ಆ್ಯಪ್ನಗರ

Digital Credit Card: ಅಮೆರಿಕದಲ್ಲಿ ಲಭ್ಯ ಆ್ಯಪಲ್ ಕಾರ್ಡ್

ಡಿಜಿಟಲ್ ಪೇಮೆಂಟ್ ಕ್ಷೇತ್ರಕ್ಕೆ ಲಗ್ಗೆ ಇರಿಸಿರುವ ಆ್ಯಪಲ್ ಮೊದಲ ಹಂತದಲ್ಲಿ ಆ್ಯಪಲ್ ಪೇ ವ್ಯಾಲೆಟ್ ಸೇವೆ ಆರಂಭಿಸಿದ್ದು, ನಂತರದಲ್ಲಿ ಡಿಜಿಟಲ್ ಕ್ರೆಡಿಟ್ ಕಾರ್ಡ್ ಬಳಕೆಯನ್ನು ಅಮೆರಿಕದಲ್ಲಿ ಪರಿಚಯಸಿದೆ.

Times Now 21 Aug 2019, 11:55 am
ಟೆಕ್‌ ಲೋಕದ ದಿಗ್ಗಜ ಆ್ಯಪಲ್ ಇದೇ ಮೊದಲ ಬಾರಿಗೆ ವರ್ಚುವಲ್ ಕ್ರೆಡಿಟ್ ಕಾರ್ಡ್ ಅನ್ನು ಬಳಕೆದಾರರಿಗೆ ಬಿಡುಗಡೆ ಮಾಡಿದೆ.
Vijaya Karnataka Web apple


ಆ್ಯಪಲ್ ಕಾರ್ಡ್‌ಗೆ ಯಾವುದೇ ಶುಲ್ಕವಿರುವುದಿಲ್ಲ, ಯಾವುದೇ ಕಾರ್ಡ್ ಸಂಖ್ಯೆ, ಸಿವಿವಿ ಸೆಕ್ಯೂರಿಟಿ ಕೋಡ್, ವ್ಯಾಲಿಡಿಟಿ ಮುಕ್ತಾಯದ ದಿನಾಂಕ ಅಥವಾ ಸಹಿ ಇಲ್ಲದ ಕಾರ್ಡ್ ಇದಾಗಿದ್ದು, ಬಳಕೆದಾರರಿಗೆ ಇತರ ಯಾವುದೇ ಕ್ರೆಡಿಟ್ ಕಾರ್ಡ್‌ಗಿಂತ ಹೆಚ್ಚಿನ ಭದ್ರತೆ ಮತ್ತು ಸುರಕ್ಷತೆ ಇರುವ ಕಾರ್ಡ್ ಇದಾಗಿದೆ.

ಗೋಲ್ಡ್‌ಮನ್ ಸ್ಯಾಕ್ಸ್ ಆ್ಯಪಲ್ ಕ್ರೆಡಿಟ್ ಕಾರ್ಡ್ ಸೇವೆ ನೀಡುವ ಸಂಸ್ಥೆಯಾಗಿದ್ದು, ಮಾಸ್ಟರ್‌ಕಾರ್ಡ್ ಮೂಲಕ ಜಾಗತಿಕ ಪೇಮೆಂಟ್ ನೆಟ್‌ವರ್ಕ್ ಬಳಸಲಿದೆ.

ಐಫೋನ್‌ನ ವ್ಯಾಲೆಟ್ ಆ್ಯಪ್‌ ಮೂಲಕ ಆ್ಯಪಲ್ ಕ್ರೆಡಿಟ್ ಕಾರ್ಡ್‌ಗೆ ಅಪ್ಲೈ ಮಾಡಬಹುದಾಗಿದ್ದು, ನೋಂದಣಿ ಬಳಿಕ ತಕ್ಷಣವೇ ಬಳಕೆಗೆ ಲಭ್ಯವಾಗಲಿದೆ.

ಆ್ಯಪಲ್ ಡಿಜಿಟಲ್ ಕ್ರೆಡಿಟ್ ಕಾರ್ಡ್‌ಗೆ ಅಮೆರಿಕದಲ್ಲಿ ಭಾರಿ ಬೇಡಿಕೆ ಕಂಡುಬಂದಿದ್ದು, ಶೀಘ್ರದಲ್ಲೇ ಇತರ ದೇಶಗಳಲ್ಲೂ ಸೇವೆ ದೊರೆಯಲಿದೆ.

ಆ್ಯಪಲ್ ಕಾರ್ಡ್ ರಿವಾರ್ಡ್ ಯೋಜನೆಯಡಿ ಗ್ರಾಹಕರಿಗೆ ಡೈಲಿ ಕ್ಯಾಶ್‌ ದೊರೆಯಲಿದೆ. ಪ್ರತಿ ಬಾರಿ ಆ್ಯಪಲ್ ಕಾರ್ಡ್ ಬಳಸಿ ಪಾವತಿ ಮಾಡಿದಾಗಲೂ ಕನಿಷ್ಠ ಶೇ. 2 ಡೈಲಿ ಕ್ಯಾಶ್‌ಬ್ಯಾಕ್ ಲಭ್ಯವಾಗುತ್ತದೆ. ಎಲ್ಲ ರೀತಿಯ ಖರೀದಿಗೂ ಆ್ಯಪಲ್ ಕಾರ್ಡ್ ಬಳಸಬಹುದಾಗಿದ್ದು, ಶೀಘ್ರವೇ ಮತ್ತಷ್ಟು ಆ್ಯಪ್ ಮತ್ತು ಸೇವೆಗಳನ್ನು ಆ್ಯಪಲ್ ತನ್ನ ನೆಟ್‌ವರ್ಕ್‌ನಲ್ಲಿ ಒಳಗೊಳ್ಳಲಿದೆ.

ಪ್ರತಿ ವಾರ ಮತ್ತು ತಿಂಗಳು ಆ್ಯಪಲ್ ವ್ಯಾಲೆಟ್ ಆ್ಯಪ್ ಮೂಲಕ ವರದಿ ನೀಡಿ, ಗ್ರಾಹಕರ ಖರೀದಿ, ಕಾರ್ಡ್ ಬಳಕೆಯ ವಿವರ ನೀಡಲಿದೆ. ಅದರೆ ಗರಿಷ್ಠ ಭದ್ರತೆ ಮತ್ತು ಸುರಕ್ಷತೆ ಇರುವ ಕಾರ್ಡ್ ಇದಾಗಿದ್ದು, ಆ್ಯಪಲ್‌ಗೆ ಗ್ರಾಹಕರು ಕಾರ್ಡ್ ಬಳಸಿ ಏನು ಖರೀದಿಸಿದ್ದಾರೆ ಮತ್ತು ಎಂಬೆಲ್ಲ ವಿವರ ಆ್ಯಪಲ್‌ಗೆ ಲಭ್ಯವಾಗುವುದಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌