ಆ್ಯಪ್ನಗರ

Festival Sale: ಸಂಗೀತಾದಿಂದ ಹಬ್ಬಕ್ಕೆ ಸ್ಪೆಷಲ್‌ ಆಫರ್‌

ಹಬ್ಬದ ಅವಧಿಯಲ್ಲಿ ಗ್ರಾಹಕರನ್ನು ಸೆಳೆಯಲು ವಿಶೇಷ ಆಫರ್‌ಗಳನ್ನು ಸ್ಮಾರ್ಟ್‌ಫೋನ್ ಮೇಲೆ ಸಂಗೀತಾ ನೀಡುತ್ತಿದೆ. ಹೊಸ ಖರೀದಿಗೆ ವಿವಿಧ ಕೊಡುಗೆಗಳು ಸಂಗೀತಾದಲ್ಲಿ ದೊರೆಯುತ್ತಿವೆ.

Vijaya Karnataka 3 Oct 2019, 10:30 am
ಹಬ್ಬದ ಜಮಾನವು ಈಗಷ್ಟೆ ಆರಂಭವಾಗಿದ್ದು, ನಾನಾ ಬ್ರಾಂಡ್‌ಗಳು ಅನೇಕ ಉತ್ಪನ್ನಗಳನ್ನು ಮುಂದಿಡುತ್ತಿವೆ. ಆನ್‌ಲೈನ್‌ ಅಥವಾ ಆಫ್‌ಲೈನ್‌ ಯಾವುದೇ ಆಗಲಿ, ಆಫರ್‌ಗಳ ಭರಾಟೆಯಲ್ಲಿಯಾವುದು ಸೂಕ್ತ ಅನ್ನುವ ಗೊಂದಲ ಸಹಜ. ಗ್ರಾಹಕರ ಹಬ್ಬದ ಉತ್ಸಾಹವನ್ನು ಹೆಚ್ಚಿಸುವ ನಿಟ್ಟಿನಲ್ಲಿದೇಶದ ಮುಂಚೂಣಿಯಲ್ಲಿರುವ ಮೊಬೈಲ್‌ ರೀಟೇಲರ್‌ ಸಂಗೀತಾ ಮೊಬೈಲ್ಸ್‌ ಇದೀಗ ವಿಶೇಷ ಆಫರ್‌ಗಳನ್ನು ಹೊತ್ತು ತಂದಿದೆ. ಗ್ರಾಹಕರು ಅಚ್ಚರಿಯಾಗುವಂತೆ ಸ್ಮಾರ್ಟ್‌ಫೋನ್‌ಗಳ ದರಗಳನ್ನು ಮುಂದಿಟ್ಟಿದೆ.
Vijaya Karnataka Web Offer


ಪ್ರತಿ ಸ್ಮಾರ್ಟ್‌ಫೋನ್‌ ಖರೀದಿಗೆ ಗ್ರಾಹಕರಿಗೆ ಒಂದು ಇಎಂಐ ಉಚಿತದ ಕೊಡುಗೆಯನ್ನು ನೀಡಲಾಗಿದೆ. ಅಲ್ಲದೇ, ಜಿಯೋದಿಂದ ಉಚಿತ ಸಿಮ್‌ ಕಾರ್ಡ್‌ ಮತ್ತು 8,400 ರೂ. ಮೌಲ್ಯದ ಬಂಪರ್‌ ಅನುಕೂಲಗಳನ್ನೂ ನೀಡಲಾಗುತ್ತಿದೆ. ಬಸ್‌/ವಿಮಾನದ ಟಿಕೆಟ್‌/ ಹೋಟೆಲ್‌ ವಾಸ್ತವ್ಯಕ್ಕಾಗಿ 2,650 ರೂ. ಮೌಲ್ಯದ ಪ್ರಯೋಜವನ್ನು ಈಸ್‌ಮೈಟ್ರಿಪ್‌ ಮೂಲಕ ಒದಗಿಸಲಾಗುತ್ತಿದೆ.

UPI Payment: ಆ್ಯಪ್‌ ಬಳಸುವಾಗ ಎಚ್ಚರಿಕೆಯಿರಲಿ

ಸಂಗೀತದಲ್ಲಿಖರೀದಿ ಬಳಿಕ, ಮುಂದಿನ ಖರೀದಿ ಸಂದರ್ಭದಲ್ಲಿ3000 ರೂ. ರಿಯಾಯಿತಿಯೂ ಸಿಗಲಿದೆ. ಅಲ್ಲದೇ, 2,750 ರೂ.ಮೌಲ್ಯದ ಇತರೆ ಪ್ರಯೋಜನಗಳೂ ಇವೆ. ಇಲ್ಲಿಸ್ಮಾರ್ಟ್‌ಫೋನ್‌ ಖರೀದಿಸುವ ಗ್ರಾಹಕರಿಗೆ 6 ತಿಂಗಳ ಪರದೆಯ ರೀಪ್ಲೇಸ್‌ಮೆಂಟ್‌, 12 ತಿಂಗಳ ನಿಶ್ಚಿತ ಬೈಬ್ಯಾಕ್‌ ಮತ್ತು 30 ದಿನಗಳ ದರ ಇಳಿಕೆಯ ರಕ್ಷೆ ಮತ್ತಿತರ ಅನುಕೂಲಗಳಿವೆ.

ಈ ಎಲ್ಲಅದ್ಭುತ ಕೊಡುಗೆಗಳೊಂದಿಗೆ, ಹಬ್ಬದ ಸವಿಯನ್ನು ಸಂಗೀತ ಮೊಬೈಲ್‌ ವೃದ್ಧಿಗೊಳಿಸುತ್ತಿದೆ ಎಂದು ಪ್ರಕಟಣೆಯಲ್ಲಿಹೇಳಲಾಗಿದೆ. ದೇಶದ 9 ರಾಜ್ಯಗಳಲ್ಲಿ600 ಶೋರೂಮ್‌ಗಳನ್ನು ಸಂಗೀತಾ ಮೊಬೈಲ್ಸ್‌ ಹೊಂದಿದೆ.

YouTube: ವೀಡಿಯೊದಿಂದ ಆಡಿಯೋ ಪಡೆಯುವುದು ಸುಲಭ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌