಕ್ಕೆ ಮುಂದಾಗಿದೆ.

Big Diwali Sale: ಫ್ಲಿಪ್‌ಕಾರ್ಟ್ ದೀಪಾವಳಿ ಆಫರ್ ಸೇಲ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌