ಆ್ಯಪ್ನಗರ

ನಿಮ್ಮ ಫೋನಿನಲ್ಲೂ ಇರಬಹುದು ಭಯಾನಕ 'ಸೊವಾ' ವೈರಸ್!..ಕೂಡಲೇ ಈ ಕೆಲಸ ಮಾಡಿ!

ಇಂದಿನ ಲೇಖನದಲ್ಲಿ ನಿಮ್ಮ ಸ್ಮಾರ್ಟ್‌ಫೋನ್‌ಗೆ ಕೂಡ ಮಾಲ್ವೇರ್ ತಗುಲಿದ್ದರೆ ಪತ್ತೆ ಮಾಡುವುದು ಹೇಗೆ?, ನಿಮ್ಮ ಸ್ಮಾರ್ಟ್‌ಫೋನ್‌ಗೆ ವೈರಸ್ ತಗುಲಿದ್ದರೆ ಏನು ಮಾಡಬೇಕು?, ಮತ್ತು ನಿಮ್ಮ ಫೋನ್‌ನಲ್ಲಿ ವೈರಸ್ ಬರದಂತೆ ತಡೆಯುವುದು ಹೇಗೆ? ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯೋಣ ಬನ್ನಿ..

Vijaya Karnataka Web 17 Sep 2022, 10:19 am
ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಷನ್‌ಗಳಿಂದ ಸೂಕ್ಮ ಮಾಹಿತಿ ಕದಿಯುವಂತಹ ಸೋವಾ (sova) ಎಂಬ ಹೊಸ ವೈರಸ್ ಒಂದು ಭಾರತೀಯ ಆಂಡ್ರಾಯ್ಡ್ ಬಳಕೆದಾರರನ್ನು ಗುರಿಯಾಗಿಸಿಕೊಂಡಿದೆ ಎಂಬ ಶಾಕಿಂಗ್ ಸುದ್ದಿಯೊಂದು ಇತ್ತೀಚಿಗಷ್ಟೇ ಹೊರಬಿದ್ದಿದೆ. ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಬ್ಯಾಂಕಿಂಗ್ ಅಪ್ಲಿಕೇಷನ್‌ಗಳು ಸೇರಿದಂತೆ ಇತರೆ ಮಾಹಿತಿಗಳನ್ನು ಗ್ರಾಹಕರಿಗೆ ಗೊತ್ತೇ ಆಗದಂತೆ ಕದಿಯಬಲ್ಲ ಸಾಮರ್ಥ್ಯ ಈ ವೈರಸ್‌ಗೆ ಇದ್ದು, ಗ್ರಾಹಕರು ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಷನ್‌ಗಳನ್ನು ಬಳಸುವಾಗ ಈ ವೈರಸ್ ಗ್ರಾಹಕರ ಎಲ್ಲಾ ವಿವರಗಳನ್ನು ಕದಿಯುತ್ತದೆ. ಈ ಮೂಲಕ ಅವರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಲಿದೆ. ಬ್ಯಾಂಕಿಗ್ ಮಾತ್ರವಲ್ಲದೇ, ಆದಾಯ ಮೂಲಗಳನ್ನು ಹೊಂದಿರುವ ಇನ್ನಿತರ ಸುಮಾರು 200ಕ್ಕೂ ಅಪ್ಲಿಕೇಷನ್‌ಗಳ ಮೇಲೆ ಈ ವೈರಸ್ ದಾಳಿ ಮಾಡಲು ಸನ್ನದ್ದವಾಗಿದೆ ಎಂದು ಕೇಂದ್ರ ಸರ್ಕಾರದ ಸೈಬರ್ ಭದ್ರತಾ ಸಂಸ್ಥೆ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಸಿಸ್ಟಮ್ (CERT-In) ಎಚ್ಚರಿಕೆ ನೀಡಿದೆ. .
Vijaya Karnataka Web ನಿಮ್ಮ ಫೋನಿನಲ್ಲೂ ಇರಬಹುದು ಈ ಭಯಾನಕ ಸೊವಾ ವೈರಸ್!..ಕೂಡಲೇ ಕೆಲಸ ಮಾಡಿ!


ಈ ಸೊವಾ ವೈರಸ್ ಸಾಕಷ್ಟು ಸುಧಾರಿತ ತಂತ್ರಜ್ಞಾನವನ್ನು ಹೊಂದಿದ್ದು, ಜನರಿಗೆ ಗೊತ್ತೇ ಆಗದಂತೆ ಅವರ ಮೊಬೈಲ್ ಒಳಗೆ ನುಸುಳುತ್ತದೆ. ಮತ್ತು ಮೊಬೈಲ್‌ನಲ್ಲಿ ಬಳಕೆದಾರನಿಗೆ ಕಾಣದಂತೆ ಸೂಕ್ಮ ಮಾಹಿತಿಗಳನ್ನು ಕದಿಯಲು ಶಕ್ತವಾಗಿದೆ. ಇದು ಮಾಹಿತಿಯನ್ನು ಕದಿಯುವ ರೀತಿ ಕೂಡ ಸಾಕಷ್ಟು ಭಯಾನಕವಾಗಿದೆ. ಈ ವೈರಸ್ ಸೋವಾ (sova) ವೈರಸ್ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಬಹುದು, ಮೊಬೈಲ್ ಕಾರ್ಯಗಳನ್ನು ಸ್ವೈಪ್ ಮಾಡಿ ನೋಡಬಹುದು, ವೆಬ್‌ಕ್ಯಾಮ್ ಮೂಲಕ ವಿಡಿಯೋ ಮಾಡಿಕೊಳ್ಳಬಹುದು. ಇಷ್ಟೇ ಅಲ್ಲದೇ,ನಿಮ್ಮ ಸಾಧನಗಳನ್ನು ಲಾಕ್ ಮಾಡಬಹುದು ಅಥವಾ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಎನ್‌ಕ್ರಿಪ್ಟ್ ಮಾಡಿಕೊಂಡು ನಿಮ್ಮಿಂದ ಹಣಕ್ಕೆ ಬೇಡಿಕೆ ಇಡಬಹುದು. ನಿಮ್ಮಿಂದ ಅವರಿಗೆ ಲಾಭವಾಗದಿದ್ದರೆ, ನಿಮ್ಮೆಲ್ಲಾ ವಿವರಗಳನ್ನು ಡಾರ್ಕ್ ವೆಬ್‌ನಲ್ಲಿ ಮಾರಾಟ ಮಾಡಿ ಆದಾಯವನ್ನು ಗಳಿಸಬಹುದು ಎಂದು CERT ಹೇಳಿದೆ. ಬಹುತೇಕ ಆಂಡ್ರಾಯ್ಡ್ ಟ್ರೋಜನ್‌ಗಳ ರೀತಿಯಲ್ಲೇ ಈ ವೈರಸ್ ಅನ್ನು ಎಸ್‌ಎಂಎಸ್‌ಗಳ ರೂಪದಲ್ಲಿ ಹೆಚ್ಚಾಗಿ ಮತ್ತು ಇನ್ನಿತರ ರೂಪಗಳಲ್ಲಿ ಹರಡಲಾಗುತ್ತಿದೆ ಎಂದು CERT ತಿಳಿಸಿದೆ.

ಹಾಗಾಗಿ, ಇಂದಿನ ಲೇಖನದಲ್ಲಿ ನಿಮ್ಮ ಸ್ಮಾರ್ಟ್‌ಫೋನ್‌ಗೆ ಕೂಡ ಮಾಲ್ವೇರ್ ತಗುಲಿದ್ದರೆ ಪತ್ತೆ ಮಾಡುವುದು ಹೇಗೆ?, ನಿಮ್ಮ ಸ್ಮಾರ್ಟ್‌ಫೋನ್‌ಗೆ ವೈರಸ್ ತಗುಲಿದ್ದರೆ ಏನು ಮಾಡಬೇಕು?, ಮತ್ತು ನಿಮ್ಮ ಫೋನ್‌ನಲ್ಲಿ ವೈರಸ್ ಬರದಂತೆ ತಡೆಯುವುದು ಹೇಗೆ? ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯೋಣ ಬನ್ನಿ..

ನಿಮ್ಮ ಸ್ಮಾರ್ಟ್‌ಫೋನ್‌ಗೆ ವೈರಸ್ ತಗುಲಿದ್ದರೆ ಪತ್ತೆ ಮಾಡುವುದು ಹೇಗೆ?
  • ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೀವು ಡೌನ್‌ಲೋಡ್ ಮಾಡದ ಅಪ್ಲಿಕೇಶನ್‌ಗಳು ಇನ್‌ಸ್ಟಾಲ್ ಆಗಿದ್ದರೆ ವೈರಸ್ ಅಟ್ಯಾಕ್ ಆಗಿರಬಹುದು.
  • ನೀವು ಹೆಚ್ಚು ಸಮಯ ನಿಮ್ಮ ಸ್ಮಾರ್ಟ್‌ಫೋನ್‌ ಬಳಸದಿದ್ದರೂ ಫೋನ್ ಬಿಸಿಯಾಗಿದ್ದರೆ ವೈರಸ್ ತಗುಲಿದೆ ಎಂದು ಹೇಳಬಹುದು.
  • ನಿಮ್ಮ ಡೇಟಾ ತುಂಬಾ ವೇಗವಾಗಿ ಖಾಲಿಯಾಗುತ್ತಿದ್ದು, ನಿಮ್ಮ ಸ್ಮಾರ್ಟ್‌ಫೋನ್‌ ಬ್ಯಾಟರಿ ಕೂಡ ಬೇಗನೆ ಖಾಲಿಯಾಗುತ್ತಿದ್ದರೆ ವೈರಸ್‌ ತಗುಲಿದೆ ಎಂದರ್ಥ.
  • ಒಂದು ವೇಳೆ ವೈರಸ್‌ ನಿಮ್ಮ ಸ್ಮಾರ್ಟ್‌ಫೋನ್‌ ಪ್ರವೇಶಿಸಿದ್ದರೆ ಅನಗತ್ಯ ಜಾಹಿರಾತುಗಳು ನಿಮ್ಮ ಫೋನ್‌ನಲ್ಲಿ ಕಾಣಿಸಿಕೊಳ್ಳಲಿವೆ.
  • ನಿಮ್ಮ ಫೋನ್ ಪಟ್ಟಿಯಲ್ಲಿರುವ ಸಂಪರ್ಕಗಳು ನಿಮ್ಮ ಫೋನಿನಿಂದ ಸ್ಪ್ಯಾಮ್ ಸಂದೇಶಗಳನ್ನು ಪಡೆಯುತ್ತುವೆ ಎಂದಾದರೆ.
ನಿಮ್ಮ ಸ್ಮಾರ್ಟ್‌ಫೋನ್‌ಗೆ ವೈರಸ್ ತಗುಲಿದ್ದರೆ ಏನು ಮಾಡಬೇಕು?
  • ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ತಕ್ಷಣವೇ ರೀಸೆಟ್ ಮಾಡಿಬಿಡಿ.
  • ನಿಮ್ಮ ಸ್ಮಾರ್ಟ್‌ಫೋನಿನ ಸಾಫ್ಟ್‌ವೇರ್ ಅನ್ನು ಶೀಘ್ರದಲ್ಲೇ ಅಪ್‌ಡೇಟ್ ಮಾಡಿ.
  • ಬ್ಯಾಂಕಿಂಗ್ ಮಾಹಿತಿಗಳು ಲೀಕ್ ಆಗಿರುವ ಅನುಮಾನ ಬಂದರೆ, ಶೀಘ್ರವೇ ಬ್ಯಾಂಕ್‌ ಖಾತೆಗಳನ್ನು ನಿಷ್ಕ್ರೀಯಗೊಳಿಸಿ.
  • ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಇರಬಹುದಾದ ವೈಯಕ್ತಿಕ ಮಾಹಿತಿಗಳನ್ನು ಡಿಲೀಟ್ ಮಾಡಿಬಿಡಿ.
ನಿಮ್ಮ ಸ್ಮಾರ್ಟ್‌ಫೋನ್‌ಗೆ ವೈರಸ್ ಬರದಂತೆ ತಡೆಯುವುದು ಹೇಗೆ?
  • ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್‌ನಂತಹ ಅಧಿಕೃತ ಆಪ್ ಸ್ಟೋರ್‌ಗಳ ಮೂಲಕವೇ ಆಪ್‌ಗಳನ್ನು ಡೌನ್‌ಲೋಡ್ ಮಾಡಿ.
  • ಅಶ್ಲೀಲ ವೆಬ್‌ಸೈಟ್‌ಗಳು ವೈರಸ್ ಹರಡುವಲ್ಲಿ ಸಿಂಹಪಾಲನ್ನು ಹೊಂದಿವೆ. ಇದರ ಬಗ್ಗೆ ಅರಿವಿರಲಿ.
  • ಅಜ್ಞಾತ ಮೂಲಗಳಿಂದ ದೃಡೀಕರೀಸಿದ ಅಪ್ಲಿಕೇಶನ್‌ಗಳನ್ನು ಎಂದಿಗೂ ಡೌನ್‌ಲೋಡ್ ಮಾಡಬೇಡಿ.
  • ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದಾಗ ನೀಡುವ ಅನುಮತಿಗಳ ಬಗ್ಗೆ ಎಚ್ಚರಿಕೆ ವಹಿಸಿ.
  • ನೀವು ಆಯಂಟಿ-ವೈರಸ್ ಅನ್ನು ಇನ್‌ಸ್ಟಾಲ್ ಮಾಡಿದರೆ ಒಳಿತು. ಆದರೆ ಅದು ಕೂಡ ವಿಶ್ವಾಸಾರ್ಹವಾಗಿರಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌