ಆ್ಯಪ್ನಗರ

Helo, ShareChat: ಶಿಫಾರಸಿನ ಡೌನ್‌ಲೋಡ್‌ಗೆ ಕ್ಯಾಶ್‌ಬ್ಯಾಕ್

ಮ್ಯೂಸಿಕ್ ಆ್ಯಪ್ ಸೇವೆ ಜನಪ್ರಿಯವಾಗತೊಡಗಿದಂತೆ ಹೆಚ್ಚಿನ ಬಳಕೆದಾರನ್ನು ಸೆಳೆಯುವ ಉದ್ದೇಶದಿಂದ ಕ್ಯಾಶ್‌ಬ್ಯಾಕ್‌ ಕೊಡುಗೆ ನೀಡಲಾಗುತ್ತಿದೆ.

ETtech 4 Jul 2019, 3:26 pm
ದೇಶದಲ್ಲಿ ಟಿಕ್‌ಟಾಕ್ ಆ್ಯಪ್ ಅತ್ಯಂತ ಜನಪ್ರಿಯತೆ ಗಳಿಸಿದ್ದು, ಅದರ ಬೆನ್ನಲ್ಲೇ ಹೆಲೋ ಮತ್ತು ಶೇರ್‌ಚಾಟ್‌ ಕೂಡ ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ಸೆಳೆಯಲು ಮುಂದಾಗಿವೆ.
Vijaya Karnataka Web cASH


ಈಗಾಗಲೇ ಗ್ರಾಮೀಣ ಭಾಷೆಗಳಲ್ಲಿ ಸೇವೆ ನೀಡುತ್ತಿರುವ ಉಭಯ ಆ್ಯಪ್‌ಗಳು, ಇತರರನ್ನು ಆಹ್ವಾನಿಸಿ, ಇನ್ವೈಟ್ ಕೋಡ್ ಮೂಲಕ ಆ್ಯಪ್ ಡೌನ್‌ಲೋಡ್ ಮಾಡಿಕೊಂಡರೆ, ಅವರಿಗೆ ಕ್ಯಾಶ್‌ಬ್ಯಾಕ್ ಕೊಡುಗೆ ನೀಡುತ್ತಿದೆ.

ಹೆಲೋ ಆ್ಯಪ್ ರೆಫರೆನ್ಸ್ ಡೌನ್‌ಲೋಡ್‌ಗೆ 10 ರೂ. ಮತ್ತು ಶೇರ್‌ಚಾಟ್ ಆ್ಯಪ್ ಡೌನ್‌ಲೋಡ್‌ಗೆ 15 ರೂ. ಅನ್ನು ಪೇಟಿಎಂ ಮೂಲಕ ಟ್ರಾನ್ಸ್‌ಫರ್ ಮಾಡಲಾಗುತ್ತದೆ.

ಶೇರ್‌ಚಾಟ್ ಬಳಕೆದಾರರಿಗೆ ಹೆಚ್ಚುವರಿ ಸ್ಕ್ರಾಚ್‌ಕಾರ್ಡ್ ಕೂಡ ದೊರೆಯುತ್ತಿದ್ದು, ಅದರ ಮೂಲಕ ಮತ್ತಷ್ಟು ಹಣ ಗೆಲ್ಲುವ ಅವಕಾಶ ದೊರೆಯುತ್ತದೆ. ಮತ್ತು ಹೆಲೋ ಹೆಚ್ಚು ಜನರು ಡೌನ್‌ಲೋಡ್ ಮಾಡಿಕೊಂಡರೆ, ಅದರಿಂದ ಹೆಚ್ಚು ಕೊಡುಗೆಯ ಆಫರ್ ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌