ಆ್ಯಪ್ನಗರ

WhatsApp: ಸಾಮಾಜಿಕ ಹೋರಾಟಗಾರರು-ಪತ್ರಕರ್ತರ ಮೇಲೆ ಕಳ್ಗಣ್ಣು

ಜಗತ್ತಿನಾದ್ಯಂತ 150 ಕೋಟಿ ಮಂದಿ ವಾಟ್ಸ್‌ಆ್ಯಪ್‌ ಬಳಕೆದಾರರಿದ್ದಾರೆ. ಅವರಿಗೆ ವಾಯ್ಸ್‌ ಕರೆ ಮಾಡುವ ಮೂಲಕ ಸ್ಪೈವೇರನ್ನು ಮೊಬೈಲ್‌ಗೆ ಅಳವಡಿಸಲಾಗಿತ್ತು. ಬಳಿಕ ಅವರ ಖಾಸಗಿ ಮಾಹಿತಿಗಳನ್ನು ದೋಚಲಾಗಿದೆ.

Agencies 15 May 2019, 8:44 am
ಸ್ಯಾನ್‌ಫ್ರಾನ್ಸಿಸ್ಕೊ: ಜಗತ್ತಿನ ಅತ್ಯಂತ ಜನಪ್ರಿಯ ಸಂದೇಶ ರವಾನೆ ಆ್ಯಪ್‌ ಎಂಬ ಹೆಗ್ಗಳಿಕೆಯ ವಾಟ್ಸ್‌ಆ್ಯಪ್‌ ಮಂಗಳವಾರ ಹ್ಯಾಕ್‌ ಆಗಿದೆ. ಇಸ್ರೇಲ್‌ ಮೂಲದ ಎನ್‌ಎಸ್‌ಒ ಗ್ರೂಪ್‌ ಸ್ಪೈವೇರ್‌(ಗೂಢಚಾರಿ ಸಾಫ್ಟ್‌ವೇರ್‌) ಅಭಿವೃದ್ಧಿಪಡಿಸಿ ಹ್ಯಾಕರ್ಸ್‌ಗೆ ನೀಡಿದ್ದು, ಈ ಮೂಲಕ ಅನೇಕ ಮೊಬೈಲ್‌ನಲ್ಲಿ ಖಾಸಗಿ ಮಾಹಿತಿಯನ್ನು ದೋಚಲಾಗಿದೆ ಎಂದು ತಂತ್ರಜ್ಞಾನ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
Vijaya Karnataka Web whastapp


ಜಗತ್ತಿನಾದ್ಯಂತ 150 ಕೋಟಿ ಮಂದಿ ವಾಟ್ಸ್‌ಆ್ಯಪ್‌ ಬಳಕೆದಾರರಿದ್ದಾರೆ. ಅವರಿಗೆ ವಾಯ್ಸ್‌ ಕರೆ ಮಾಡುವ ಮೂಲಕ ಸ್ಪೈವೇರನ್ನು ಮೊಬೈಲ್‌ಗೆ ಅಳವಡಿಸಲಾಗಿತ್ತು. ಬಳಿಕ ಅವರ ಖಾಸಗಿ ಮಾಹಿತಿಗಳನ್ನು ದೋಚಲಾಗಿದೆ. ಸರಕಾರಗಳಿಗೆ ಕೆಲವು ಆಂತರಿಕ ಮಾಹಿತಿಗಳನ್ನು ಒದಗಿಸಲು ಸ್ಪೈವೇರ್‌ ಅಭಿವೃದ್ಧಿ ಮಾಡಿಕೊಡುವ ಖಾಸಗಿ ಕಂಪನಿ ಈ ಕೃತ್ಯದಲ್ಲಿ ಶಾಮೀಲಾಗಿದೆ ಎಂಬುದು ನಮ್ಮ ನಂಬಿಕೆ ಎಂದು ಹ್ಯಾಕ್‌ ಆಗಿರುವುದನ್ನು ವಾಟ್ಸ್‌ಆ್ಯಪ್‌ ಕಂಪನಿ ಒಪ್ಪಿಕೊಂಡಿದೆ.

ವಾಟ್ಸ್‌ಆ್ಯಪ್‌ ವರ್ಷನ್‌ 2.19.134 ಬಳಕೆದಾರರಿಗೆ ಹೆಚ್ಚಾಗಿ ಹ್ಯಾಕ್‌ನಿಂದ ಅನನುಕೂಲ ಉಂಟಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಮಾನವ ಹಕ್ಕು ಹೋರಾಟಗಾರರ ವಿರೋಧಎನ್‌ಎಸ್‌ಒ ಗ್ರೂಪ್‌ ಅಭಿವೃದ್ಧಿಪಡಿಸಿರುವ ಸ್ಪೈವೇರ್‌ ಉತ್ಪನ್ನಗಳು ಮಾನವ ಹಕ್ಕುಗಳ ಹೋರಾಟಗಾರರ ಖಾಸಗಿ ಮಾಹಿತಿಗಳನ್ನು ಕದಿಯಲು ಹೆಚ್ಚಾಗಿ ಬಳಕೆಯಾಗುತ್ತಿದೆ. ಹಾಗಾಗಿ ರಫ್ತು ಪರವಾನಗಿ ರದ್ದುಗೊಳಿಸಿ ಎಂದು ಇಸ್ರೇಲ್‌ ರಕ್ಷಣಾ ಸಚಿವಾಲಯದ ಮೇಲೆ ಹೋರಾಟಗಾರರು ಮುಂಚಿನಿಂದಲೂ ಒತ್ತಡ ಹೇರಿದ್ದಾರೆ. ಆಮ್‌ನೆಸ್ಟಿ ಇಂಟರ್‌ನ್ಯಾಷನಲ್‌ ಸಂಸ್ಥೆ ಹೋರಾಟಗಾರರು ಸೇರಿದಂತೆ ಹಲವರು ಬುಧವಾರ ಇಸ್ರೇಲ್‌ ರಕ್ಷಣಾ ಸಚಿವಾಲಯ ವಿರುದ್ಧ ಜಿಲ್ಲಾ ಕೋರ್ಟ್‌ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌