ಆ್ಯಪ್ನಗರ

Prepaid Plan: ವೊಡಾಫೋನ್ ಪ್ಲ್ಯಾನ್ ಪರಿಷ್ಕರಣೆ

ಟೆಲಿಕಾಂ ಕ್ಷೇತ್ರದಲ್ಲಿ ವಿವಿಧ ಕಂಪನಿಗಳ ನಡುವಣ ದರಸಮರ ಡೇಟಾ ಮತ್ತು ಕರೆ ದರಗಳ ಪ್ಲ್ಯಾನ್‌ ಮೇಲೆ ಪರಿಣಾಮ ಬೀರುತ್ತಿದೆ.

Times Now 8 Jul 2019, 4:31 pm
ಖಾಸಗಿ ರಂಗದ ಟೆಲಿಕಾಂ ಕ್ಷೇತ್ರದಲ್ಲಿನ ದರಸಮರ ಮತ್ತೆ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ಗಳ ಬದಲಾವಣೆಗೆ ಕಾರಣವಾಗಿದೆ. ವೋಡಾಫೋನ್ ಭಾರತದಲ್ಲಿ 139 ರೂ.ಗಳ ಪ್ರಿಪೇಯ್ಡ್ ಪ್ಲ್ಯಾನ್ ಅನ್ನು ಪರಿಷ್ಕರಿಸಿದೆ.
Vijaya Karnataka Web vodafone


ವೊಡಾಫೋನ್ ಪ್ರಿಪೇಯ್ಡ್ ಗ್ರಾಹಕರು 139 ರೂ. ರೀಚಾರ್ಜ್ ಮಾಡಿದರೆ, ಅವರಿಗೆ 28 ದಿನ ವ್ಯಾಲಿಡಿಟಿಯೊಂದಿಗೆ 300 ಎಸ್ಎಂಎಸ್, ಅನಿಯಮಿತ ಲೋಕಲ್ ಮತ್ತು ಎಸ್‌ಟಿಡಿ ಕರೆ, 3 GB ಡೇಟಾ ದೊರೆಯಲಿದೆ.

ಈ ಮೊದಲು ಇದೇ ಪ್ಲ್ಯಾನ್ ಪಡೆದುಕೊಂಡವರಿಗೆ 5 GB ಡೇಟಾ ದೊರೆಯುತ್ತಿತ್ತು. ಈ ಪ್ರಿಪೇಯ್ಡ್ ಪ್ಲ್ಯಾನ್, ಏರ್‌ಟೆಲ್ ಹೊಸದಾಗಿ ಬಿಡುಗಡೆ ಮಾಡಿದ 148 ರೂ.ಗಳ ಪ್ರಿಪೇಯ್ಡ್ ಪ್ಲ್ಯಾನ್‌ಗೆ ಸಾಮ್ಯತೆ ಹೊಂದಿದೆ.

ರಿಲಯನ್ಸ್ ಜಿಯೋ ಪ್ರವೇಶದ ಬಳಿಕ ಆರಂಭವಾದ ಟೆಲಿಕಾಂ ದರ ಸಮರ ಏರ್‌ಟೆಲ್ ಮತ್ತು ವೊಡಾಫೋನ್‌ಗಳ ದರ ಪರಿಷ್ಕರಣೆಗೆ ಕಾರಣವಾಗಿದೆ. ಅಲ್ಲದೆ ಬಿಎಸ್‌ಎನ್‌ಎಲ್ ಕೂಡ ಹೆಚ್ಚಿನ ಗ್ರಾಹಕರನ್ನು ಸೆಳೆಯುವ ಯತ್ನದಲ್ಲಿದೆ.

Airtel: 148 ರೂ. ಪ್ರಿಪೇಯ್ಡ್‌ ರೀಚಾರ್ಜ್ ಪ್ಲ್ಯಾನ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌