ಆ್ಯಪ್ನಗರ

WhatsApp Status: ದೇಶದಲ್ಲಿ ವಾಟ್ಸಪ್ ಸ್ಟೇಟಸ್‌ಗೆ ಮಿತಿ!

ವರ್ಕ್ ಫ್ರಮ್ ಹೋಮ್‌ ಒಂದೆಡೆಯಾದರೆ, ಕೆಲವೊಂದು ಕಂಪನಿಗಳು ಉದ್ಯೋಗಿಗಳಿಗೆ ರಜೆ ನೀಡಿದ್ದು, ಜನರು ಮನೆಯಲ್ಲಿ ಕಾಲ ಕಳೆಯಲು ಹೆಚ್ಚಿನ ಸಮಯ ಇಂಟರ್‌ನೆಟ್‌ನಲ್ಲಿ ಕಳೆಯುತ್ತಿದ್ದಾರೆ.

Vijaya Karnataka Web 30 Mar 2020, 10:57 am
ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಪ್‌ ಸ್ಟೇಟಸ್‌ಗೆ ಸಮಯದ ಮಿತಿ ಹೇರಲಾಗಿದೆ. ದೇಶದಲ್ಲಿ ಲಾಕ್‌ಡೌನ್ ಆಗಿರುವುದರಿಂದ, ಜನರು ಮನೆಯಲ್ಲೇ ಇರಬೇಕಾಗಿದೆ. ಹೀಗಿರುವಾಗ ಹೆಚ್ಚಿನ ಡೇಟಾ ಮತ್ತು ಇಂಟರ್‌ನೆಟ್ ಬಳಕೆಗೆ ಬೇಡಿಕೆಯಿದ್ದು, ವಾಟ್ಸಪ್ ಕೂಡ ಸ್ಟೇಟಸ್‌ಗೆ ಮಿತಿ ಹೇರಿದೆ.
Vijaya Karnataka Web WhatsApp
WhatsApp Status


ಈ ಮೊದಲು ವಾಟ್ಸಪ್ ಬಳಕೆದಾರರು 30 ಸೆಕೆಂಡ್‌ಗಳ ವಿಡಿಯೋವನ್ನು ಸ್ಟೇಟಸ್‌ನಲ್ಲಿ ಹಂಚಿಕೊಳ್ಳಬಹುದಾಗಿತ್ತು. ಆದರೆ ಹೊಸ ಅಪ್‌ಡೇಟ್‌ ಮೂಲಕ ಬಳಕೆದಾರರು 15 ಸೆಕೆಂಡ್ ಮಾತ್ರ ವಿಡಿಯೋ ಹಂಚಿಕೊಳ್ಳಬಹುದು.

ಅಲ್ಲದೆ ಆನ್‌ಲೈನ್ ವಿಡಿಯೋ ಸ್ಟ್ರೀಮಿಂಗ್ ಸರ್ವಿಸ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ಗಳು ಕೂಡ ಎಚ್‌ಡಿ ಬದಲಿಗೆ, ಎಸ್‌ಡಿ ಕಂಟೆಂಟ್ ಅನ್ನು ನೀಡುತ್ತಿದೆ. ಡೇಟಾ ಉಳಿತಾಯ ಮತ್ತು ಬೇಡಿಕೆಯನ್ನು ಸರಿದೂಗಿಸಲು ಈ ಕ್ರಮ ಅನಿವಾರ್ಯವಾಗಿದೆ.

WhatsApp Chat: ಕೊರೊನಾ ಸಂಶಯವಿದ್ದರೆ ವಾಟ್ಸಪ್ ಚಾಟ್ ಮಾಡಿ..

ವರ್ಕ್ ಫ್ರಮ್ ಹೋಮ್‌ ಒಂದೆಡೆಯಾದರೆ, ಕೆಲವೊಂದು ಕಂಪನಿಗಳು ಉದ್ಯೋಗಿಗಳಿಗೆ ರಜೆ ನೀಡಿದ್ದು, ಜನರು ಮನೆಯಲ್ಲಿ ಕಾಲ ಕಳೆಯಲು ಹೆಚ್ಚಿನ ಸಮಯ ಇಂಟರ್‌ನೆಟ್‌ನಲ್ಲಿ ಕಳೆಯುತ್ತಿದ್ದಾರೆ. ಹೀಗಾಗಿ ವಾಟ್ಸಪ್ ಕೂಡ ಕಡಿಮೆ ಡೇಟಾ ಬಳಕೆಗೆ ಅದ್ಯತೆ ನೀಡಲು, ಸ್ಟೇಟಸ್ ಅವಧಿಯಲ್ಲಿ 15 ಸೆಕೆಂಡ್ ಇಳಿಕೆ ಮಾಡಿದೆ.

WhatsApp Document: ವರ್ಡ್ ಫೈಲ್ ವಾಟ್ಸಪ್‌ನಲ್ಲಿ ಕಳುಹಿಸುವುದು ಹೇಗೆ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌