ಆ್ಯಪ್ನಗರ

WhatsApp ಗ್ರೂಪ್‌ ಅಡ್ಮಿನ್‌ಗಳಿಗೆ ಮತ್ತೊಂದು ಸಿಹಿಸುದ್ದಿ!

WhatsApp ನಲ್ಲಿ 'ಅಡ್ಮಿನ್ ಅಪ್ರೂವಲ್' ವೈಶಿಷ್ಟ್ಯವು ಲಭ್ಯವಿದ್ದಾಗ ಇದನ್ನು ಹಸ್ತಚಾಲಿತವಾಗಿ ಆನ್ ಮಾಡಬೇಕಾಗುತ್ತದೆ. ಈ ವೈಶಿಷ್ಟ್ಯವನ್ನು ಆನ್ ಅಥವಾ ಆಫ್ ಮಾಡಲು WhatsApp ಗ್ರೂಪ್‌ ಸೆಟ್ಟಿಂಗ್ಸ್‌ನಲ್ಲಿ “group membership approval” ಎಂಬ ಆಯ್ಕೆ ಕಾಣಿಸಿಕೊಳ್ಳಲಿದೆ.

Vijaya Karnataka Web 17 Jun 2022, 1:36 pm
ಜನಪ್ರಿಯ ಇನ್‌ಸ್ಟಂಟ್ ಮೆಸೇಜಿಂಗ್ ಅಪ್ಲಿಕೇಷನ್ WhatsApp ನಲ್ಲಿ ಗ್ರೂಪ್‌ಗಳನ್ನು ತ್ವರಿತವಾಗಿ ರಚಿಸಲು ಸಹಾಯವಾಗುವಂತೆ WhatsApp ಗ್ರೂಪ್ ಲಿಂಕ್‌ಗಳನ್ನು ಒದಗಿಸಲಾಗಿತ್ತು. ಈ ಲಿಂಕ್‌ಗಳ ಸಹಾಯದಿಂದ ಹಲವಾರು ಜನರು ಸುಲಭವಾಗಿ ಆ ಗ್ರೂಪ್‌ನ ಸದಸ್ಯರಾಗಬಹುದಾದ ಆಯ್ಕೆ ಇತ್ತು. ಇದು ಒಂದು ಅನುಕೂಲಕರ ವೈಶಿಷ್ಟ್ಯವಾಗಿ ಹೊರಹೊಮ್ಮಿದ್ದರೂ ಸಹ ಸುರಕ್ಷತಾ ಸಮಸ್ಯೆಯನ್ನು ತಂದೊಡ್ಡಿತ್ತು. ಏಕೆಂದರೆ, WhatsApp ಗ್ರೂಪ್ ಲಿಂಕ್‌ ಅನ್ನು ಬಳಸಿ ಯಾರಾದರೂ ಆ ಗ್ರೂಪ್ ಸದಸ್ಯರಾಗಬಹುದಾದ ಆಯ್ಕೆ ಲಭ್ಯವಾಗುತ್ತಿತ್ತು. ಆದರೆ, ಇನ್ಮುಂದೆ ಇಂತಹ ಸಮಸ್ಯೆ ಎದುರಾಗುವುದಿಲ್ಲ.! ಏಕೆಂದರೆ, WhatsApp ಗ್ರೂಪ್ ಅಡ್ಮಿನ್‌ಗಳು ಲಿಂಕ್ ಮೂಲಕ ಗ್ರೂಪ್‌ಗೆ ಸೇರುವ ಜನರ ವಿನಂತಿಗಳನ್ನು ಸ್ವೀಕರಿಸಲು ಅಥವಾ ನಿರಾಕರಿಸಲು WhatsApp ಅನುಮತಿಸಲು ನೀಡುತ್ತಿದೆ.
Vijaya Karnataka Web WhatsApp ಗ್ರೂಪ್‌ ಅಡ್ಮಿನ್‌ಗಳಿಗೆ ಮತ್ತೊಂದು ಸಿಹಿಸುದ್ದಿ!


ಹೌದು, WhatsApp ಗ್ರೂಪ್ ಲಿಂಕ್‌ ಅನ್ನು ಬಳಸಿ ಯಾರಾದರೂ ಆ ಗ್ರೂಪ್ ಸದಸ್ಯರಾಗಬಹುದಾದ ಸಮಸ್ಯೆಯನ್ನು ಸರಿಪಡಿಸಲು WhatsApp ಮುಂದಾಗಿದೆ. ಇತ್ತೀಚಿನ WhatsApp ಬೀಟಾ ಅಪ್‌ಡೇಟ್‌ ಹೊಸದಾಗಿ 'ಅಡ್ಮಿನ್ ಅಪ್ರೂವಲ್' ವೈಶಿಷ್ಟ್ಯವನ್ನು ಸಹ ಒಳಗೊಂಡಿದ್ದು, ಇದನ್ನು ಸಕ್ರಿಯಗೊಳಿಸಿದಾಗ, WhatsApp ಗ್ರೂಪ್ ನಿರ್ವಾಹಕರು ಲಿಂಕ್ ಮೂಲಕ ಗ್ರೂಪ್ ಅನ್ನು ಸೇರಲು ಬಯಸುವ ಜನರ ವಿನಂತಿಗಳನ್ನು ಸ್ವೀಕರಿಸಲು ಅಥವಾ ನಿರಾಕರಿಸಲು ಅನುಮತಿಸುತ್ತದೆ ಎಂದು WABetaInfo ವರದಿ ಮಾಡಿದೆ. ಪ್ರಸ್ತುತ WhatsApp ಬೀಟಾ ಬಳಕೆದಾರರಿಗೆ ಈ 'ಅಡ್ಮಿನ್ ಅಪ್ರೂವಲ್' ವೈಶಿಷ್ಟ್ಯವನ್ನು ತರಲಾಗಿದ್ದು, ಶೀಘ್ರದಲ್ಲೇ Android ಮತ್ತು iOS ಎರಡರಲ್ಲೂ ಅಪ್ಲಿಕೇಶನ್‌ನ ಸ್ಥಿರ ಆವೃತ್ತಿಗಳಿಗೆ 'ಅಡ್ಮಿನ್ ಅಪ್ರೂವಲ್' ವೈಶಿಷ್ಟ್ಯವು ಲಭ್ಯವಿರುತ್ತದೆ ಎಂದು ವರದಿಯಲ್ಲಿ ಸೂಚಿಸಲಾಗಿದೆ.
ವಿವಾಹಿತ ಮಹಿಳೆಯರು ಗೂಗಲ್‌ನಲ್ಲಿ ಸರ್ಚ್ ಮಾಡುವುದೇನು ಗೊತ್ತಾ?..ಇಲ್ಲಿ ನೋಡಿ!
WhatsApp ನಲ್ಲಿ 'ಅಡ್ಮಿನ್ ಅಪ್ರೂವಲ್' ವೈಶಿಷ್ಟ್ಯವು ಲಭ್ಯವಿದ್ದಾಗ ಇದನ್ನು ಹಸ್ತಚಾಲಿತವಾಗಿ ಆನ್ ಮಾಡಬೇಕಾಗುತ್ತದೆ. ಈ ವೈಶಿಷ್ಟ್ಯವನ್ನು ಆನ್ ಅಥವಾ ಆಫ್ ಮಾಡಲು WhatsApp ಗ್ರೂಪ್‌ ಸೆಟ್ಟಿಂಗ್ಸ್‌ನಲ್ಲಿ “group membership approval” ಎಂಬ ಆಯ್ಕೆ ಕಾಣಿಸಿಕೊಳ್ಳಲಿದೆ. ಪ್ರತಿ ಬಾರಿ ಈ ವೈಶಿಷ್ಟ್ಯವನ್ನು ಆನ್ ಅಥವಾ ಆಫ್ ಮಾಡಿದಾಗ, ಗ್ರೂಪ್‌ನಲ್ಲಿರುವ ಎಲ್ಲಾ ಅಸ್ತಿತ್ವದಲ್ಲಿರುವ ಬಳಕೆದಾರರಿಗೆ ಬದಲಾವಣೆಯ ಬಗ್ಗೆ ತಿಳಿಸಲು ತ್ವರಿತ ಎಚ್ಚರಿಕೆಯನ್ನು ಕಳುಹಿಸಲಾಗುತ್ತದೆ ಎಂದು WABetaInfo ವರದಿಯು ತಿಳಿಸಿದೆ. ಈ ವೈಶಿಷ್ಟ್ಯದ ಬಳಕೆಯಿಂದ ಅನ್ಯ ವ್ಯಕ್ತಿಗಳು ಸುಲಭವಾಗಿ, ಅಂದರೆ WhatsApp ಗ್ರೂಪ್ ಲಿಂಕ್‌ಗಳ ಸಹಾಯದಿಂದ ಯಾವುದೇ WhatsApp ಗ್ರೂಪ್‌ಗೆ ಅನುಮತಿ ಇಲ್ಲದೆ ಸದಸ್ಯರಾಗಲು ಸಾಧ್ಯವಿಲ್ಲದಂತಾಗಿಸುತ್ತದೆ ಎಂದು WABetaInfo ವರದಿಯಲ್ಲಿ ಹೇಳಲಾಗಿದೆ.

ಇನ್ನು ಇತ್ತೀಚಿಗಷ್ಟೇ WhatsApp ಗ್ರೂಪಿನಲ್ಲಿರುವ ಯಾವುದೇ ಬಳಕೆದಾರರ ಸಂದೇಶಗಳನ್ನು ಅಳಿಸಲು ಆ ಗ್ರೂಪ್ ಅಡ್ಮಿನ್‌ಗಳಿಗೆ ಅವಕಾಶ ನೀಡುವ ವೈಶಿಷ್ಟ್ಯದಲ್ಲಿ WhatsApp ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ. WhatsApp ಗ್ರೂಪಿನಲ್ಲಿನ ಸದಸ್ಯರು ಕಳುಹಿಸುವ ಯಾವುದೇ ಸಂದೇಶಗಳನ್ನು ಗ್ರೂಪ್ ಅಡ್ಮಿನ್‌ಗಳು ಡಿಲೀಟ್ ಮಾಡಬಹುದಾದ ಆಯ್ಕೆ ಶೀಘ್ರದಲ್ಲೇ ಸಿಗಲಿದ್ದು, ಇದರಿಂದ ಅಸಂಬದ್ಧ, ಅನಗತ್ಯ, ಪ್ರಚೋದಿತ ಅಥವಾ ಗ್ರೂಪ್‌ಗಳಲ್ಲಿ ಬರಬಹುದಾದ ಇನ್ಯಾವುದೇ ಸಂದೇಶ ಹಾಗೂ ಗ್ರೂಪ್ ನಿಯಮಗಳನ್ನು ಮೀರಿದ ಯಾವುದೇ ಸಂದೇಶಗಳನ್ನು ಅಳಿಸುವ ಸ್ವಾತಂತ್ರ್ಯವನ್ನು ಅಡ್ಮಿನ್‌ಗೆ ನೀಡಲಾಗುತ್ತಿದೆ. ಈ ನೂತನ ಫೀಚರ್ ಕೂಡ ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿದೆ ಎಂದು ವಾಟ್ಸ್ಆಪ್ ಬೀಟಾ ಇನ್ಫೋ ವರದಿ ಮಾಡಿತ್ತು. ಇದೀಗ ಈ ಎರಡೂ ವೈಶಿಷ್ಟ್ಯಗಳು ಕುತೂಹಲ ಮೂಡಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌