ಆ್ಯಪ್ನಗರ

'Watch 2' ಹೆಸರಿನಲ್ಲಿ ಹೊಸ Vivo ಸ್ಮಾರ್ಟ್‌ವಾಚ್ ಬಿಡುಗಡೆ!

ಈ ನೂತನ ವೇರಬಲ್ ವಾಚ್ ಅನ್ನು 'Vivo Watch 2' ಎಂದು ಹೆಸರಿಸಿರುವ ವಿವೋ, ಈ ನೂತನ ವಾಚ್ eSIM ಬೆಂಬಲದೊಂದಿಗೆ ಬರುತ್ತದೆ ಎಂದು ತಿಳಿಸಿದೆ. ಈ ಸ್ಮಾರ್ಟ್‌ವಾಚ್ ಒಂದೇ ಚಾರ್ಜ್‌ನಲ್ಲಿ 14 ದಿನಗಳ ಬ್ಯಾಟರಿಯನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದ್ದು, ಇದು ಯಾವಾಗಲೂ ಆನ್ ಡಿಸ್ಪ್ಲೇ ವೈಶಿಷ್ಟ್ಯದೊಂದಿಗೆ 1.43-ಇಂಚಿನ ಪರದೆಯನ್ನು ಹೊಂದಿದೆ

Vijaya Karnataka Web 25 Dec 2021, 1:56 pm
ಜನಪ್ರಿಯ ಮೊಬೈಲ್ ಕಂಪೆನಿ Vivo ತನ್ನ ಎರಡನೇ ತಲೆಮಾರಿನ ಸ್ಮಾರ್ಟ್ ವಾಚ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ನೂತನ ವೇರಬಲ್ ವಾಚ್ ಅನ್ನು 'Vivo Watch 2' ಎಂದು ಹೆಸರಿಸಿರುವ ವಿವೋ, ಈ ನೂತನ ವಾಚ್ eSIM ಬೆಂಬಲದೊಂದಿಗೆ ಬರುತ್ತದೆ ಎಂದು ತಿಳಿಸಿದೆ. ಈ ಸ್ಮಾರ್ಟ್‌ವಾಚ್ ಒಂದೇ ಚಾರ್ಜ್‌ನಲ್ಲಿ 14 ದಿನಗಳ ಬ್ಯಾಟರಿಯನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದ್ದು, ಇದು ಯಾವಾಗಲೂ ಆನ್ ಡಿಸ್ಪ್ಲೇ ವೈಶಿಷ್ಟ್ಯದೊಂದಿಗೆ 1.43-ಇಂಚಿನ ಪರದೆಯನ್ನು ಹೊಂದಿದೆ ಮತ್ತು 2GB ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಬರಲಿದೆ. ಇನ್ನು ಬಾಳಿಕೆಗಾಗಿ ಸ್ಟೇನ್ಲೆಸ್ ಸ್ಟೀಲ್ ನಿರ್ಮಾಣವನ್ನು ಹೊಂದಿರುವ ವಾಚ್ ಎರಡು ಬಟನ್‌ಗಳನ್ನು ಹೊಂದಿದ್ದು, ಲೆದರ್ ಸ್ಟ್ರಾಪ್ ಅಥವಾ ಸ್ಟ್ಯಾಂಡರ್ಡ್ ರಬ್ಬರ್ ಸ್ಟ್ರಾಪ್ ಜೊತೆಗೆ ಖರೀದಿಸಬಹುದಾಗಿದೆ.
Vijaya Karnataka Web Watch 2 ಹೆಸರಿನಲ್ಲಿ ಹೊಸ Vivo ಸ್ಮಾರ್ಟ್‌ವಾಚ್ ಬಿಡುಗಡೆ!


ನೇರವಾಗಿ ನಾವು 'Vivo Watch 2' ವಿಶೇಷತೆಗಳನ್ನು ನೋಡುವುದಾದರೆ, Vivo Watch 2 466x466 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 326ppi ಪಿಕ್ಸೆಲ್ ಸಾಂದ್ರತೆಯೊಂದಿಗೆ 1.43-ಇಂಚಿನ ಯಾವಾಗಲೂ ಆನ್ ಡಿಸ್‌ಪ್ಲೇಯನ್ನು ಹೊಂದಿದೆ. 2GB ಸಂಗ್ರಹಣೆಯೊಂದಿಗೆ, GPS, GLONASS, ಗೆಲಿಲಿಯೋ ಮತ್ತು BeiDou ಜೊತೆಗೆ ಸಂಪರ್ಕಕ್ಕಾಗಿ Bluetooth v5.2 ಅನ್ನು 'Vivo Watch 2' ಬಳಸುತ್ತದೆ. ಫಿಟ್ನೆಸ್ ಟ್ರ್ಯಾಕಿಂಗ್ಗಾಗಿ, ಸ್ಮಾರ್ಟ್ ವಾಚ್‌ನಲ್ಲಿ ಹೊರಾಂಗಣ ಓಟ, ಸೈಕ್ಲಿಂಗ್, ಜಿಮ್ನಾಸ್ಟಿಕ್ಸ್, ಟೆನ್ನಿಸ್, ಈಜು, ರೋಯಿಂಗ್ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ 47 ಕ್ರೀಡಾ ವಿಧಾನಗಳನ್ನು ಒಳಗೊಂಡಿದೆ. ಬಾಳಿಕೆಗಾಗಿ, Vivo Watch 2 ಸ್ಟೇನ್‌ಲೆಸ್ ಸ್ಟೀಲ್ ಬಿಲ್ಡ್ ಬಾಡಿ ಮತ್ತು 5ATM ವಾಟರ್ ರೆಸಿಸ್ಟೆನ್ಸ್ ರೇಟಿಂಗ್‌ ಹೊಂದಿದೆ.

ಹೊಸ 'Vivo Watch 2' ಸ್ಮಾರ್ಟ್‌ವಾಚ್ ರಕ್ತದ ಆಮ್ಲಜನಕದ ಶುದ್ಧತ್ವ ಮಟ್ಟ, ಹೃದಯ ಬಡಿತ ಮಾನಿಟರ್ ಅನ್ನು ಪತ್ತೆಹಚ್ಚಲು SpO2 ಸಂವೇದಕವನ್ನು ಸಹ ಹೊಂದಿದೆ ಮತ್ತು ನಿದ್ರೆ ಟ್ರ್ಯಾಕಿಂಗ್ ವೈಶಿಷ್ಟ್ಯದೊಂದಿಗೆ ಬರುತ್ತದೆ. ಗಾಳಿಯ ಒತ್ತಡ ಮತ್ತು ಎತ್ತರವನ್ನು ಅಳೆಯಲು ಸಂವೇದಕವೂ ಇದೆ. ಇದು ಚೀನಾದಾದ್ಯಂತ 300 ನಗರಗಳಲ್ಲಿ ಸುರಂಗಮಾರ್ಗ ಮತ್ತು ಬಸ್ ಪ್ರವೇಶಕ್ಕಾಗಿ NFC ಅನ್ನು ಹೊಂದಿದೆ. ಇತರ ಕಾರ್ಯಗಳು ಅಲಾರಮ್‌ಗಳು, ಅಧಿಸೂಚನೆಗಳು ಮತ್ತು ಸಂಗೀತ ಪ್ಲೇಬ್ಯಾಕ್ ನಿಯಂತ್ರಣವನ್ನು ಒಳಗೊಂಡಿವೆ. ಇದು Vivo ನ jovi ಧ್ವನಿ ಸಹಾಯಕದೊಂದಿಗೆ ಬರುತ್ತದೆ ಮತ್ತು ಇತರ ಸ್ಮಾರ್ಟ್ ಸಾಧನಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. Vivo ಪ್ರಕಾರ ಸ್ಮಾರ್ಟ್‌ವಾಚ್ 14 ದಿನಗಳ ರನ್ ಸಮಯವನ್ನು ನೀಡುತ್ತದೆ.
ಬ್ಯಾಟಲ್‌ಗ್ರೌಂಡ್ಸ್ ಬಿಗ್‌ ಶಾಕ್!..ಈ ತಪ್ಪು ಮಾಡಿದರೆ ಫೋನ್ ಕೂಡ ನಿಷೇಧವಾಗಲಿದೆ!
ಇದಲ್ಲದೆ, ವಾಚ್ 2 ಅಲಾರಮ್‌ಗಳು, ಸಂಗೀತ ಪ್ಲೇಬ್ಯಾಕ್ ನಿಯಂತ್ರಣ ಮತ್ತು ಅಧಿಸೂಚನೆಗಳಂತಹ ಕಾರ್ಯಗಳನ್ನು ಹೊಂದಿದೆ. ಅಲ್ಲದೆ, ಇದು ವಿವೋದ jovi ಧ್ವನಿ ಸಹಾಯಕದೊಂದಿಗೆ ಬರುತ್ತದೆ, ಇದು ಬಳಕೆದಾರರಿಗೆ ಇತರ ಸ್ಮಾರ್ಟ್ ಸಾಧನಗಳನ್ನು ನಿಯಂತ್ರಿಸಲು ಅನುವು ಮಾಡಿಕೊಡುತ್ತದೆ. ಇದೀಗ ಚೀನಾದಲ್ಲಿ ಬಿಡುಗಡೆ ಮಾಡಲಾಗಿರುವ ಈ Vivo Watch 2 ನ ಬೆಲೆ CNY 1,299 (ಸುಮಾರು ರೂ. 15,300)ಗಳಾಗಿದ್ದು, Vivo China ಆನ್‌ಲೈನ್ ಸ್ಟೋರ್ ಮೂಲಕ ಮುಂಗಡ ಬುಕಿಂಗ್‌ಗೆ ಲಭ್ಯವಿದೆ. ವಾಚ್ ಡಿಸೆಂಬರ್ 29 ರಿಂದ ಮಾರಾಟವಾಗಲಿದೆ ಮತ್ತು ಇದನ್ನು ಕಪ್ಪು, ಬೆಳ್ಳಿ ಮತ್ತು ಬಿಳಿ ಬಣ್ಣಗಳಲ್ಲಿ ಖರೀದಿಸಬಹುದು. ಭಾರತ ಸೇರಿದಂತೆ ಇತರ ಮಾರುಕಟ್ಟೆಗಳಲ್ಲಿ ಲಭ್ಯತೆಯ ಬಗ್ಗೆ ಇನ್ನೂ ಯಾವುದೇ ಸುದ್ದಿ ಇನ್ನು ಹೊರಬಿದ್ದಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌