ಆ್ಯಪ್ನಗರ

WhatsApp: ಆ್ಯಂಡ್ರಾಯ್ಡ್‌ಗೆ ಡಾರ್ಕ್‌ಮೋಡ್ ಅನುಮಾನ

ವಾಟ್ಸಪ್‌ನ ಬೇಟಾ ವರ್ಷನ್‌ನಲ್ಲಿ ಡಾರ್ಕ್‌ ಮೋಡ್ ಆಯ್ಕೆ ಪರಿಶೀಲಿಸಲಾಗುತ್ತಿತ್ತು. ಆದರೆ ಆ್ಯಂಡ್ರಾಯ್ಡ್ ವಾಟ್ಸಪ್‌ನಲ್ಲಿ ಡಾರ್ಕ್ ಮೋಡ್ ಅನ್ನು ಹಿಂಪಡೆಯಲಾಗಿದೆ.

Times Now 2 May 2019, 1:12 pm
ವಾಟ್ಸಪ್‌ ಹಲವು ಅಪ್‌ಡೇಟ್ ಮೂಲಕ ವಿವಿಧ ಫೀಚರ್, ಆಯ್ಕೆಗಳನ್ನು ಬಳಕೆದಾರರಿಗೆ ನೀಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನರು ವಿವಿಧ ಆ್ಯಪ್ ಮತ್ತು ಡಿವೈಸ್‌ಗಳಲ್ಲಿ ಡಾರ್ಕ್ ಮೋಡ್, ನೈಟ್ ಮೋಡ್ ಆಯ್ಕೆ ಬಯಸುತ್ತಾರೆ.

ಹೀಗಾಗಿ ಜನಪ್ರಿಯ ಮೆಸೇಜಿಂಗ್ ತಾಣ ವಾಟ್ಸಪ್ ಕೂಡ ಡಾರ್ಕ್‌ ಮೋಡ್ ಪರಿಚಯಿಸಲು ಮುಂದಾಗಿತ್ತು.

ವಾಟ್ಸಪ್‌ನ ಬೇಟಾ ವರ್ಷನ್‌ನಲ್ಲಿ ಡಾರ್ಕ್‌ ಮೋಡ್ ಆಯ್ಕೆ ಪರಿಶೀಲಿಸಲಾಗುತ್ತಿತ್ತು. ಆದರೆ ಆ್ಯಂಡ್ರಾಯ್ಡ್ ವಾಟ್ಸಪ್‌ನಲ್ಲಿ ಡಾರ್ಕ್ ಮೋಡ್ ಅನ್ನು ಹಿಂಪಡೆಯಲಾಗಿದೆ.

ಆ್ಯಪಲ್ ಐಫೋನ್ ಆವೃತ್ತಿಗೆ ವಾಟ್ಸಪ್ ಡಾರ್ಕ್‌ ಮೋಡ್ ಪರಿಶೀಲನೆಯಲ್ಲಿದೆ. ವಾಟ್ಸಪ್‌ನ ಬೇಟಾ ಟೆಸ್ಟಿಂಗ್ ಮತ್ತು ಅಪ್‌ಡೇಟ್ಸ್‌ ಬಗ್ಗೆ ಮಾಹಿತಿ ನೀಡುವ ವಾಬೇಟಾಇನ್ಫೋ, ಆ್ಯಂಡ್ರಾಯ್ಡ್ ಆವೃತ್ತಿಯಲ್ಲಿ ಡಾರ್ಕ್ ಮೋಡ್ ಪರಿಶೀಲನೆಯನ್ನು ನಿಲ್ಲಿಸಿದೆ ಎಂದು ಹೇಳಿದೆ.

ಡಾರ್ಕ್ ಮೋಡ್, ಕಣ್ಣಿಗೆ ಹೆಚ್ಚು ಶ್ರಮಬೀಳುವುದನ್ನು ತಡೆಯುವುದಲ್ಲದೆ, ಹೆಚ್ಚು ಸಮಯ ಸ್ಮಾರ್ಟ್‌ಫೋನ್ ನೋಡುವವರಿಗೆ ಅನುಕೂಲವಾಗಲಿದೆ. ಈ ಮೊದಲು ವಾಟ್ಸಪ್ ಆಂಡ್ರಾಯ್ಡ್ ಬೇಟಾ ಆವೃತ್ತಿಯಲ್ಲಿ ಡಾರ್ಕ್ ಮೋಡ್ ಪರಿಶೀಲನೆ ಮಾಡಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌