ಆ್ಯಪ್ನಗರ

Social Media: ಫೇಸ್‌ಬುಕ್ v/s ಟಿಕ್‌ಟಾಕ್ ವಾರ್

ಚೀನಾದ ಟಿಕ್‌ ಟಾಕ್‌ ಅಮೆರಿಕ ವಿವಿಧೆಡೆ ತನ್ನ ಪ್ರಭಾವವನ್ನು ವಿಸ್ತರಿಸಿಕೊಳ್ಳುತ್ತಿದೆ. ಫೇಸ್‌ಬುಕ್‌ ಸೇರಿದಂತೆ ಇತರೆ ಎಲ್ಲ ಸಾಮಾಜಿಕ ಜಾಲತಾಣಗಳಿಗೆ ತೀವ್ರ ಪೈಪೋಟಿ ನೀಡುತ್ತಿದೆ.

Vijaya Karnataka 7 Oct 2019, 9:46 am
ಬಹುಶಃ ಭಾರತದಲ್ಲಿ ಟಿಕ್‌ಟಾಕ್‌ಗಿರುವಷ್ಟು ಜನಪ್ರಿಯತೆ ಬೇರೆ ಯಾವ ಆ್ಯಪ್‌ಗಳಿಗೂ ಇಲ್ಲಎನಿಸುತ್ತಿದೆ. ಕಿರು ವಿಡಿಯೊ ಮಾಡಲು ಅವಕಾಶ ನೀಡುವ ಚೀನಾ ಮೂಲದ ಈ ಟಿಕ್‌ಟಾಕ್ ಬಹಳಷ್ಟು ಬಳಕೆದಾರರಿಗೆ ಮೋಡಿ ಮಾಡಿದೆ. ಒಮ್ಮೆ ನೀವು ಟಿಕ್‌ಟಾಕ್ ಸೆಳೆತಕ್ಕೆ ಸಿಲುಕಿದರೆ ಅದರಿಂದ ಹೊರ ಬರುವುದು ಬಹಳ ಕಷ್ಟ. ಜತೆಗೆ, ಟಿಕ್‌ಟಾಕ್ ವಿಡಿಯೊ ಮಾಡಲು ಹೋಗಿ ಅನೇಕರು ಪ್ರಾಣ ಕಳೆದುಕೊಂಡು ಉದಾಹರಣೆಗಳಿವೆ.
Vijaya Karnataka Web FB


ಇನ್ನೊಂದೆಡೆ, ಟಿಕ್‌ಟಾಕ್ ರಾಷ್ಟ್ರೀಯ ಭದ್ರತೆಗೆ ಸವಾಲು ಒಡ್ಡುತ್ತಿದೆ ಎಂಬ ಆರೋಪವೂ ಇದೆ. ಭಾರತೀಯ ಸಂಸ್ಕೃತಿಯನ್ನು ನಾಶ ಮಾಡುವ ಎಲ್ಲಅವಕಾಶವನ್ನು ಈ ಆ್ಯಪ್‌ ಒದಗಿಸುತ್ತಿದೆ. ಅಶ್ಲೀಲ ವಿಡಿಯೊಗಳಿಗೆ ಇಲ್ಲಿಅವಕಾಶವುಂಟು. ಹಾಗಾಗಿ ಅದನ್ನು ನಿಷೇಧಿಸಬೇಕೆಂಬ ಕೂಗು ಎದ್ದಿತ್ತು ಮತ್ತು ಸ್ವಲ್ಪ ದಿನಗಳ ಕಾಲ ಈ ಆ್ಯಪ್‌ ಅನ್ನು ನಿಷೇಧ ಕೂಡ ಮಾಡಲಾಗಿತ್ತು.

ಆದರೆ, ಇದೀಗ ಹೊಸ ವಿವಾದ ಏನೆಂದರೆ; ಸೋಷಿಯಲ್‌ ಮೀಡಿಯಾದಲ್ಲೇ ದೈತ್ಯ ಕಂಪನಿಯಾಗಿರುವ ಫೇಸ್‌ಬುಕ್‌ ಕೂಡ ಟಿಕ್‌ಟಾಕ್ ಬೆಳವಣಿಗೆ ಕಂಡು ಹೌಹಾರಿದೆ. ಫೇಸ್‌ಬುಕ್‌ ಸಿಇಒ ಮಾರ್ಕ್ ಝುಕರ್‌ಬರ್ಗ್‌ ಅಂತೂ ಇದರ ಬಗ್ಗೆ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡಿರುವಂತೆ ಕಾಣುತ್ತಿದೆ. ಯಾಕೆಂದರೆ, ಭಾರತವೂ ಸೇರಿದಂತೆ ಎಲ್ಲೆಲ್ಲಿಟಿಕ್‌ಟಾಕ್ ಪ್ರಬಲವಾಗುತ್ತಿದೆ ಅಲ್ಲೆಲ್ಲಅದನ್ನು ಮಟ್ಟ ಹಾಕಲು ಯೋಜನೆ ರೂಪಿಸುವಂತೆ ಝುಕರ್‌ಬರ್ಗ್‌ ಮಾತನಾಡಿದ್ದಾರೆನ್ನಲಾದ ಆಡಿಯೊ ಬಹಿರಂಗಗೊಂಡು ಭಾರಿ ಸುದ್ದಿಯಾಗುತ್ತಿದೆ.

ಇದೆಲ್ಲವೂ ಏನು ಸೂಚಿಸುತ್ತಿದೆ ಎಂದರೆ; ಚೀನಾದ ಈ ಟಿಕ್‌ಟಾಕ್ ಅಮೆರಿಕವೂ ಸೇರಿದಂತೆ ಬಹುತೇಕ ರಾಷ್ಟ್ರಗಳಲ್ಲಿತನ್ನ ಪ್ರಭಾವವನ್ನು ವಿಸ್ತರಿಸಿಕೊಳ್ಳುತ್ತಿದೆ ಮತ್ತು ಫೇಸ್‌ಬುಕ್‌ ಸೇರಿದಂತೆ ಇತರೆ ಎಲ್ಲಸಾಮಾಜಿಕ ಜಾಲತಾಣಗಳಿಗೆ ತೀವ್ರ ಪೈಪೋಟಿ ನೀಡುತ್ತಿದೆ. ಭಾರತದಲ್ಲಂತೂ ಟಿಕ್‌ಟಾಕ್‌, ಫೋಟೊ ಷೇರಿಂಗ್‌ ಆ್ಯಪ್‌ ಇನ್ಸ್‌ಟಾಗ್ರಾಮ್‌ ಹಿಂದಿಕ್ಕಿ ಮುಂದೆ ಹೋಗಿದೆ. ಈ ವಿಷಯವೇ ಮಾರ್ಕ್ ಝುಕರ್‌ಬರ್ಗ್‌ ಕಳವಳಕ್ಕೆ ಕಾರಣವಾಗಿರುವುದು.

ಇದು ಹೀಗೆಯೇ ಮುಂದುವರಿದರೆ, ತಂತ್ರಜ್ಞಾನ ವಲಯದಲ್ಲಿಚೀನಾ ವರ್ಸಸ್‌ ಅಮೆರಿಕ ಸ್ಥಿತಿಯನ್ನು ಊಹಿಸಬಹುದು. ಟಿಕ್‌ಟಾಕ್ ಮತ್ತು ಫೇಸ್‌ಬುಕ್‌ಗಳೆರಡೂ ಮಾರುಕಟ್ಟೆಯಲ್ಲಿತಮ್ಮ ಹಕ್ಕು ಸಾಧಿಸಲು ಬಹಿರಂಗವಾಗಿಯೇ ಕದನಕ್ಕಿಳಿಯುವ ಎಲ್ಲಸಾಧ್ಯತೆಗಳಿವೆ. ಈ ವಿವಾದದ ಬಗ್ಗೆ ಇಲ್ಲಿದೆ ಮಾಹಿತಿ.

ಚೀನಾದ ಮೊದಲ ಗ್ರಾಹಕ ಇಂಟರ್ನೆಟ್‌ ಪ್ರಾಡಕ್ಟ್
ವಿಡಿಯೊ ಬ್ಲಾಗಿಂಗ್‌ ವೆಬ್‌ಸೈಟ್‌ ಟಿಕ್‌ಟಾಕ್ ಚೀನಾದ ಮೊದಲ ಕನ್ಸೂಮರ್‌ ಇಂಟರ್ನೆಂಟ್‌ ಪ್ರಾಡಕ್ಟ್ ಆಗಿದ್ದು, ಸದ್ಯ ಜಗತ್ತಿನಾದ್ಯಂತ ತನ್ನದೇ ಆದ ಪ್ರಭಾವಳಿಯನ್ನು ಸೃಷಿಸಿಕೊಂಡಿದೆ. ಇನ್ಸ್‌ಟಾಗ್ರಾಮ್‌ ಆ್ಯಪ್‌ಗೆ ಸದ್ಯ ಠಕ್ಕರ್‌ ನೀಡುತ್ತಿರುವ ಟಿಕ್‌ಟಾಕ್‌ ಬಗ್ಗೆ ಫೇಸ್‌ಬುಕ್‌ ಸಿಇಒ ಮಾರ್ಕ್ ಝುಕರ್‌ಬರ್ಗ್‌ ಕಳವಳಗೊಂಡಿದ್ದಾರೆ.

ಭಾರತದಲ್ಲಿ ಹೆಚ್ಚಿದ ಜನಪ್ರಿಯತೆ
ಜಗತ್ತಿನ ಇತರೆ ಎಲ್ಲರಾಷ್ಟ್ರಗಳಿಗೆ ಹೋಲಿಸಿದರೆ ಟಿಕ್‌ಟಾಕ್ ಭಾರತದಲ್ಲಿಬಹಳ ವೇಗದಲ್ಲಿಅಭಿವೃದ್ಧಿ ಕಾಣುತ್ತಿದೆ. ಈ ಬೆಳವಣಿಗೆ ಮಾರ್ಕ್ ಝುಕರ್‌ಬರ್ಗ್‌ ಗುರುತಿಸಿದ್ದು, ''ಭಾರತದಲ್ಲಿಟಿಕ್‌ಟಾಕ್‌ ಬೆಳವಣಿಗೆ ಆಶ್ಚರ್ಯಕವಾಗಿದೆ'' ಎಂದು ಫೇಸ್‌ಬುಕ್‌ ಸಿಇಒ ತಿಳಿಸಿದ್ದಾರೆ.

ಇನ್ಸ್‌ಟಾಗ್ರಾಮ್‌ ಹಿಂದಿಕ್ಕಿದ ಟಿಕ್‌ಟಾಕ್‌
ಟಿಕ್‌ಟಾಕ್ ಭಾರತದಲ್ಲಿಎಷ್ಟು ವೇಗದಲ್ಲಿತನ್ನ ಪ್ರಭಾವವನ್ನು ಹರಡುತ್ತಿದೆ ಎಂದರೆ- ಫೇಸ್‌ಬುಕ್‌ ಒಡೆತನದ ಇನ್ಸ್‌ಟಾಗ್ರಾಮ್‌ ಅನ್ನು ಟಿಕ್‌ಟಾಕ್ ಹಿಂದಿಕ್ಕಿದೆ. ಈ ಅಂಶವೇ ಫೇಸ್‌ಬುಕ್‌ ಸಿಇಒ ಅವರ ಕಳವಳಕ್ಕೆ ಕಾರಣವಾಗಿದೆ ಎನ್ನುತ್ತಿದ್ದಾರೆ ತಜ್ಞರು.

ಟಿಕ್‌ಟಾಕ್ನೊಂದಿಗೆ ಸ್ಪರ್ಧೆ
ಭಾರತವೂ ಸೇರಿದಂತೆ ಎಲ್ಲೆಲ್ಲಿಟಿಕ್‌ಟಾಕ್ ವೇಗದಲ್ಲಿಬೆಳವಣಿಗೆ ಕಾಣುತ್ತಿದೆಯೋ ಅಲ್ಲೆಲ್ಲಫೇಸ್‌ಬುಕ್‌ ಕೂಡ ತೀವ್ರ ಸ್ಪರ್ಧೆಯನ್ನು ಎದುರಿಸಬೇಕಾಗಬಹುದೆಂಬುದು ಝುಕರ್‌ಬರ್ಗ್‌ನ ಲೆಕ್ಕಾಚಾರವಾಗಿದೆ ಎಂದು ದಿ ವಜ್‌ರ್‍ ಪತ್ರಿಕೆ ವರದಿ ಮಾಡಿದೆ. ಅಂದರೆ, ಸೋಷಿಯಲ್‌ ಮೀಡಿಯಾ ದೈತ್ಯ ಫೇಸ್‌ಬುಕ್‌ ಯಾವ ರೀತಿಯಲ್ಲಿಟಿಕ್‌ಟಾಕ್ ಕಂಗೆಡಿಸಿದೆ ಎಂದು ಅಂದಾಜಿಸಬಹುದು.

WhatsApp Bug: ಬಳಕೆದಾರರ ಮಾಹಿತಿ ಕದಿಯುವ GIF

ಟಿಕ್‌ಟಾಕ್ ಮೇಲೆ ವಾರ್‌ಗೆ ಸಿದ್ಧ
ಈಗಾಗಲೇ ಟಿಕ್‌ಟಾಕ್ ಸ್ಪರ್ಧೆಯನ್ನು ಎದುರಿಸಲು ಯೋಜನೆ ರೂಪಿಸುವಂತೆ ಮಾರ್ಕ್ ಝುಕರ್‌ಬರ್ಗ್‌ ಸೂಚಿಸಿದ್ದಾರಂತೆ. ಒಂದೊಮ್ಮೆ ಟಿಕ್‌ಟಾಕ್ ಸ್ಪರ್ಧೆಯನ್ನು ಅಲಕ್ಷಿಸಿದರೆ ಅದು ಮಹಾಪರಾಧವಾಗಲಿದೆ ಎಂಬ ಅಂಶ ಫೇಸ್‌ಬುಕ್‌ ಸಿಇಒ ಅವರಿಗೆ ಗೊತ್ತು. ಟಿಕ್‌ಟಾಕ್ ಕೇವಲ ವಿಡಿಯೊ ಬ್ಲಾಗಿಂಗ್‌ ಸೋಷಿಯಲ್‌ ತಾಣವಾಗಿದ್ದರೂ, ಅದು ಫೇಸ್‌ಬುಕ್‌ಗೂ ಸಖತ್‌ ಸ್ಪರ್ಧೆ ನೀಡುತ್ತಿರುವುದರಿಂದ ಈ ಬಗ್ಗೆ ಹೆಚ್ಚಿನ ಲಕ್ಷ್ಯವಹಿಸಬೇಕಾಗಿದೆ ಎಂಬುದು ಇದರಿಂದ ವೇದ್ಯವಾಗುತ್ತದೆ.

ಭಾರತದಲ್ಲಿ20 ಕೋಟಿ ಟಿಕ್‌ಟಾಕ್ದಾರರು
ಟಿಕ್‌ಟಾಕ್ ಸದ್ಯ 150 ದೇಶಗಳಲ್ಲಿಲಭ್ಯವಿದ್ದು, 75 ಭಾಷೆಗಳಲ್ಲಿಅದು ಸೇವೆಯನ್ನು ಒದಗಿಸುತ್ತಿದೆ. ಜಾಗತಿಕವಾಗಿ ಟಿಕ್‌ಟಾಕ್ಗೆ 70 ಕೋಟಿ ಬಳಕೆದಾರರಿದ್ದಾರೆ. ಭಾರತದಲ್ಲೇ 20 ಬಳಕೆದಾರರಿದ್ದಾರೆ ಎಂದರ ಅದೇ ಹಿಡಿತ ಎಷ್ಟರಮಟ್ಟಿಗೆ ಇದೆ ಎಂಬುದು ತಿಳಿಯುತ್ತದೆ.

ಫೇಸ್‌ಬುಕ್‌ 27 ಕೋಟಿ ಬಳಕೆದಾರರು
2006ರಲ್ಲಿಭಾರತೀಯರಿಗೂ ಫೇಸ್‌ಬುಕ್‌ ದೊರೆಯಲಾರಂಭಿಸಿತು. ಸದ್ಯ ಭಾರತದಲ್ಲಿಫೇಸ್‌ಬುಕ್‌ಗೆ 27 ಕೋಟಿ ಬಳಕೆದಾರರಿದ್ದಾರೆ. ಅಂದರೆ, ಟಿಕ್‌ಟಾಕ್ಗಿಂತ ಕೇವಲ ಏಳು ಕೋಟಿ ಮುಂದಿದೆಯಷ್ಟೇ. ಹಾಗಾಗಿಯೇ ಫೇಸ್‌ಬುಕ್‌, ಟಿಕ್‌ಟಾಕ್ ಬೆಳವಣಿಗೆಗೆ ಕಳವಳಗೊಂಡಿರುವುದು.

15 ಕೋಟಿ ಇನ್ಸ್‌ಟಾಗ್ರಾಮ್‌ ಯುಸರ್ಸ್‌
ಭಾರತದಲ್ಲಿಹೆಚ್ಚು ಕಡಿಮೆ 15 ಕೋಟಿ ಜನರು ಇನ್ಸ್‌ಟಾಗ್ರಾಮ್‌ ಬಳಸುತ್ತಿದ್ದಾರೆ. 18ರಿಂದ 24 ವರ್ಷದೊಳಗಿನ ಯುವಕರೇ ಹೆಚ್ಚು ಈ ಆ್ಯಪ್‌ ಬಳಸುತ್ತಿದ್ದಾರೆ. ಜಾಗತಿಕವಾಗಿ ಇನ್ಸ್‌ಟಾಗ್ರಾಮ್‌ಗೆ ನೂರು ಕೋಟಿ ಬಳಕೆದಾರಿದ್ದಾರೆ.

Festival Sale: ತಾವೇ ನಂ. 1 ಎಂದ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌