ಆ್ಯಪ್ನಗರ

Binge+ Set-Top Box: ಟಾಟಾ ಸ್ಕೈ 1,000 ರೂ. ಕ್ಯಾಶ್‌ಬ್ಯಾಕ್

ಟಾಟಾ ಸ್ಕೈ ಇತ್ತೀಚೆಗೆ ಪರಿಚಯಿಸಿದ ನೂತನ ಬಿಂಗ್+ ಖರೀದಿಗೆ ಗ್ರಾಹಕರಿಗೆ 1 ಸಾವಿರ ರೂ. ವಿಶೇಷ ಕ್ಯಾಶ್‌ಬ್ಯಾಕ್ ಆಫರ್ ದೊರೆಯಲಿದೆ.

Times Now 4 Feb 2020, 5:51 pm
ಟಾಟಾ ಸ್ಕೈ ಹೊಸದಾಗಿ ಪರಿಚಯಿಸಿದ ಬಿಂಗ್+ ಸೆಟಪ್ ಬಾಕ್ಸ್ ಖರೀದಿಗೆ 1,000 ರೂ. ಕ್ಯಾಶ್‌ಬ್ಯಾಕ್ ದೊರೆಯಲಿದೆ.
Vijaya Karnataka Web Tata SKY
Tata Sky Offer


ಟಾಟಾ ಸ್ಕೈ ಬಿಂಗ್‌+ ಸೆಟಪ್ ಬಾಕ್ಸ್ ಕಳೆದ ತಿಂಗಳು 5,999 ರೂ.ಗೆ ಬಿಡುಗಡೆಯಾಗಿತ್ತು. ಆದರೆ ಈಗಾಗಲೇ ಟಾಟಾ ಸ್ಕೈ ಬಳಸುತ್ತಿರುವವರು ಬಿಂಗ್+ ಸೆಟಪ್ ಬಾಕ್ಸ್ ಖರೀದಿಸಿದರೆ ಅವರಿಗೆ ಖಾತೆಗೆ 1,000 ರೂ. ಕ್ಯಾಶ್‌ಬ್ಯಾಕ್ ದೊರೆಯಲಿದ್ದು, ಅದರಿಂದಾಗಿ ಒಟ್ಟಾರೆ 4,999 ರೂ.ಗೆ ಸೆಟಪ್ ಬಾಕ್ಸ್ ದೊರೆತಂತಾಗಲಿದೆ.

ಡಿಟಿಎಚ್ ಸೇವೆಗಳಲ್ಲಿ ವಿವಿಧ ರೀತಿಯ ಆಫರ್‌ಗಳನ್ನು ನೀಡುವ ಮೂಲಕ ಗ್ರಾಹಕರನ್ನು ಸೆಳೆಯಲು ಈಗಾಗಲೇ ಟಾಟಾ ಸ್ಕೈ ಮಾತ್ರವಲ್ಲದೆ, ಏರ್‌ಟೆಲ್, ಡಿಶ್ ಟಿವಿ ಮುಂದಾಗಿದೆ.

ಇಂಟರ್‌ನೆಟ್ ಆಧಾರಿತ ಸ್ಟ್ರೀಮಿಂಗ್ ಸೇವೆಗಳ ಜನಪ್ರಿಯತೆಯಿಂದಾಗಿ ಡಿಟಿಎಚ್ ಸೇವೆಗಳತ್ತ ಜನರು ಕಡಿಮೆ ಒಲವು ಹೊಂದಿದ್ದಾರೆ. ಹೀಗಿರುವಾಗ ವಿವಿಧ ಆಫರ್ ಕೊಡುಗೆಗಳ ಮೂಲಕ ಟಾಟಾ ಸ್ಕೈ ಗ್ರಾಹಕರನ್ನು ಸೆಳೆಯಲು ಮುಂದಾಗಿದೆ.

Social Media: ಸಹಾಯ ಕೋರಿದ ಕೇಂದ್ರ ಸರಕಾರ

ಟಾಟಾ ಸ್ಕೈ ಬಿಂಗ್+ ಖರೀದಿಸಿದ ಬಳಿಕ 48 ಗಂಟೆಯಲ್ಲಿ ಗ್ರಾಹಕರ ಖಾತೆಗೆ 1000 ರೂ. ಕ್ಯಾಶ್‌ಬ್ಯಾಕ್ ಬರಲಿದೆ. ಟಾಟಾ ಸ್ಕೈ ಸೆಟಪ್ ಬಾಕ್ಸ್‌ ಖರೀದಿಯ ಜತೆಗೆ ಟಾಟಾ ಸ್ಕೈ ಬಿಂಗ್ ಸೇವೆಗಳು ಮೊದಲ ಒಂದು ತಿಂಗಳು ಉಚಿತವಾಗಿ ದೊರೆಯಲಿದೆ. ನಂತರದಲ್ಲಿ ಪ್ರತಿ ತಿಂಗಳು 249 ರೂ. ಶುಲ್ಕ ಪಾವತಿಸಬೇಕಿದೆ.

OnePlus Sales: ದೇಶದ ಮಾರುಕಟ್ಟೆ ನಾಯಕತ್ವ ಬಲಿಷ್ಠಗೊಳಿಸಿದ ಒನ್‍ಪ್ಲಸ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌