ಆ್ಯಪ್ನಗರ

Samsung: ಸ್ಮಾರ್ಟ್‌ಫೋನ್‌ಗಳಿಗೆ 64 ಎಂಪಿ ಕ್ಯಾಮೆರಾ!

ಸ್ಯಾಮ್‌ಸಂಗ್ ಕಂಪನಿ ಕೂಡ ಈ ವಿಷಯದಲ್ಲಿ ತನ್ನ ಫೋನ್‌ಗಳನ್ನು ಮೇಲ್ದರ್ಜೆಗೇರಿಸುತ್ತಿದೆ. ಕಳೆದ ವರ್ಷ ಕಂಪನಿ 48ಎಂಪಿ ಐಎಸ್‌ಒ ಸೆಲ್‌ ಕ್ಯಾಮೆರಾ ಸೆನ್ಸರ್‌ಗಳನ್ನು ಪರಿಚಯಸಿತ್ತು.

Agencies 13 May 2019, 2:30 pm
ಸ್ಮಾರ್ಟ್‌ಫೋನ್‌ ಫೋಟೊಗ್ರಫಿ ವಿಷಯದಲ್ಲಿ ಗೂಗಲ್‌ ಪಿಕ್ಸೆಲ್‌ ಮತ್ತು ಐಫೋನ್‌ಗಳು ಮುಂಚೂಣಿಯಲ್ಲಿವೆ ಎಂಬುದರಲ್ಲಿ ಯಾವುದೇ ಅನುಮಾವಿಲ್ಲ.
Vijaya Karnataka Web samsung


ಆದರೆ, ಇದೀಗ ಸ್ಯಾಮ್‌ಸಂಗ್ ಕಂಪನಿ ಕೂಡ ಈ ವಿಷಯದಲ್ಲಿ ತನ್ನ ಫೋನ್‌ಗಳನ್ನು ಮೇಲ್ದರ್ಜೆಗೇರಿಸುತ್ತಿದೆ. ಕಳೆದ ವರ್ಷ ಕಂಪನಿ 48ಎಂಪಿ ಐಎಸ್‌ಒ ಸೆಲ್‌ ಕ್ಯಾಮೆರಾ ಸೆನ್ಸರ್‌ಗಳನ್ನು ಪರಿಚಯಸಿತ್ತು.

ಇದೀಗ ತನ್ನ ಸ್ಮಾರ್ಟ್‌ಫೋನ್‌ಗಳಿಗೆ 64 ಎಂಪಿ ಕ್ಯಾಮೆರಾ ಅಳವಡಿಸಲು ಮುಂದಾಗಿದೆ. ಈ ಹಿಂದಿನಂತೆ, 64 ಎಂಪಿ ಐಎಸ್‌ಒ ಸೆಲ್‌ ಬ್ರೈಟ್‌ ಜಿಡಬ್ಲ್ಯೂ 1 0.8 ಯುಎಂ ಪಿಕ್ಸೆಲ್‌ ಗಾತ್ರ ಇಮೇಜ್‌ಗಳಿಗೆ ಸಪೋರ್ಟ್‌ ಮಾಡಲಿದೆ.

ಸ್ಯಾಮ್‌ಸಂಗ್ನ ಟೆಟ್ರಾಸೆಲ್‌ ತಂತ್ರಜ್ಞಾನವು ಕ್ರಿಸ್ಪ್‌ ಮತ್ತು ಬ್ರೈಟ್‌ ಆದ 16ಎಂಪಿ ಗಾತ್ರದ ಇಮೇಜ್‌ಗಳ ತಯಾರಿಕೆಗೆ ನೆರವು ನೀಡಲಿದೆ. ಅಂದರೆ, ಸೆರೆ ಹಿಡಿಯಲಾದ ಫೋಟೊಗಳು ಇನ್ನೂ ಹೆಚ್ಚಿನ ವಿವರಗಳನ್ನು ಒಳಗೊಳ್ಳಲಿವೆ ಮತ್ತು ಹೆಚ್ಚು ಸ್ಪಷ್ಟವಾಗಿರಲಿವೆ.

100 ಡೆಸಿಬಲ್‌(ಡಿಬಿ)ವರೆಗಿನ ರಿಯಲ್‌ ಟೈಮ್‌ ಹೈ ಡೈನಾಮಿಕ್‌ ರೇಂಜ್‌(ಎಚ್‌ಡಿಆರ್‌)ಗೆ ಡಿಡಬ್ಲ್ಯೂ1 ಸೆನ್ಸರ್‌ಗಳು ಸಪೋರ್ಟ್‌ ಮಾಡಲಿವೆ ಎಂದು ಕಂಪನಿ ಹೇಳಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌