ಆ್ಯಪ್ನಗರ

ಟೆಕ್‌ ಟಾನಿಕ್‌: ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಆ್ಯಪಲ್ ಮ್ಯೂಸಿಕ್

ಟೆಕ್‌ ಟಾನಿಕ್‌ ಎಫ್‌ಬಿ ಮೆಸೆಂಜರ್‌ನಲ್ಲಿ ಆ್ಯಪಲ್‌ ಮ್ಯೂಸಿಕ್‌ ಆ್ಯಪಲ್‌ ಐಫೋನ್‌ ಇರುವವರಿಗೆ ಆ್ಯಪಲ್‌ ಮ್ಯೂಸಿಕ್‌ ಸ್ಟೋರ್‌ನಲ್ಲಿ ಬೇಕುಬೇಕಾದ ಹಾಡುಗಳು ...

Vijaya Karnataka 9 Oct 2017, 12:21 pm

ಆ್ಯಪಲ್‌ ಐಫೋನ್‌ ಇರುವವರಿಗೆ ಆ್ಯಪಲ್‌ ಮ್ಯೂಸಿಕ್‌ ಸ್ಟೋರ್‌ನಲ್ಲಿ ಬೇಕುಬೇಕಾದ ಹಾಡುಗಳು ಸಿಗುತ್ತವೆಂದು ಗೊತ್ತಿದೆ. ಇದೀಗ ಮ್ಯೂಸಿಕ್‌ ಬಾಟ್‌ ಅನ್ನು ಆ್ಯಪಲ್‌ ಕಂಪನಿಯು ಪರಿಚಯಿಸಿದೆ. ಅಂದರೆ, ಫೇಸ್‌ಬುಕ್‌ ಮೆಸೆಂಜರ್‌ನಲ್ಲಿ ಆ್ಯಪಲ್‌ ಮ್ಯೂಸಿಕ್‌ ಅಂತ ಸರ್ಚ್‌ ಮಾಡಿದಾಗ ಸಿಗುವ ಫ್ರೆಂಡ್‌ ಇದು. ಅದಕ್ಕೆ ಕ್ಲಿಕ್‌ ಮಾಡಿದಾಗ, ಯಾವ ಮ್ಯೂಸಿಕ್‌ ಬೇಕೂಂತ ಮೆಸೆಂಜರ್‌ನಲ್ಲೇ ಕೇಳುತ್ತದೆ.

Vijaya Karnataka Web stream apple music from facebook messenger
ಟೆಕ್‌ ಟಾನಿಕ್‌: ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಆ್ಯಪಲ್ ಮ್ಯೂಸಿಕ್


ಉದಾಹರಣೆಗೆ ನೀವು, ಯೇಸುದಾಸ್‌ ಅಂತ ಟೈಪ್‌ ಮಾಡಿದರೆ, ಯೇಸುದಾಸ್‌ ಹಾಡಿದ ಹಾಡುಗಳ ಪಟ್ಟಿಯನ್ನೇ ನಿಮ್ಮ ಮುಂದಿಡುತ್ತದೆ. ಅದರ ಮೇಲೆ ಕ್ಲಿಕ್‌ ಮಾಡಬಹುದು, ಅದನ್ನು ಅಲ್ಲಿಂದಲೇ ಸ್ನೇಹಿತರೊಂದಿಗೆ ಶೇರ್‌ ಮಾಡಬಹುದು. ಆ್ಯಪಲ್‌ ಮ್ಯೂಸಿಕ್‌ ಚಂದಾದಾರರಲ್ಲದಿದ್ದವರಿಗೆ ಕೇವಲ 30 ಸೆಕೆಂಡುಗಳ ಕಾಲ ಉಚಿತವಾಗಿ ಹಾಡು ಕೇಳಲು ಮಾತ್ರ ಸಾಧ್ಯ. ಇದು ಆ್ಯಪಲ್‌ ಐಫೋನ್‌ ಅಲ್ಲದೆ, ಆಂಡ್ರಾಯ್ಡ್‌ ಫೋನ್‌ನಲ್ಲಿಯೂ ಲಭ್ಯವಿದೆ.

-ಅವಿನಾಶ್ ಬಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌