ಆ್ಯಪ್ನಗರ

Pegasus Malware: ಗೂಗಲ್, ಫೇಸ್‌ಬುಕ್ ಮತ್ತು ಆ್ಯಪಲ್ ಐಕ್ಲೌಡ್ ಡಾಟಾ ಸುರಕ್ಷಿತವಲ್ಲ

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿನ ಡಾಟಾ ಸುರಕ್ಷತೆ ಬಗ್ಗೆ ಎಚ್ಚರಿಕೆ ಎಷ್ಟಿದ್ದರೂ ಸಾಲದು. ಅಲ್ಲದೆ ಕೆಲವೊಂದು ಸಂದರ್ಭದಲ್ಲಿ ಸರಕಾರವೇ ನಿಮ್ಮ ಫೋನ್ ಮೇಲೆ ಕಣ್ಣಿಡಬಹುದು.

Gadgets Now 22 Jul 2019, 9:41 am
ಸ್ಮಾರ್ಟ್‌ಫೋನ್‌ಗಳಿಗೆ ವೈರಸ್ ಮತ್ತು ಮಾಲ್ವೇರ್ ಹರಿಯಬಿಟ್ಟು, ಅದರ ಮೂಲಕ ಬಳಕೆದಾರರ ದತ್ತಾಂಶ ಕದಿಯುವುದು ಇತ್ತೀಚೆಗೆ ಹೆಚ್ಚಾಗುತ್ತಿದೆ. ಈ ಸಾಲಿಗೆ ಹೊಸ ಸೇರ್ಪಡೆಯೆಂದರೆ ಪೆಗಸಿಸ್!
Vijaya Karnataka Web Pegasus


ಮೂಲತಃ ಇಸ್ರೇಲ್‌ನ ಎನ್‌ಎಸ್‌ಪಿ ಗ್ರೂಪ್ ಕಂಪನಿ ಅಭಿವೃದ್ಧಿಪಡಿಸಿದ ಪೆಗಸಿಸ್ ಅನ್ನು ಸರಕಾರ, ಸೇನೆ ಬಳಸುತ್ತಿದೆ.

ಜತೆಗೆ ಪೆಗಸಿಸ್ ಅನ್ನು ಖಾಸಗಿ ವ್ಯಕ್ತಿ ಅಥವಾ ಸಂಸ್ಥೆಗಳಿಗೆ ಮಾರಾಟ ಮಾಡುವುದಿಲ್ಲ. ಬದಲಾಗಿ ಸರಕಾರಕ್ಕೆ, ಅದರ ಅಧೀನ ಸಂಸ್ಥೆ, ಮಿಲಿಟರಿಗೆ ಮಾತ್ರ ಲಭ್ಯವಾಗುವಂತೆ ಮಾಡಿದ್ದು, ಅತ್ಯಂತ ದುಬಾರಿಯೂ ಆಗಿದೆ.

ಪೆಗಸಿಸ್‌ನ ಇತ್ತೀಚಿನ ಹೊಸ ಆವೃತ್ತಿ ಅತ್ಯಂತ ಹೆಚ್ಚು ಸಮರ್ಥವಾಗಿದ್ದು, ಗೂಗಲ್, ಫೇಸ್‌ಬುಕ್, ಮೈಕ್ರೋಸಾಫ್ಟ್‌ ಮತ್ತು ಅಮೆಜಾನ್, ಆ್ಯಪಲ್ ಐಕ್ಲೌಡ್‌ನ ಡಾಟಾ ಕೂಡ ಕದಿಯಬಲ್ಲದು ಎಂದು ನಿರೂಪಿತವಾಗಿದೆ.

ದುಬಾರಿಯೂ ಆಗಿರುವ ಪೆಗಸಿಸ್ ಟೂಲ್ ಅನ್ನು ಸರಕಾರಗಳು ಮಾತ್ರ ಖರೀದಿಸಬಹುದಾಗಿದ್ದು, ಸ್ಮಾರ್ಟ್‌ಫೋನ್‌ಗಳ ಮೇಲೆ ಕಣ್ಣಿರಿಸಲು ಬಳಸುತ್ತಿವೆ.

ಪೆಗಸಿಸ್ ಮಾಲ್ವೇರ್ ಮೂಲಕ ಸ್ಮಾರ್ಟ್‌ಫೋನ್ ಪ್ರವೇಶಿಸಿ, ನಂತರ ಬಳಕೆದಾರರ ಡಾಟಾ ಕದಿಯುತ್ತದೆ. ಅಲ್ಲದೆ ಫೋನ್‌ನ ಸಂಪೂರ್ಣ ನಿಯಂತ್ರಣ ಕೂಡ ಪೆಗಸಿಸ್‌ಗೆ ದೊರೆಯುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌