ಆ್ಯಪ್ನಗರ

WhatsApp QR Code: ದೇಶದ ಬಳಕೆದಾರರಿಗೆ ಲಭ್ಯವಾಗುತ್ತಿದೆ ವಾಟ್ಸಪ್ ಹೊಸ ಫೀಚರ್

ನಿಮ್ಮ ಗ್ಯಾಲರಿಯಲ್ಲಿ ಇತರರು ಕಳುಹಿಸಿದ್ದ ವಾಟ್ಸಪ್ ಕ್ಯೂಆರ್ ಕೋಡ್ ಇದ್ದರೆ, ಅದನ್ನು ಸ್ಕ್ಯಾನ್ ಮಾಡುವ ಆಯ್ಕೆಯೂ ಇಲ್ಲಿ ದೊರೆಯುತ್ತದೆ.

Vijaya Karnataka Web 10 Jul 2020, 1:25 pm
ವಾಟ್ಸಪ್ ಇತ್ತೀಚೆಗೆ ಘೋಷಿಸಿದ್ದ ನೂತನ ಕ್ಯೂಆರ್ ಕೋಡ್ ಫೀಚರ್ ಈಗ ದೇಶದ ಬಳಕೆದಾರರಿಗೆ ಲಭ್ಯವಾಗುತ್ತಿದೆ. ಇದರಿಂದ ವಾಟ್ಸಪ್ ಕಾಂಟಾಕ್ಟ್‌ಗಳನ್ನು ಸೇರಿಸಿಕೊಳ್ಳುವುದು ಮತ್ತು ಇತರರೊಡನೆ ಹಂಚಿಕೊಳ್ಳುವುದು ಸುಲಭವಾಗಲಿದೆ. ಹೊಸ ಅಪ್‌ಡೇಟ್ ಮೂಲಕ ವಾಟ್ಸಪ್ ಈ ಫೀಚರ್ ಪರಿಚಯಿಸಿದೆ.
Vijaya Karnataka Web WhatsApp QR code
WhatsApp Update


ಹೊಸ ಅಪ್‌ಡೇಟ್‌ನಲ್ಲಿ ವಾಟ್ಸಪ್ ಕ್ಯೂಆರ್ ಕೋಡ್, ಡೆಸ್ಕ್‌ಟಾಪ್ ಆವೃತ್ತಿಯಲ್ಲಿ ಡಾರ್ಕ್ ಮೋಡ್ ಅನ್ನು ದೇಶದಲ್ಲಿ ವಾಟ್ಸಪ್ ಬಿಡುಗಡೆ ಮಾಡಿದೆ.

ಏನಿದು ಕ್ಯೂಆರ್ ಕೋಡ್?
ಹೊಸ ವಾಟ್ಸಪ್ ಕಾಂಟಾಕ್ಟ್ ಸೇರಿಸುವುದು ಮತ್ತು ನಿಮ್ಮ ವಾಟ್ಸಪ್ ಸಂಖ್ಯೆಯನ್ನು ಹಂಚಿಕೊಳ್ಳುವುದನ್ನು ಇದು ಸುಲಭವಾಗಿಸುತ್ತದೆ. ಅಂದರೆ, ಹೊಸದಾಗಿ ಕಾಂಟಾಕ್ಟ್ ಸೇರಿಸಿಕೊಳ್ಳಲು ನಂಬರ್ ಎಂಟರ್ ಮಾಡುವುದು, ಹೆಸರು ಕೊಡುವ ಕೆಲಸ ಉಳಿಯುತ್ತದೆ. ನೇರವಾಗಿ ಅವರ ವಾಟ್ಸಪ್‌ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದರೆ ಸಾಕಾಗುತ್ತದೆ.

ಕ್ಯೂಆರ್ ಕೋಡ್ ಬಳಕೆ ಹೇಗೆ?
ವಾಟ್ಸಪ್ ತೆರೆಯಿರಿ
ಮೋರ್ ಆಪ್ಷನ್ಸ್ ಕೊಡಿ
ಸೆಟ್ಟಿಂಗ್ಸ್ ಓಪನ್ ಮಾಡಿ
ನಿಮ್ಮ ಹೆಸರಿನ ನಂತರದಲ್ಲಿ ಕ್ಯೂಆರ್ ಕೋಡ್ ಕಾಣಿಸಿಕೊಳ್ಳುತ್ತದೆ.
ಅದನ್ನು ಕ್ಲಿಕ್ ಮಾಡಿದಾಗ ನಿಮ್ಮ ಕ್ಯೂಆರ್ ಕೋಡ್ ಓಪನ್ ಆಗುತ್ತದೆ. ಜತೆಗೆ ಅಲ್ಲಿ ಸ್ಕ್ಯಾನ್ ಕೋಡ್ ಆಯ್ಕೆಯೂ ದೊರೆಯುತ್ತದೆ. ನಂತರ ಆಡ್ ಕೊಟ್ಟರೆ ಸಾಕು.

ಕ್ಯೂಆರ್ ಕೋಡ್ ಬಳಕೆ ಹೇಗೆ?



ವಾಟ್ಸಪ್ ಕ್ಯಾಮರ ಮೂಲಕವೂ ಸ್ಕ್ಯಾನ್ ಮಾಡಬಹುದು.
ಜತೆಗೆ ನಿಮ್ಮ ಗ್ಯಾಲರಿಯಲ್ಲಿ ಇತರರು ಕಳುಹಿಸಿದ್ದ ವಾಟ್ಸಪ್ ಕ್ಯೂಆರ್ ಕೋಡ್ ಇದ್ದರೆ, ಅದನ್ನು ಸ್ಕ್ಯಾನ್ ಮಾಡುವ ಆಯ್ಕೆಯೂ ಇಲ್ಲಿ ದೊರೆಯುತ್ತದೆ.

Channel Selector App: ಟ್ರಾಯ್ ಆ್ಯಪ್ ಬಳಸಿ, ಕೇಬಲ್ ಟಿವಿ ದರ ಉಳಿಸಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌