ಆ್ಯಪ್ನಗರ

WhatsApp Pay: ಶೀಘ್ರವೇ ದೇಶದಲ್ಲಿ ಪಾವತಿ ಸೇವೆ?

ಡಿಜಿಟಲ್ ಮಾರುಕಟ್ಟೆ ಮತ್ತು ಆನ್‌ಲೈನ್ ಪಾವತಿ ಸೇವೆಗಳು ದೇಶದಲ್ಲಿ ಜನಪ್ರಿಯವಾಗುತ್ತಿದ್ದು, ವಾಟ್ಸಪ್ ಪೇ ಸೇವೆ ಕೂಡ ಶೀಘ್ರದಲ್ಲೇ ಲಭ್ಯವಾಗಲಿದೆ. ಇದರಿಂದ ಈಗಾಗಲೇ ಬಳಕೆಯಲ್ಲಿರುವ ವಿವಿಧ ಪಾವತಿ ಆ್ಯಪ್‌ಗಳಿಗೆ ಸ್ಪರ್ಧೆ ಎದುರಾಗಲಿದೆ.

TIMESOFINDIA.COM 4 Nov 2019, 10:02 am
ಭಾರೀ ನಿರೀಕ್ಷೆಯ ವಾಟ್ಸಪ್ ಪೇಮೆಂಟ್‌ ಸೇವೆ ಭಾರತದಲ್ಲಿ ಶೀಘ್ರವೇ ಎಲ್ಲೆಡೆ ದೊರೆಯಲಿದೆ. ಈಗಾಗಲೇ ಪರೀಕ್ಷಾ ಹಂತದಲ್ಲಿರುವ ಈ ಸೇವೆಗೆ ಡೇಟಾ ಮತ್ತು ನಿಯಂತ್ರಣಾ ಪ್ರಾಧಿಕಾರಗಳ ನಿಯಮಗಳಿಂದಾಗಿ ಸ್ವಲ್ಪಮಟ್ಟಿಗೆ ವಿಳಂಬವಾಗಿದೆ ಎಂದು ಫೇಸ್‌ಬುಕ್‌ ಸಿಇಒ ಮಾರ್ಕ್ ಝುಕರ್‌ಬರ್ಗ್‌ ಹೇಳಿದ್ದಾರೆ.
Vijaya Karnataka Web Whatsapp


ಆದರೆ, ನಿರ್ದಿಷ್ಟ ದಿನಾಂಕವನ್ನೇನೂ ಅವರು ಹೇಳಿಲ್ಲ. ವಾಟ್ಸಪ್ ಪೇ ಕೂಡ ಯುಪಿಐ ಆಧಾರಿತ ಪೇಮೆಂಟ್‌ ಸೇವೆಯಾಗಿದ್ದು, ಬಳಕೆದಾರರು ಈ ಆ್ಯಪ್‌ ಬಳಸಿಕೊಂಡು ಹಣವನ್ನು ರವಾನಿಸಬಹುದು. ಬಳಕೆದಾರರ ತಮ್ಮ ಯುಪಿಐ ಅಕೌಂಟ್‌ಗಳನ್ನು ಮೊದಲಿಗೆ ವಾಟ್ಸಪ್ಗೆ ಕನೆಕ್ಟ್ ಮಾಡಬೇಕು. ಆ ಬಳಿಕ, ಇದೇ ರೀತಿಯಲ್ಲಿಸಂಪರ್ಕ ಹೊಂದಿರುವ ಬಳಕೆದಾರರೊಂದಿಗೆ ಹಣದ ವಹಿವಾಟು ಮಾಡಬಹುದಾಗಿದೆ.

ಒಂದು ವೇಳೆ ವಾಟ್ಸಪ್ ಪೇ ಏನಾದರೂ ಪೂರ್ಣ ಪ್ರಮಾಣದಲ್ಲಿ ಜಾರಿಯಾದರೆ ಹೆಚ್ಚು ಕಡಿಮೆ 40 ಕೋಟಿ ಬಳಕೆದಾರರಿಗೆ ಇದರಿಂದ ಲಾಭವಾಗಲಿದೆ ಎನ್ನಲಾಗುತ್ತಿದೆ. ಆದರೆ, ಅನುಮತಿ ಪಡೆದುಕೊಳ್ಳುವಲ್ಲಿಒಂದಿಷ್ಟು ಹಿನ್ನಡೆಯಾಗಿದ್ದರಿಂದ ಸೇವೆ ದೊರೆಯಲು ವಿಳಂಬವಾಗಿದೆ ಎನ್ನಲಾಗುತ್ತಿದೆ.

ಡಿಜಿಟಲ್ ಸ್ಟೆತಸ್ಕೋಪ್: ವೈದ್ಯಲೋಕದ ಅಚ್ಚರಿಯ ಅನ್ವೇಷಣೆ

ವಾಟ್ಸಪ್ ಪೇ ಜಾರಿಯಾಗುವುದರಿಂದ ದೇಶದಲ್ಲಿ ಈಗಾಗಲೇ ಸೇವೆ ನೀಡುತ್ತಿರುವ ಗೂಗಲ್ ಪೇ, ಫೋನ್‌ ಪೆ, ಪೇಟಿಎಂ ಮತ್ತಿತರ ವಿವಿಧ ಆ್ಯಪ್‌ಗಳಿಗೆ ಸ್ಪರ್ಧೆ ಎದುರಾಗುವ ಸಾಧ್ಯತೆಯಿದೆ. ಈಗಾಗಲೇ ಗರಿಷ್ಠ ಸಂಖ್ಯೆಯ ವಾಟ್ಸಪ್ ಬಳಕೆದಾರರು ಪಾವತಿ ವ್ಯವಸ್ಥೆಯನ್ನು ಕೂಡ ಅಳವಡಿಸಿಕೊಂಡರೆ, ಅದರಿಂದ ಇತರ ಯುಪಿಐ ಮತ್ತು ಡಿಜಿಟಲ್ ಪಾವತಿ ಆ್ಯಪ್‌ಗಳಿಗೆ ಕೊಂಚ ಹಿನ್ನಡೆಯಾಗಬಹುದು ಎಂದು ಅಂದಾಜಿಸಲಾಗಿದೆ.

TikTok: ಮೊದಲ ಬಾರಿಗೆ ಲಾಭ ಕಂಡ ಟಿಕ್‌ ಟಾಕ್‌!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌