ಆ್ಯಪ್ನಗರ

ಸೋನಿ ಎಕ್ಸ್‌ಪೀರಿಯಾ ಎಕ್ಸ್‌ಝಡ್3 ಭರ್ಜರಿ ಎಂಟ್ರಿ

ಸೋನಿ ಸಂಸ್ಥೆಯು ಅತ್ಯಾಕರ್ಷಕ ಎಕ್ಸ್‌ಪೀರಿಯಾ ಎಕ್ಸ್‌ಝಡ್3 ಸ್ಮಾರ್ಟ್‌ಫೋನ್ ಪರಿಚಯಿಸಿದೆ. ಎಕ್ಸ್‌ಪೀರಿಯಾ ಎಕ್ಸ್‌ಝಡ್2 ಉತ್ತರಾಧಿಕಾರಿಯಾಗಲಿರುವ ನೂತನ ಸೋನಿ ಎಕ್ಸ್‌ಪೀರಿಯಾ ಎಕ್ಸ್‌ಝಡ್3 ಮಾದರಿಯು ಸ್ನ್ಯಾಪ್‌ಡ್ರಾಗನ್ 845 ಪ್ರೊಸೆಸರ್ ಹಾಗೂ ಆಂಡ್ರಾಯ್ಡ್ ಪೈ (Pie) ಆಪರೇಟಿಂಗ್ ಸಿಸ್ಟಂ ವೈಶಿಷ್ಟ್ಯವನ್ನು ಪಡೆದುಕೊಳ್ಳಲಿದೆ.

Gadgets Now 30 Aug 2018, 8:42 pm
ಹೊಸದಿಲ್ಲಿ: ಸೋನಿ ಸಂಸ್ಥೆಯು ಅತ್ಯಾಕರ್ಷಕ ಎಕ್ಸ್‌ಪೀರಿಯಾ ಎಕ್ಸ್‌ಝಡ್3 ಸ್ಮಾರ್ಟ್‌ಫೋನ್ ಪರಿಚಯಿಸಿದೆ. ಎಕ್ಸ್‌ಪೀರಿಯಾ ಎಕ್ಸ್‌ಝಡ್2 ಉತ್ತರಾಧಿಕಾರಿಯಾಗಲಿರುವ ನೂತನ ಸೋನಿ ಎಕ್ಸ್‌ಪೀರಿಯಾ ಎಕ್ಸ್‌ಝಡ್3 ಮಾದರಿಯು ಸ್ನ್ಯಾಪ್‌ಡ್ರಾಗನ್ 845 ಪ್ರೊಸೆಸರ್ ಹಾಗೂ ಆಂಡ್ರಾಯ್ಡ್ ಪೈ (Pie) ಆಪರೇಟಿಂಗ್ ಸಿಸ್ಟಂ ವೈಶಿಷ್ಟ್ಯವನ್ನು ಪಡೆದುಕೊಳ್ಳಲಿದೆ.
Vijaya Karnataka Web Sony-Xperia-XZ3


ಜರ್ಮನಿಯ ಬರ್ಲಿನ್‌ನಲ್ಲಿ ನಡೆದ ಐಎಫ್‌ಎ 2018 ಕನ್ಸೂಮರ್ ಎಲೆಕ್ಟ್ರಾನಿಕ್ಸ್ ಕಾರ್ಯಕ್ರಮದಲ್ಲಿ ಲಗ್ಗೆಯಿಟ್ಟಿರುವ ನೂತನ ಸೋನಿ ಎಕ್ಸ್‌ಪೀರಿಯಾ ಎಕ್ಸ್‌ಝಡ್3 ಬೆಲೆ ಇನ್ನಷ್ಟೇ ನಿಗದಿಯಾಗಬೇಕಿದ್ದು, ಸೆಪ್ಟೆಂಬರ್ ತಿಂಗಳಿಂದ ಆಯ್ದ ಮಾರುಕಟ್ಟೆಗಳಲ್ಲಿ ಲಭ್ಯವಾಗಲಿದೆ. ಇದರಂತೆ ಶೀಘ್ರದಲ್ಲೇ ಭಾರತವನ್ನು ಪ್ರವೇಶಿಸಲಿದೆ.

ವಿಶೇಷತೆಗಳು:
6 ಇಂಚುಗಳ QHD+ HDR OLED Triluminos ಡಿಸ್‌ಪ್ಲೇ,
ಕಾರ್ನಿಂಗ್ ಗ್ಲಾಸ್ 5 ರಕ್ಷಣೆ,
ಸ್ನ್ಯಾಪ್‌ಡ್ರಾಗನ್ 845 SoC ಪ್ರೊಸೆಸರ್,
IP65/68 ಜಲ ಮತ್ತು ಧೂಳು ನಿರೋಧಕ

ಸ್ಟೋರೆಜ್:
4GB RAM
64GB ಸ್ಟೋರೆಜ್,
512GB ವರೆಗೂ ವರ್ಧಿಸಬಹುದು(ಮೈಕ್ರೋ ಎಸ್‌ಡಿ ಕಾರ್ಡ್ ಲಗತ್ತಿಸಿ)

ಕ್ಯಾಮೆರಾ:
19MP ರಿಯರ್ ಕ್ಯಾಮೆರಾ,
Exmor RS ಸೆನ್ಸಾರ್ ( f/2.0 aperture)
960fps ಸೂಪರ್ ಸ್ಲೋ ಮೋಷನ್ ವೀಡಿಯೋ ಶೂಟಿಂಗ್,
FHD ಮತ್ತು HD,
13MP ಸೆಲ್ಫಿ ಫ್ರಂಟ್ ಕ್ಯಾಮೆರಾ
AI ಫೀಚರ್,

ಬ್ಯಾಟರಿ: 3330mAh, ಕ್ವಿಕ್ ಚಾರ್ಜ್ 3.0 ಮತ್ತು ಸ್ಮಾರ್ಟ್ ಸ್ಟಾಮಿನಾ ಮೋಡ್.
ಬಣ್ಣಗಳು: ಬ್ಲ್ಯಾಕ್, ವೈಟ್ ಸಿಲ್ವರ್, ಫೋರೆಸ್ಟ್ ಗ್ರೀನ್, ಬಾರ್ಡೆಕ್ಸ್ ರೆಡ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌