ಆ್ಯಪ್ನಗರ

Vivo Z1x: ದೇಶದ ಮಾರುಕಟ್ಟೆಗೆ ಬಿಡುಗಡೆ

ಚೀನಾ ಮೂಲದ ವಿವೋ ದೇಶದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೆಚ್ಚಿನ ಹೂಡಿಕೆ ಮಾಡಿದ್ದು, ಹೊಸ ಮಾದರಿಗಳನ್ನು ವಿಶೇ‍ಷವಾಗಿ ಭಾರತದಲ್ಲೇ ಬಿಡುಗಡೆ ಮಾಡುತ್ತಿದೆ.

Times Now 6 Sep 2019, 3:41 pm
ವಿವೋ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ವಿವಿಧ ಮಾದರಿಗಳನ್ನು ಪರಿಚಯಿಸಿದ್ದು, ಜನಮೆಚ್ಚುಗೆ ಗಳಿಸಿದೆ. ಜತೆಗೆ ಕಾಲಕಾಲಕ್ಕೆ ಹೊಸ ಅಪ್‌ಡೇಟ್ ಸಹಿತ ವಿವಿಧ ಮಾದರಿಗಳನ್ನು ಬಿಡುಗಡೆ ಮಾಡುತ್ತಿದೆ.
Vijaya Karnataka Web vIVO


ಪ್ರಸ್ತುತ ವಿವೋ ದೇಶದಲ್ಲಿ ವಿವೋ Z1x ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದ್ದು, ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 712AIE ಚಿಪ್‌ಸೆಟ್ ಹೊಂದಿದೆ.

ವಿವೋ Z1x ವೈಶಿಷ್ಟ್ಯಗಳು
6 GB ಮತ್ತು 64 GB ಹಾಗೂ 6 GB ಜತೆಗೆ 128 GB.
ಬೆಲೆ ಕ್ರಮವಾಗಿ 16,990 ರೂ. ಮತ್ತು 18,990 ರೂ.

ಫ್ಯೂಶನ್ ಬ್ಲೂ ಮತ್ತು ಫ್ಯಾಂಟಮ್ ಪರ್ಪಲ್ ಎಂಬ ಎರಡು ಆಕರ್ಷಕ ಬಣ್ಣಗಳಲ್ಲಿ ಹೊಸ ವಿವೋ Z1x ಲಭ್ಯವಿದೆ.
ಸೆ. 13ರಿಂದ ಫ್ಲಿಪ್‌ಕಾರ್ಟ್ ಮತ್ತು ವಿವೋ ಇಂಡಿಯಾ ಸ್ಟೋರ್ ಮೂಲಕ ವಿವೋ ಫೋನ್ ದೊರೆಯಲಿದೆ.

Xperia 5: ಸೋನಿ ತ್ರಿವಳಿ ಕ್ಯಾಮರಾ ಸ್ಮಾರ್ಟ್‌ಫೋನ್

ವಿವೋ Z ಸರಣಿಯ ಎರಡನೇ ಫೋನ್ ಇದಾಗಿದ್ದು, 4,500mAh ಬ್ಯಾಟರಿ ಜತೆಗೆ 22.5W ಫ್ಲ್ಯಾಶ್‌ಚಾರ್ಜ್ ಆಯ್ಕೆ ಲಭ್ಯವಿದೆ.
ಹಿಂಬದಿಯಲ್ಲಿ AI ಆಧಾರಿತ ತ್ರಿವಳಿ ಕ್ಯಾಮರಾ ಹೊಂದಿದೆ. 48+8+2 ಮೆಗಾಪಿಕ್ಸೆಲ್‌ನ ಲೆನ್ಸ್ ಸಂಯೋಜನೆ ಇದರಲ್ಲಿದೆ.

ಆರಂಭಿಕ ಕೊಡುಗೆ
ವಿವೋ ಫೋನ್ ಖರೀದಿಗೆ ಹಲವು ಆರಂಭಿಕ ಕೊಡುಗೆಗಳಿವೆ.
ಎಚ್‌ಡಿಎಫ್‌ಸಿ ಕಾರ್ಡ್ ಬಳಸಿ ಖರೀದಿ ಮತ್ತು ಇಎಂಐ ಮೂಲಕ ಖರೀದಿಸಿದರೆ, 1250 ರೂ. ಕಡಿತ, 6,000 ರೂ. ಮೌಲ್ಯದ ಜಿಯೋ ಪ್ರಯೋಜನಗಳು, 6 ತಿಂಗಳವರೆಗೆ ನೋ ಕಾಸ್ಟ್ ಇಎಂಐ ಆಯ್ಕೆ ಇರಲಿದೆ.

Jio Fiber Connection: ಜಿಯೋ ಗಿಗಾಫೈಬರ್ ವಿವಿಧ ಪ್ಲ್ಯಾನ್ ವಿವರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌