ಆ್ಯಪ್ನಗರ

WhatsCut Pro: ಮಂಗಳೂರಿನ ಯುವಕರ ಆ್ಯಪ್‌ಗೆ ಭರ್ಜರಿ ಬೇಡಿಕೆ

ವಾಟ್ಸ್‌ಕಟ್ ಪ್ರೊ ಆ್ಯಪ್‌ ವಿವಿಧ ರೀತಿಯ ಆಕರ್ಷಕ ಫೀಚರ್‌ಗಳನ್ನು ಹೊಂದಿದ್ದು, ಅಧಿಕ ಸಂಖ್ಯೆಯ ಬಳಕೆದಾರರನ್ನು ಆಕರ್ಷಿಸುತ್ತಿದೆ.

TIMESOFINDIA.COM 13 Jul 2020, 5:08 pm
ದೇಶದಲ್ಲಿ ಚೀನಾ ಕಂಪನಿಗಳ 59 ಆ್ಯಪ್‌ಗಳನ್ನು ನಿಷೇಧಿಸಿರುವ ಬೆನ್ನಲ್ಲೇ ದೇಸಿ ಆ್ಯಪ್‌ಗಳಿಗೆ ಭರ್ಜರಿ ಬೇಡಿಕೆ ಕಂಡುಬಂದಿದೆ. ಟಿಕ್‌ಟಾಕ್‌ ನಿಷೇಧವಾಗಿರುವುದು ಮತ್ತು ಅದಕ್ಕೆ ಪೂರಕ ಫೀಚರ್ ಹೊಂದಿರುವ ಆ್ಯಪ್‌ಗಳಿಗೆ ಬೇಡಿಕೆ ಇರುವುದು ಕೂಡ ಇದಕ್ಕೆ ಕಾರಣವಾಗಿದೆ. ಇದರ ನಡುವೆಯೇ ಮಂಗಳೂರಿನ ಮೂವರು ಯುವಕರ ತಂಡ ಅಭವೃದ್ಧಿಪಡಿಸಿರುವ ವಾಟ್ಸ್‌ಕಟ್ ಪ್ರೊ ಎನ್ನುವ ಆ್ಯಪ್‌ ಗೂಗಲ್ ಪ್ಲೇ ಸ್ಟೋರ್‌ನಲ್ಲಿ 15 ಲಕ್ಷಕ್ಕೂ ಅಧಿಕ ಡೌನ್‌ಲೋಡ್ ಕಂಡಿದೆ. ಜತೆಗೆ ಟಿಕ್‌ಟಾಕ್ ನಿಷೇಧದ ನಂತರ ಆ್ಯಪ್‌ ಡೌನ್‌ಲೋಡ್ ಮತ್ತು ಬಳಕೆ ಕೂಡ ಹೆಚ್ಚಳವಾಗಿದೆ.
Vijaya Karnataka Web Whatscut Pro
WhatsCut Pro


ಪಿಎ ಇಂಜಿನಿಯರಿಂಗ್ ಕಾಲೇಜ್‌ನ ವಿದ್ಯಾರ್ಥಿಗಳಾಗಿದ್ದ ರಿಝ್ವಾಬ್ ಸಾದತ್ ಟಿ ಪಿ, ರಮೀಸ್ ಪಿ ಮತ್ತು ಸುಶೀನ್ ಪಿ ವಿ ಎಂಬವರು ಮುಂಬೈನ ಎಸ್‌ಪಿ ಜೈನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಮತ್ತು ರಿಸರ್ಚ್‌ನ ವಿಕಾಸ್ ಶ್ರೀವಾಸ್ತವ ಸಹಾಯದಿಂದ ವಾಟ್ಸ್‌ಕಟ್ ಪ್ರೊ ಆ್ಯಪ್‌ ಅಭಿವೃದ್ಧಿಪಡಿಸಿದ್ದಾರೆ.

2017ರ ಅಕ್ಟೋಬರ್‌ನಲ್ಲಿ ವಾಟ್ಸ್‌ಕಟ್ ಪ್ರೊ ಆ್ಯಪ್‌ ಬಿಡುಗಡೆಯಾಗಿದ್ದು, ವಿಡಿಯೋ ರಚಿಸುವುದು, ಆಡಿಯೋ ಸ್ಟೋರಿ, ಇತ್ಯಾದಿ ಆಕರ್ಷಕ ಫೀಚರ್‌ಗಳನ್ನು ಹೊಂದಿದೆ.

ಜತೆಗೆ ಚೀನಾ ಆ್ಯಪ್‌ ನಿಷೇಧದ ಬಳಿಕ ಹೆಚ್ಚಿನ ಜನರು ದೇಸಿ ಆ್ಯಪ್‌ ಕುರಿತು ಒಲವು ತೋರಿಸುತ್ತಿದ್ದಾರೆ. ವಾಟ್ಸ್‌ಕಟ್ ಪ್ರೊ ಆ್ಯಪ್‌ ವಿವಿಧ ರೀತಿಯ ಆಕರ್ಷಕ ಫೀಚರ್‌ಗಳನ್ನು ಹೊಂದಿದ್ದು, ಅಧಿಕ ಸಂಖ್ಯೆಯ ಬಳಕೆದಾರರನ್ನು ಆಕರ್ಷಿಸುತ್ತಿದೆ.

China Apps Ban: ಚೀನಾದಲ್ಲಿ ಯಾವೆಲ್ಲ ಆ್ಯಪ್, ವೆಬ್‌ಸೈಟ್ ನಿಷೇಧವಾಗಿದೆ ಗೊತ್ತಾ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌