ಆ್ಯಪ್ನಗರ

WhatsApp: ತಾನಾಗಿಯೇ ಅಳಿಸಿ ಹೋಗಲಿದೆ ವಾಟ್ಸಪ್ ಚಾಟ್‌ ಫೋಟೋ, ವಿಡಿಯೋ!

ಇನ್‌ಸ್ಟಾಗ್ರಾಂ ಮತ್ತು ಸ್ನ್ಯಾಪ್‌ಚಾಟ್‌ನಲ್ಲಿ ಈ ಫೀಚರ್ ಇದ್ದು,, ಯಾವುದೇ ಫೋಟೋ ಅಥವಾ ವಿಡಿಯೋ, ಜಿಫ್ ಫೈಲ್ ಕಳುಹಿಸಿದರೆ, ಸ್ವೀಕರಿಸಿದವರು ಅದನ್ನು ನೋಡಿದ ಬಳಿಕ ತಾನಾಗಿಯೇ ಡಿಲೀಟ್ ಆಗುತ್ತದೆ.

TNN & Agencies 25 Sep 2020, 6:32 pm
ವಾಟ್ಸಪ್ ಮೂಲಕ ಕಳುಹಿಸಲಾಗುವ ಫೋಟೋ ಮತ್ತು ವಿಡಿಯೋ ಚಾಟ್ ಮುಗಿಯುತ್ತಿದ್ದಂತೆಯೇ ಸ್ವಯಂ ಆಗಿ ಅಳಿಸಿ ಹೋಗುವ ಫೀಚರ್ ಒಂದನ್ನು ವಾಟ್ಸಪ್ ಅಭಿವೃದ್ಧಿಪಡಿಸುತ್ತಿದೆ!
Vijaya Karnataka Web WhatsApp
WhatsApp


ಈಗಾಗಲೇ ಇನ್‌ಸ್ಟಾಗ್ರಾಂ ಮತ್ತು ಸ್ನ್ಯಾಪ್‌ಚಾಟ್‌ನಲ್ಲಿ ಈ ಫೀಚರ್ ಇದ್ದು,, ಯಾವುದೇ ಫೋಟೋ ಅಥವಾ ವಿಡಿಯೋ, ಜಿಫ್ ಫೈಲ್ ಕಳುಹಿಸಿದರೆ, ಸ್ವೀಕರಿಸಿದವರು ಅದನ್ನು ನೋಡಿದ ಬಳಿಕ ತಾನಾಗಿಯೇ ಡಿಲೀಟ್ ಆಗುತ್ತದೆ. ಅದೇ ಮಾದರಿಯಲ್ಲಿ ವಾಟ್ಸಪ್‌ ಕೂಡ ನೂತನ ಎಕ್ಸ್‌ಪೈರಿಂಗ್ ಮೀಡಿಯಾ ಎನ್ನುವ ಫೀಚರ್ ಅಭಿವೃದ್ಧಿಪಡಿಸುತ್ತಿದೆ.

ಒಮ್ಮೆ ಮಾತ್ರ ನೋಡಬಹುದು!
ವಾಟ್ಸಪ್ ಅಪ್‌ಡೇಟ್ ಮತ್ತು ಫೀಚರ್ ಕುರಿತು ವರದಿ ಮಾಡುವ, ವಾಬೀಟಾ ಇನ್ಫೋ ಪ್ರಕಾರ ವಾಟ್ಸಪ್ 2.20.201.6 ಬೀಟಾ ಆವೃತ್ತಿಯಲ್ಲಿ ಈ ಫೀಚರ್ ಪರಿಶೀಲಿಸಲಾಗುತ್ತಿದೆ. ಮುಂದೆ ಈ ಫೀಚರ್ ಬಳಕೆದಾರರಿಗೆ ಲಭ್ಯವಾಗಲಿದೆ.

ಅಟೋ ಡಿಲೀಟ್!
ಚಾಟ್ ಮುಗಿದ ಬಳಿಕ ನೀವು ವಾಟ್ಸಪ್ ಕ್ಲೋಸ್ ಮಾಡುವ ಸಂದರ್ಭದಲ್ಲಿ ಒಂದು ಪಾಪ್ ಅಪ್ ಮೆಸೇಜ್ ಕಾಣಿಸಿಕೊಳ್ಳಲಿದೆ. ಅದರಲ್ಲಿ ನೀವು ಚಾಟ್‌ನಿಂದ ಹೊರಹೋದರೆ, ಮೀಡಿಯಾ ಫೈಲ್ ಅಳಿಸಿಹೋಗುತ್ತದೆ ಎಂಬ ಸಂದೇಶ ಕಾಣಿಸಿಕೊಳ್ಳುತ್ತದೆ.

Whatsapp Auto Delete



Delete for Everyone: ವಾಟ್ಸಪ್ ಮೆಸೇಜ್ ಡಿಲೀಟ್‌ ಮಾಡಿದ್ದರೂ ಓದ್ತಾರೆ!

ಅಂದರೆ, ನಿಮಗೆ ವಾಟ್ಸಪ್‌ನಲ್ಲಿ ಫೋಟೋ ಕಳುಹಿಸುವವರು ವ್ಯೂ ಒನ್ಸ್ ಎಂಬ ಆಯ್ಕೆ ಮಾಡಿ ಫೋಟೋ ಅಥವಾ ವಿಡಿಯೋ ಕಳುಹಿಸಿದ್ದರೆ, ಅದನ್ನು ಸ್ವೀಕರಿಸಿದವರು ಒಮ್ಮೆ ಮಾತ್ರ ನೋಡಲು ಸಾಧ್ಯವಾಗುತ್ತದೆ. ನೋಡಿದ ಬಳಿಕ ಅದು ಅಳಿಸಿ ಹೋಗುತ್ತದೆ.

WhatsApp Media: ಮೀಡಿಯಾ ಫೈಲ್ಸ್ ಹುಡುಕುವುದು ಹೇಗೆ?

ಜತೆಗೆ ಅಳಿಸಿ ಹೋಗುವ ಮೆಸೇಜ್ ಆಯ್ಕೆಯನ್ನು ಕೂಡ ವಾಟ್ಸಪ್ ಬಳಕೆದಾರರಿಗೆ ಪರಿಚಯಿಸಲು ಮುಂದಾಗಿದೆ.

WhatsApp Safety: ವಾಟ್ಸಪ್‌ನಲ್ಲಿ ಕಿರಿಕಿರಿಯಾಗುತ್ತಿದ್ದರೆ ಈ ಟಿಪ್ಸ್ ಅನುಸರಿಸಿ ನೋಡಿ..

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌