ಆ್ಯಪ್ನಗರ

Vodafone Idea: 251 ರೂ. ಪ್ರಿಪೇಯ್ಡ್ ರಿಚಾರ್ಜ್‌ ಪ್ಯಾಕ್ ಈಗ ರಾಜ್ಯದಲ್ಲೂ ಲಭ್ಯ..

ವೊಡಾಫೋನ್ ಐಡಿಯಾ ಹೊರತಂದಿರುವ ಈ ವಿಶೇಷ ಪ್ರಿಪೇಯ್ಡ್ ಪ್ಯಾಕ್, ಆರಂಭದಲ್ಲಿ ರಾಜ್ಯದ ಗ್ರಾಹಕರಿಗೆ ಲಭ್ಯವಿರಲಿಲ್ಲ. ಆದರೆ ಪ್ರಸ್ತುತ ರಾಜ್ಯದಲ್ಲೂ ವೊಡಾಫೋನ್ ಐಡಿಯಾ 251 ರೂ. ಪ್ಯಾಕ್ ಲಭ್ಯವಿದೆ.

Times Now 16 Jun 2020, 8:44 pm
ವರ್ಕ್ ಫ್ರಮ್ ಹೋಮ್ ಮತ್ತು ಲಾಕ್‌ಡೌನ್‌ ಸ್ಪೆಶಲ್ ಪ್ಯಾಕ್ ಎಂದು ವಿವಿಧ ಟೆಲಿಕಾಂ ಕಂಪನಿಗಳು ವಿಶೇಷ ಪ್ರಿಪೇಯ್ಡ್ ರಿಚಾರ್ಜ್ ಆಫರ್ ಮತ್ತು ಪ್ಯಾಕ್‌ಗಳನ್ನು ಜನರಿಗೆ ನೀಡುತ್ತಿವೆ. ಏರ್‌ಟೆಲ್, ರಿಲಯನ್ಸ್ ಜಿಯೋ ಮತ್ತು ವೊಡಾಫೋನ್ ಐಡಿಯಾ ಈ ರೀತಿ ವಿಶೇಷ ಪ್ಯಾಕ್‌ಗಳನ್ನು ಪರಿಚಯಿಸಿದ್ದು, ಗ್ರಾಹಕರಿಗೆ ಅನುಕೂಲವಾಗಿದೆ. ವೊಡಾಫೋನ್ ಐಡಿಯಾ ಇತ್ತೀಚೆಗೆ ಪರಿಚಯಿಸಿದ್ದ 251 ರೂ. ಸ್ಪೆಶಲ್ ಪ್ರಿಪೇಯ್ಡ್ ರಿಚಾರ್ಜ್ ಪ್ಯಾಕ್ ಈಗ ನಮ್ಮ ರಾಜ್ಯದಲ್ಲೂ ದೊರೆಯುತ್ತಿದೆ.
Vijaya Karnataka Web Vodafone
Vodafone Idea


251 ರೂ. ಪ್ಯಾಕ್
ವೊಡಾಫೋನ್ ಐಡಿಯಾ ಹೊರತಂದಿರುವ ಈ ಪ್ಯಾಕ್, ಆರಂಭದಲ್ಲಿ ರಾಜ್ಯದ ಗ್ರಾಹಕರಿಗೆ ಲಭ್ಯವಿರಲಿಲ್ಲ. ಆದರೆ ಪ್ರಸ್ತುತ ರಾಜ್ಯದಲ್ಲೂ ವೊಡಾಫೋನ್ ಐಡಿಯಾ 251 ರೂ. ಪ್ಯಾಕ್ ಲಭ್ಯವಿದೆ.

ವರ್ಕ್ ಫ್ರಮ್ ಹೋಮ್ ಪ್ಯಾಕ್
ವೊಡಾಫೋನ್ ಐಡಿಯಾದ ಈ ವಿಶೇಷ ಪ್ಯಾಕ್ ಆಡ್ ಆನ್ ಕೊಡುಗೆಯಡಿ ಲಭ್ಯವಿದ್ದು, 28 ದಿನ ವ್ಯಾಲಿಡಿಟಿ ಹೊಂದಿದೆ. 28 ದಿನಗಳ ವ್ಯಾಲಿಡಿಟಿಯಲ್ಲಿ ಈ ಪ್ಯಾಕ್‌ ಬಳಸುವವರಿಗೆ 50 GB ಡೇಟಾ ದೊರೆಯಲಿದೆ. ಉಳಿದಂತೆ ಕರ ಪ್ರಯೋಜನ ಲಭ್ಯವಿಲ್ಲ. ಜತೆಗೆ ಎಸ್‌ಎಂಎಸ್ ಕೂಡ ಇರುವುದಿಲ್ಲ.

251 Rs ಪ್ರಿಪೇಯ್ಡ್ ರಿಚಾರ್ಜ್



OnePlus Z: ಬಜೆಟ್ ಒನ್‌ಪ್ಲಸ್ ಫೋನ್‌ನಲ್ಲಿ ನಾಲ್ಕು ಕ್ಯಾಮರಾ?

ಕೇವಲ ಡೇಟಾ ಮಾತ್ರ ಸಾಕು ಎನ್ನುವವರಿಗೆ ಈ ಪ್ಲ್ಯಾನ್ ಉತ್ತಮವಾಗಿದ್ದು, ಕೆಲಸ ನಿರ್ವಹಿಸಲು ಅನುಕೂಲ ಮಾಡಿಕೊಡುತ್ತದೆ.

Smartphone Price Hike: ಯಾವೆಲ್ಲ ಫೋನ್‌ಗಳಿಗೆ ಬೆಲೆ ಏರಿಕೆಯಾಗಿದೆ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌