ಆ್ಯಪ್ನಗರ

ವೊಡಾಫೋನ್ ಐಡಿಯಾ ರೀಚಾರ್ಜ್ ಬೆಲೆಗಳಲ್ಲಿ ಭಾರೀ ಹೆಚ್ಚಳ!..ಇಲ್ಲಿದೆ ಫುಲ್ ಡೀಟೇಲ್ಸ್!

8 ದಿನಗಳ ಮಾನ್ಯತೆ ಹೊಂದಿರುವ ತನ್ನ ಯೋಜನೆಗಳಿಗೆ ಸುಮಾರು 25 ಪ್ರತಿಶತದಷ್ಟು ಬೆಲೆ ಹೆಚ್ಚಿಸಿದೆ ಹಾಗೂ ಕನಿಷ್ಠ ರೀಚಾರ್ಜ್‌ನ ಮೌಲ್ಯವನ್ನು ಇದೀಗ 79₹ ಗಳಿಂದ 99₹ಗೆ ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಮೂಲಕ ತನ್ನ ಪ್ರೀಪೇಡ್ ಯೋಜನೆಗಳ ಬೆಲೆಗಳನ್ನು ನಿರ್ಧರಿಸುವಲ್ಲಿ ವೊಡಾಫೋನ್ ಐಡಿಯಾ ಕಂಪೆನಿಯು ಏರ್‌ಟೆಲ್ ಹಿಂದೆ ಬಿದ್ದಿದೆ.

Vijaya Karnataka Web 23 Nov 2021, 3:50 pm
ಏರ್‌ಟೆಲ್ ತನ್ನ ರೀಚಾರ್ಜ್ ಬೆಲೆಗಳನ್ನು ಹೆಚ್ಚಿಸುವ ಬಗ್ಗೆ ತಿಳಿಸಿದ ಒಂದು ದಿನದ ನಂತರ ಇದೀಗ ವೊಡಾಫೋನ್ ಐಡಿಯಾ ಕೂಡ ತನ್ನ ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ. ವೊಡಾಫೋನ್ ಐಡಿಯಾ ಕಂಪೆನಿಯು ತನ್ನೆಲ್ಲಾ ಪ್ರಿಪೇಯ್ಡ್ ಯೋಜನೆಗಳ ಬೆಲೆಗಳನ್ನು ನವೆಂಬರ್ 25 ರಿಂದ ಶೇಕಡಾ 20-25 ರಷ್ಟು ಹೆಚ್ಚಿಸಲು ನಿರ್ಧರಿಸಿದ್ದು, 28 ದಿನಗಳ ಮಾನ್ಯತೆ ಹೊಂದಿರುವ ತನ್ನ ಯೋಜನೆಗಳಿಗೆ ಸುಮಾರು 25 ಪ್ರತಿಶತದಷ್ಟು ಬೆಲೆ ಹೆಚ್ಚಿಸಿದೆ ಹಾಗೂ ಕನಿಷ್ಠ ರೀಚಾರ್ಜ್‌ನ ಮೌಲ್ಯವನ್ನು ಇದೀಗ 79₹ ಗಳಿಂದ 99₹ಗೆ ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಮೂಲಕ ತನ್ನ ಪ್ರೀಪೇಡ್ ಯೋಜನೆಗಳ ಬೆಲೆಗಳನ್ನು ನಿರ್ಧರಿಸುವಲ್ಲಿ ಕಂಪೆನಿಯು ಏರ್‌ಟೆಲ್ ಹಿಂದೆ ಬಿದ್ದಿದೆ.
Vijaya Karnataka Web vi


ತನ್ನ ರೀಚಾರ್ಜ್ ಸೇವೆಗಳ ಬೆಲೆ ಏರಿಕೆಯ ಬಗ್ಗೆ ಪ್ರಕಟಣೆ ನೀಡಿರುವ ವೊಡಾಫೋನ್ ಐಡಿಯಾ ಸಂಸ್ಥೆಯು, ಹೊಸ ದರಗಳಿಂದ ಎಆರ್‌ಪಿಯು (ಪ್ರತಿ ಬಳಕೆದಾರರಿಂದ ಸಂಗ್ರಹಿಸುವ ಸರಾಸರಿ ದರ) ಸುಧಾರಣೆಗೆ ಸಹಾಯವಾಗಲಿದೆ ಮತ್ತು ಉದ್ಯಮ ಎದುರಿಸುತ್ತಿರುವ ಆರ್ಥಿಕ ಒತ್ತಡವನ್ನು ಪರಿಹರಿಸುವ ಸಲುವಾಗಿ ಬೆಲೆ ಹೆಚ್ಚಳ ಮಾಡುತ್ತಿರುವುದಾಗಿ ತಿಳಿಸಿದೆ. ಗುರುವಾರದ ಬಳಿಕ ಈಗಿರುವ ವೊಡಾಫೋನ್ ಐಡಿಯಾ ಬೇಸಿಕ್ ಯೋಜನೆಯ 79₹ ಪ್ಯಾಕ್‌ ಬೆಲೆಯು 99₹ಗೆ ಏರಿಕೆಯಾಗಲಿದೆ. 149₹ ಪ್ಯಾಕ್‌ ಬೆಲೆಯ 179₹ಗೆ ಹೆಚ್ಚಳವಾಗಲಿದ್ದರೆ, 1,498₹ ಪ್ಲ್ಯಾನ್ ದರ 1,799₹ಗೆ ಹಾಗೂ 2,399₹ ಪ್ಯಾಕ್‌ ದರ 2,899₹ಗೆ ಏರಿಕೆಯಾಗಲಿದೆ ಜೊತೆಗೆ ಡೇಟಾ ಆನ್ ಪ್ಯಾಕ್‌ಗಳ ಬೆಲೆಗಳು ಕೂಡ ಹೆಚ್ಚಳವಾಗಿವೆ.

ಸಾಮಾನ್ಯವಾಗಿ ಹೆಚ್ಚು ಬಳಸುವ, 28 ದಿನಗಳವರೆಗಿನ 1.5GB ಡೇಟಾ ಪ್ಯಾಕ್‌ ಬೆಲೆಯು ₹249 ರಿಂದ ರೆ ₹299 ಗಳಿಗೆ ಹೆಚ್ಚಳವಾಗಿದೆ. ಹಾಗೆಯೇ, 1GB ಡೇಟಾ ಪ್ಯಾಕ್‌ಗೆ ಈ ಹಿಂದಿನ ₹219 ಬದಲಿಗೆ ₹269 ಶುಲ್ಕ ವಿಧಿಸಲಾಗುತ್ತದೆ. ₹299 ರ 2GB ಡೇಟಾ ಪ್ಯಾಕ್ ಪ್ರಸ್ತುತ ₹359 ಕ್ಕೆ ಏರಿದೆ. ಈಗ ಅಸ್ತಿತ್ವದಲ್ಲಿರುವ 2GB ಡೇಟಾದ 56 ದಿನಗಳ ಪ್ಯಾಕ್ ₹449 ರಿಂದ ₹539 ಕ್ಕೆ ಏರಿದೆ. ಅಂತೆಯೇ, 56 ದಿನಗಳವರೆಗೆ ಮಾನ್ಯವಾಗಿರುವ 1.5GB ಡೇಟಾ ಪ್ಯಾಕ್ ಅನ್ನು ₹399 ರ ಬದಲಿಗೆ ₹479 ಕ್ಕೆ ಏರಿಸಲಾಗಿದೆ. 84 ದಿನಗಳ ಕಾಲ ಪ್ರತಿ ದಿನ 2GB ಡೇಟಾ ನೀಡುವ ₹699 ರೂ. ಪ್ಯಾಕ್ ಬೆಲೆ ₹839 ರಷ್ಟಾಗುತ್ತದೆ. 84 ದಿನಗಳವರೆಗೆ ದಿನಕ್ಕೆ 1.5GB ಡೇಟಾ ಪ್ಯಾಕ್ ಪ್ರಸ್ತುತ ₹599 ಬೆಲೆ ಹೊಂದಿದ್ದು, ಇದರ ಬೆಲೆಯು ₹719 ಗೆ ಏರಿಕೆಯಾಗಿದೆ.

ಇನ್ನು ಹೆಚ್ಚು ಡೇಟಾವನ್ನು ಹೊಂದಿರುವ, 84 ದಿನಗಳ ರೀಚಾರ್ಜ್ ಪ್ಯಾಕ್ ಬೆಲೆ ಮೊದಲು ₹699 ಆಗಿದ್ದು, ಪ್ರತಿ ದಿನ 2GB ಡೇಟಾವನ್ನು ನೀಡುವ ಈ ಯೋಜನೆಯ ಬೆಲೆಯು ನವೆಂಬರ್ 25 ರಿಂದ ₹839 ರಷ್ಟಾಗುತ್ತದೆ. 84 ದಿನಗಳವರೆಗೆ ದಿನಕ್ಕೆ 1.5GB ಡೇಟಾ ನೀಡುವ ಪ್ಯಾಕ್ ಪ್ರಸ್ತುತ ₹599 ರಿಂದ ₹719 ಗೆ ಏರಿಕೆಯಾಗುತ್ತಿದೆ. 24GB ಡೇಟಾ ನೀಡುತ್ತಿರುವ ₹1499 ರ ವಾರ್ಷಿಕ ಪ್ಯಾಕ್ ಈಗ ₹1799 ವೆಚ್ಚವಾಗುತ್ತದೆ. ಟಾಪ್ ಅಪ್ ಪ್ಯಾಕ್‌ಗಳನ್ನು ಕೂಡ ಪರಿಷ್ಕರಿಸಲಾಗಿದ್ದು, 28 ದಿನಗಳಿಗೆ ಲಭ್ಯವಿದ್ದ ₹48 ರೂ. ಪ್ಯಾಕ್ ಇದೀಗ ₹58ಗೆ ಏರಿಕೆಯಾಗಿದೆ. 98₹ ಇರುವ ದರ 118₹ಗೆ, 251₹ ದರ 298₹ಕ್ಕೆ, 351₹ ಇರುವ ದರ 418₹ಗೆ ಏರಿಕೆಯಾಗಲಿದೆ.
ಸಿಹಿಸುದ್ದಿ!..ಜಿಯೋ 5G ಪ್ರಯೋಗದಲ್ಲಿ Redmi Note 11T 5G ಯಶಸ್ವಿ!
ಟೆಲಿಕಾಂ ದೈತ್ಯ ಭಾರ್ತಿ ಏರ್‌ಟೆಲ್‌ ಸೋಮವಾರ ಪ್ರಿಪೇಯ್ಡ್‌ ಪ್ಲ್ಯಾನ್‌ ದರಗಳನ್ನು ಏರಿಕೆ ಮಾಡುವುದಾಗಿ ಘೋಷಿಸಿದ ಬೆನ್ನಲ್ಲೇ ವೊಡಾಫೋನ್‌ ಕೂಡ ಇದೇ ನಿರ್ಧಾರ ಘೋಷಿಸಿದೆ. ಏರ್‌ಟೆಲ್‌ ಪ್ರಿಪೇಯ್ಡ್‌ ಪ್ಲ್ಯಾನ್‌ ದರಗಳನ್ನು ಶೇ. 25ರಷ್ಟು ಏರಿಕೆ ಮಾಡಿದ್ದು ನೂತನ ದರಗಳು ನವೆಂಬರ್‌ 26ರಿಂದ ಜಾರಿಗೆ ಬರಲಿವೆ.ಏರ್‌ಟೆಲ್‌ ಪ್ರಿಪೇಯ್ಡ್‌ ಚಂದಾ ದರಗಳನ್ನು ಏರಿಕೆ ಮಾಡಿದ ಬೆನ್ನಲ್ಲೇ ಕಂಪನಿಯ ಷೇರುಗಳು ಭಾರಿ ಏರಿಕೆ ಕಂಡಿದ್ದರೆ, ವೊಡಾಫೋನ್‌ ಐಡಿಯಾ ಷೇರುಗಳು ಮಂಗಳವಾರ ಶೇ. 0.28ರಷ್ಟು ಕಡಿಮೆ ಬೆಲೆಗೆ ಅಂದರೆ 10.63 ರೂ. ದರದಲ್ಲಿ ವಹಿವಾಟು ನಡೆಸುತ್ತಿದ್ದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌