ಆ್ಯಪ್ನಗರ

ವಾಟ್ಸಾಪ್​ ಧ್ವನಿ ಸಂದೇಶದಲ್ಲಿ ಬದಲಾಗುತ್ತಿರುವ ಹೊಸ ವೈಶಿಷ್ಟ್ಯವೇನು ಗೊತ್ತಾ?

ವಾಟ್ಸಾಪ್​ನಲ್ಲೇ ಫೋಟೋ ಎಡಿಟಿಂಗ್, ಲಾಗೌಟ್ ಫೀಚರ್, ಸ್ಟೇಟಸ್​ನಂತೆ ಪ್ರೊಫೈಲ್ ಪೋಟೋ ಕೂಡ ಕೆಲವರಿಗೆ ಮಾತ್ರ ಕಾಣಿಸುವಂತಹ ಆಯ್ಕೆ, ವಾಯ್ಸ್ ಮೆಸೇಜ್ ಕಳುಹಿಸುವ ಮುನ್ನ ಕೇಳುವ ಆಯ್ಕೆ ಹೀಗೆ ಅನೇಕ ಹೊಸ ಹೊಸ ಫೀಚರ್​ಗಳು ಪರೀಕ್ಷಾ ಹಂತದಲ್ಲಿರುವಾಗಲೇ,

Vijaya Karnataka Web 12 Oct 2021, 12:32 pm
ವಾಟ್ಸಾಪ್ನಲ್ಲೇ ಫೋಟೋ ಎಡಿಟಿಂಗ್, ಲಾಗೌಟ್ ಫೀಚರ್, ಸ್ಟೇಟಸ್ನಂತೆ ಪ್ರೊಫೈಲ್ ಪೋಟೋ ಕೂಡ ಕೆಲವರಿಗೆ ಮಾತ್ರ ಕಾಣಿಸುವಂತಹ ಆಯ್ಕೆ, ವಾಯ್ಸ್ ಮೆಸೇಜ್ ಕಳುಹಿಸುವ ಮುನ್ನ ಕೇಳುವ ಆಯ್ಕೆ ಹೀಗೆ ಅನೇಕ ಹೊಸ ಹೊಸ ಫೀಚರ್ಗಳು ಪರೀಕ್ಷಾ ಹಂತದಲ್ಲಿರುವಾಗಲೇ, ಇದೀಗ ಬಳಕೆದಾರರಿಗೆ ಧ್ವನಿ ಸಂದೇಶಗಳನ್ನು ರೆಕಾರ್ಡಿಂಗ್ ಮಾಡುವಾಗ ವಿರಾಮಗೊಳಿಸಲು ಅನುವು ಮಾಡಿಕೊಡುವಂತಹ ಹೊಸದೊಂದು ಫೀಚರ್ ಬರುತ್ತಿದೆ. ಈ ಹಿಂದೆ, ವಾಟ್ಸಾಪ್ ತನ್ನ ಧ್ವನಿ ಸಂದೇಶದ ವೈಶಿಷ್ಟ್ಯದಲ್ಲಿ ಬದಲಾವಣೆಗಳನ್ನು ಮಾಡುತ್ತಿದೆ ಎಂದು ವರದಿಯಾಗಿತ್ತು. ಆ ವೈಶಿಷ್ಟ್ಯವು ಏನಿರಬಹುದು ಎಂದು ಕುತೋಹಲದಿಂದ ಕಾಯುತ್ತಿದ್ದ ಜನತೆಗೆ ಇಂತಹದೊಂದು ಸಿಹಿಸುದ್ದಿ ಸಿಕ್ಕಿದೆ.
Vijaya Karnataka Web whatsapp


ಹೌದು, ವಾಟ್ಸಾಪ್ ಅಪ್ಲಿಕೇಶನ್‌ನಲ್ಲಿ ಮುಂಬರುವ ಅಪ್‌ಡೇಟ್‌ನಲ್ಲಿ, ಬಳಕೆದಾರರು ಧ್ವನಿ ಸಂದೇಶಗಳನ್ನು ವಿರಾಮಗೊಳಿಸಬಹುದು ಮತ್ತು ಧ್ವನಿ ಸಂದೇಶಗಳನ್ನು ನಿಲ್ಲಿಸಿದ ಸ್ಥಳದಿಂದಲೇ ಸಂದೇಶವನ್ನು ರೆಕಾರ್ಡ್ ಮಾಡುವುದನ್ನು ಪುನರಾರಂಭಿಸಬಹುದಾಗಿದೆ. ಪ್ರಸ್ತುತ, ವಾಟ್ಸಾಪ್ ನಲ್ಲಿ ನೀವು ಸಂದೇಶವನ್ನು ರೆಕಾರ್ಡ್ ಮಾಡಲು ಪ್ರಾರಂಭಿಸಿದರೆ, ನೀವು ಅದನ್ನು ಕಳುಹಿಸಬೇಕು ಮತ್ತು ನೀವು ಅದೇ ಸಂದೇಶವನ್ನು ಮುಂದುವರಿಸಲು ಸಾಧ್ಯವಿರಲಿಲ್ಲ. ಆದರೆ ಶೀಘ್ರದಲ್ಲೇ, ಧ್ವನಿ ರೆಕಾರ್ಡಿಂಗ್ ಅನ್ನು ವಿರಾಮಗೊಳಿಸಲು ನಿಮಗೆ ಒಂದು ಆಯ್ಕೆ ಇರುತ್ತದೆ. ಆಂಡ್ರಾಯ್ಡ್ ಮತ್ತು ಐಒಎಸ್ ಎರಡರ ಬೀಟಾ ಬಳಕೆದಾರರಿಗೆ ಇನ್ಸ್ಟೆಂಟ್ ಮೆಸೇಜಿಂಗ್ ಆಪ್ ನ ಹೊಸ ಫೀಚರ್ ಶೀಘ್ರದಲ್ಲೇ ಲಭ್ಯವಾಗಲಿದೆ ಎಂದು ಹೇಳಲಾಗಿದೆ.

ಇಷ್ಟೇ ಅಲ್ಲದೇ, ವಾಟ್ಸಾಪ್ ಪರಿಚಯಿಸಲಿರುವ ಈ ಹೊಸ ವಾಯ್ಸ್ ಟ್ರಾನ್ಸ್ಕ್ರಿಪ್ಶನ್ ಫೀಚರ್ನಲ್ಲಿ ಬಳಕೆದಾರರಿಗೆ ಧ್ವನಿ ಸಂದೇಶದ ವಿಷಯವನ್ನು ಓದಬಲ್ಲ ರೂಪದಲ್ಲಿಯೂ ನೀಡುತ್ತದೆ ಎಂದು ವಾಟ್ಸಾಪ್ ಬೀಟಾ ಇನ್ಫೊ ವರದಿ ಮಾಡಿದೆ. ಅಂದರೆ ಇದು ಇದು ಪಠ್ಯ ರೂಪದಲ್ಲಿ ಬಳಕೆದಾರರಿಗೆ ಸಿಗಲಿದೆ. ಈ ಫೀಚರ್ ಅನ್ನು ಆಯ್ಕೆಯ ಆಧಾರ ಮೇಲೆ ನೀಡಲಾಗುತ್ತದೆ ಎಂದು ಹೇಳಲಾಗಿದ್ದು, ಬಳಕೆದಾರರು ಈ ಫೀಚರ್ ಟ್ರಾನ್ಸ್ಕ್ರಿಪ್ಶನ್ ಮಾಡಲು ಅನುಮತಿಸಿದಾಗ ಮಾತ್ರ ಸೇವೆ ಸಿಗಲಿದೆ ಎಂದು ಹೇಳಲಾಗಿದೆ. ವಾಟ್ಸಾಪ್ ಆಪ್‌ನಲ್ಲಿ ಕ್ಯಾಮೆರಾ, ಮೈಕ್ರೋಫೋನ್ಗೆ ಅನುಮತಿ ನೀಡಿದಂತೆ ಇದಕ್ಕೂ ಸಹ ಅನುಮತಿ ಕೇಳಲಾಗುತ್ತದೆ ಎಂದು ವರದಿಯ ಮೂಲಕ ತಿಳಿದುಬಂದಿದೆ.
ಫೇಸ್‌ಬುಕ್ ಸ್ಥಗಿತದ ಸಮಯದಲ್ಲಿ ಪೋರ್ನ್ ವೀಕ್ಷಿಸಿದ ಜನರೆಷ್ಟು ಗೊತ್ತಾ?
ಇನ್ನು ಈ ವಾಟ್ಸ್ಆಪ್ ಬಳಕೆದಾರರ ವಾಯ್ಸ್ ಟ್ರಾನ್ಸ್ಕ್ರಿಪ್ಶನ್ ಅನ್ನು ಫೇಸ್ಬುಕ್ ಸರ್ವರ್ಗೆ ಹಂಚಿಕೊಳ್ಳುವುದಿಲ್ಲ ಎಂದು ಹೇಳಲಾಗಿದ್ದು, ಧ್ವನಿ ಸಂದೇಶ ಲಿಪ್ಯಾಂತರ ಮಾಡುವುದು, ಭಾಷಣವನ್ನು ಗುರುತಿಸುವ ಸೇವೆಯು ಕೂಡ ಈ ಸೇವೆಯ ಅಡಿಯಲ್ಲಿ ಬರಲಿವೆ ಎಂದು ಹೇಳಲಾಗಿದೆ. ಹಲವಾರು ಸುಧಾರಣೆಗಳನ್ನು ಪಡೆಯುತ್ತಿರುವ ವಾಟ್ಸಾಪ್ ನಿರ್ದಿಷ್ಟವಾಗಿ ಧ್ವನಿ ಸಂದೇಶಗಳಿಗಾಗಿ ಹೊಸ ವೈಶಿಷ್ಟ್ಯವನ್ನು ಜಾರಿಗೆ ತರುತ್ತಿರುವುದು ಸಂತಸದ ವಿಷಯ. ಏಕೆಂದರೆ ಈ ವೈಶಿಷ್ಟ್ಯವು ತುಂಬಾ ಉಪಯುಕ್ತವಾಗಿ, ಧ್ವನಿ ಸಂದೇಶಗಳನ್ನು ನಿಲ್ಲಿಸಲು ಮತ್ತು ರೆಕಾರ್ಡ್ ಮಾಡಲು ನಿಮ್ಮನ್ನು ಒತ್ತಾಯಿಸುವುದಿಲ್ಲ ಎಂದು ಹೇಳಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌