ಆ್ಯಪ್ನಗರ

Vivo X51 5G: ಆಕರ್ಷಕ ಪ್ರೀಮಿಯಂ ಫೋನ್ ಬಿಡುಗಡೆ ಮಾಡಿದ ವಿವೋ

ದೇಶದ ಮಾರುಕಟ್ಟೆಗೆ ವಿವೋ ಪರಿಚಯಿಸಿದ್ದ ವಿವೋ X50 ಪ್ರೊ ಫೋನ್‌ ನಂತರ 5G ಸಹಿತ ಹಲವು ತಾಂತ್ರಿಕ ವೈಶಿಷ್ಟ್ಯಗಳನ್ನು ವಿವೋ ಹೊಸ ಫೋನ್‌ನಲ್ಲಿ ಅಳವಡಿಸಿಕೊಂಡಿದೆ.

TNN & Agencies 21 Oct 2020, 7:50 pm
ಬಿಬಿಕೆ ಎಲೆಕ್ಟ್ರಾನಿಕ್ಸ್ ಸಮೂಹದ ವಿವೋ, ಗ್ಯಾಜೆಟ್ ಮಾರುಕಟ್ಟೆಗೆ ನೂತನ ಫೋನ್ ಪರಿಚಯಿಸಿದೆ. ವಿವೋ ಪ್ರೀಮಿಯಂ ಫೋನ್ ಸರಣಿಯಲ್ಲಿ Vivo X51 5G ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದ್ದು, ಸ್ನ್ಯಾಪ್‌ಡ್ರ್ಯಾಗನ್ ಪ್ರೊಸೆಸರ್ ಮತ್ತು ಗಿಂಬಲ್ ಕ್ಯಾಮರಾ ಮೂಲಕ ಗಮನ ಸೆಳೆಯುತ್ತಿದೆ.
Vijaya Karnataka Web Vivo X51 5G
Vivo X51 5G


ವಿವೋ ಪ್ರೀಮಿಯಂ ಫೋನ್
ಬಜೆಟ್ ಮತ್ತು ಮಧ್ಯಮ ದರದ ಫೋನ್‌ ಬಿಡುಗಡೆ ಮಾಡಿರುವ ವಿವೋ, ಪ್ರೀಮಿಯಂ ಸರಣಿಯಲ್ಲೂ ಸೈ ಎನ್ನಿಸಿಕೊಂಡಿದೆ. ಅದಕ್ಕೆ ಪೂರಕವಾಗಿ ವಿವೋ Vivo X51 5G ಫೋನ್ ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, 5G ಮಾತ್ರವಲ್ಲದೆ, ಪ್ರೀಮಿಯಂ ಫೀಚರ್ ಹೊಂದಿದೆ. ಯುರೋಪ್ ಮಾರುಕಟ್ಟೆಯಲ್ಲಿ ವಿವೋ ಫೋನ್ ಆದ್ಯತೆಯ ಮೇರೆಗೆ ಮೊದಲಿಗೆ ಬಿಡುಗಡೆಯಾಗಿದ್ದು, ಫ್ರಾನ್ಸ್, ಜರ್ಮನಿ, ಇಟಲಿ, ಪೋಲೆಂಡ್, ಸ್ಪೇನ್ ಮತ್ತು ಇಂಗ್ಲೆಂಡ್‌ನಲ್ಲಿ ಲಭ್ಯವಾಗಲಿದೆ.

ವಿವೋ X51 5G
ದೇಶದ ಮಾರುಕಟ್ಟೆಗೆ ವಿವೋ ಪರಿಚಯಿಸಿದ್ದ ವಿವೋ X50 ಪ್ರೊ ಫೋನ್‌ ನಂತರ 5G ಸಹಿತ ಹಲವು ತಾಂತ್ರಿಕ ವೈಶಿಷ್ಟ್ಯಗಳನ್ನು ವಿವೋ ಹೊಸ ಫೋನ್‌ನಲ್ಲಿ ಅಳವಡಿಸಿಕೊಂಡಿದೆ. 8 GB RAM ಮತ್ತು 256 GB ಸ್ಟೋರೇಜ್, 6.56 ಇಂಚಿನ ಫುಲ್‌ ಎಚ್‌ಡಿ+ ಡಿಸ್‌ಪ್ಲೇ, ಹಿಂಬದಿಯಲ್ಲಿ 48+13+8+8 ಮೆಗಾಪಿಕ್ಸೆಲ್ ಸಹಿತ ನಾಲ್ಕು ಕ್ಯಾಮರಾ ಹಾಗೂ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾ ಇದರ ವಿಶೇಷತೆಯಾಗಿದೆ. 4,315mAh ಬ್ಯಾಟರಿ ಮತ್ತು 33W ಫಾಸ್ಟ್ ಚಾರ್ಜ್ ಬೆಂಬಲ ಈ ಫೋನ್‌ನಲ್ಲಿದೆ.

Mi Watch Color: ಸ್ಪೋರ್ಟ್ಸ್ ಎಡಿಶನ್ ಆಕರ್ಷಕ ಸ್ಮಾರ್ಟ್‌ವಾಚ್ ಪರಿಚಯಿಸಿದ ಶವೋಮಿ

ಬೆಲೆ ಎಷ್ಟಿದೆ?
ಹೊಸ Vivo X51 5G ಫೋನ್ ದರ ಯುರೋಪ್ ಮಾರುಕಟ್ಟೆಗೆ ಹೋಲಿಸಿದರೆ, ದೇಶದಲ್ಲಿ ಅಂದಾಜು 71,900 ರೂ. ದರ ಹೊಂದಿದೆ. ಅಲ್ಫಾ ಗ್ರೇ ಎಂಬ ವಿಶೇಷ ಬಣ್ಣದಲ್ಲಿ ಈ ಫೋನ್ ದೊರೆಯುತ್ತದೆ.

Nokia 2 V Tella: ಹೊಸ ಫೋನ್ ಬಿಡುಗಡೆ ಮಾಡಿದೆ ನೋಕಿಯಾ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌