ಆ್ಯಪ್ನಗರ

Redmi Note 5 Pro: ವಿಶೇಷ ದರಕಡಿತದಲ್ಲಿ ಲಭ್ಯ

ಶಿಯೋಮಿ ಆಫರ್ ಸೇಲ್‌ನಲ್ಲಿ ವಿಶೇಷ ಡಿಸ್ಕೌಂಟ್‌ ಮೂಲಕ ಸ್ಮಾರ್ಟ್‌ಫೋನ್ ಸೇಲ್ ಮಾಡುತ್ತಿದ್ದು, ಗ್ರಾಹಕರಿಗೆ ಕೊಡುಗೆ ನೀಡುತ್ತಿದೆ.

Times Now 8 Jul 2019, 2:40 pm
ಚೀನಾ ಮೂಲದ ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಶಿಯೋಮಿ, ಎಂಐ ಡೇಸ್ ಮತ್ತು ಎಂಐ ಸೂಪರ್ ಸೇಲ್ ಮೂಲಕ ಸ್ಮಾರ್ಟ್‌ಫೋನ್ ಮತ್ತು ಗ್ಯಾಜೆಟ್ ಮೇಲೆ ಡಿಸ್ಕೌಂಟ್ ಕೊಡುಗೆ ನೀಡುತ್ತಿದೆ.
Vijaya Karnataka Web Note 5 pro


ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಹಾಗೂ ಎಂಐ ಡಾಟ್‌ ಕಾಂ ಮೂಲಕ ಆಫರ್ ಸೇಲ್ ನಡೆಯುತ್ತಿದ್ದು, ಅದರಲ್ಲಿ ಶಿಯೋಮಿ ರೆಡ್ಮಿ ನೋಟ್ 5 ಪ್ರೊ ಮಾದರಿಯ ಮೇಲೆ ವಿಶೇಷ ಕೊಡುಗೆ ಲಭ್ಯವಾಗಿದೆ.

ಜುಲೈ 9, ಮಂಗಳವಾರದವರೆಗೆ ನಡೆಯುತ್ತಿರುವ ಸೇಲ್‌ನಲ್ಲಿ ಪೋಕೋ ಎಫ್‌1, ರೆಡ್ಮಿ Y3, ಎಂಐ A2 ಮತ್ತು 6A ಮೇಲೂ ವಿಶೇಷ ಡಿಸ್ಕೌಂಟ್ ದೊರೆಯುತ್ತಿದೆ.

ಶಿಯೋಮಿ ರೆಡ್ಮಿ ನೋಟ್ 5 ಪ್ರೊ, 13,999 ರೂ. ದರವಿದ್ದು, 2,000 ರೂ. ಡಿಸ್ಕೌಂಟ್ ದೊರೆಯುತ್ತಿದೆ. ಇದರಿಂದಾಗಿ 11,999 ರೂ.ಗೆ ರೆಡ್ಮಿ ನೋಟ್ 5 ಪ್ರೊ ಲಭ್ಯವಾಗಲಿದೆ. ಈ ಆಫರ್ 6 GB RAM ಮತ್ತು 64 GB ಮಾದರಿ ಮೇಲೆ ಮಾತ್ರ ಎಂದು ಶಿಯೋಮಿ ಹೇಳಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌