ಆ್ಯಪ್ನಗರ

ಸೆಂಡ್ ಆಗಿರುವ WhatsApp ಮೆಸೇಜ್‌ಗಳನ್ನು ಎಡಿಟ್ ಮಾಡುವುದು ಹೇಗೆ ಗೊತ್ತಾ?

ಕಳುಹಿಸಿದ ಸಂದೇಶಗಳನ್ನು ಎಡಿಟ್ ಮಾಡುವ ಸಾಮರ್ಥ್ಯವನ್ನು ಇದೀಗ ಕೆಲವು WhatsApp ಬೀಟಾ ಪರೀಕ್ಷಕರಿಗೆ ಅಪ್ಲಿಕೇಶನ್‌ನ ಅಪ್‌ಡೇಟ್‌ನಲ್ಲಿ ಈಗಾಗಲೇ ಬಿಡುಗಡೆ ಮಾಡಲಾಗಿದೆ. WhatsApp ಅಪ್ಲಿಕೇಶನ್‌ನ್ ಮೂಲಕ ಕಳುಹಿಸಿಲಾದ ಸಂದೇಶವನ್ನು ಎಡಿಟ್ ಮಾಡಲು, ಬಳಕೆದಾರರು ಚಾಟ್ ಬಬಲ್ ಅನ್ನು ಟ್ಯಾಪ್ ಮಾಡಿ(ಲಾಂಗ್ ಪ್ರೆಸ್) ಹಿಡಿದಿಟ್ಟುಕೊಳ್ಳಬೇಕು

Authored byಭಾಸ್ಕರ್ ಶೆಟ್ಟಿ | Vijaya Karnataka Web 24 Feb 2023, 10:25 am
WhatsApp ಮೂಲಕ ಕಳುಹಿಸಲಾದ ಸಂದೇಶಗಳನ್ನು ಎಡಿಟ್ (Edit Feature) ಮಾಡಬಹುದಾದ ಅಚ್ಚರಿಯ ವೈಶಿಷ್ಟ್ಯವೊಂದನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಇತ್ತೀಚಿಗಷ್ಟೇ ವರದಿಯಾಗಿತ್ತು. ಇದೀಗ ಈ ಬಗ್ಗೆ ಮತ್ತಷ್ಟು ಅಪ್‌ಡೇಟ್ಸ್ ದೊರೆತಿದೆ. WhatsApp ಬಳಕೆದಾರರು ಕಳುಹಿಸಿದ ಸಂದೇಶಗಳನ್ನು ಎಡಿಟ್ ಮಾಡಲು ಸಾಧ್ಯವಾಗಲಿರುವ ವೈಶಿಷ್ಟ್ಯದ ಸ್ಕ್ರೀನ್‌ಶಾಟ್ ಒಂದನ್ನು WhatsApp ಬೀಟಾ ಟ್ರ್ಯಾಕರ್ WABetaInfo ಪ್ರಕಟಿಸಿದ್ದು, ಇದರಲ್ಲಿ ಬಳಕೆದಾರರು ಕಳುಹಿಸಿದ WhatsApp ಸಂದೇಶವನ್ನು ಲಾಂಗ್ ಪ್ರೆಸ್ ಮೂಲಕ ಆಯ್ಕೆ ಮಾಡಿದಾಗ, ಸಂದೇಶವನ್ನು ನಕಲಿಸು(ಕಾಪಿ), ಫಾರ್ವರ್ಡ್ ಆಯ್ಕೆಯೊಂದಿಗೆ ಎಡಿಟ್ ಆಯ್ಕೆ ಗೋಚರಿಸಿದೆ. ಇದು ಕಳುಹಿಸಲಾದ ಸಂದೇಶದಲ್ಲಿ ಅಕ್ಷರ ದೋಷವಿದ್ದರೆ ಅದನ್ನು ಸರಿಪಡಿಸಲು ಅನುಮತಿಸಲಿದೆ.
Vijaya Karnataka Web ಸೆಂಡ್ ಆಗಿರುವ WhatsApp ಮೆಸೇಜ್‌ಗಳನ್ನು ಎಡಿಟ್ ಮಾಡುವುದು ಹೇಗೆ ಗೊತ್ತಾ?


WhatsApp ಬೀಟಾ ಟ್ರ್ಯಾಕರ್ WABetaInfo ವರದಿಯಲ್ಲಿ ತಿಳಿಸಿರುವಂತೆ, WhatsApp ಬಳಕೆದಾರರು ಇತರರಿಗೆ ಸಂದೇಶವನ್ನು ಕಳುಹಿಸಿದ ವೇಳೆಯಲ್ಲಿ ಅಕ್ಷರಗಳು ತಪ್ಪಾಗಿರಬಹುದು. ಈ ವೇಳೆ ಆ ಸಂದೇಶಗಳನ್ನು ಆ ಕ್ಷಣದಲ್ಲೇ ಎಡಿಟ್ ಮಾಡಬಹುದಾದ ಆಯ್ಕೆ ಇದಾಗಿದೆ ಎಂದು ಹೇಳಿದೆ. WhatsApp ಸಂದೇಶಗಳನ್ನು ಕಳುಹಿಸಿದ ನಂತರ ಅದರಲ್ಲಿನ ಅಕ್ಷರಗಳು ತಪ್ಪಾಗಿದ್ದರೆ ಡಿಲೀಟ್ ಫಾರ್ ಎವರಿವನ್ ಆಯ್ಕೆಯ ಮೂಲಕ ಆ ಸಂದೇಶವನ್ನು ಡಿಲೀಟ್ ಮಾಡಬಹುದು. ಆದರೆ, ಈ ಬಗ್ಗೆ ಸಂದೇಶ ಪಡೆದವರಿಗೆ ಆಭಾಸವಾಗಬಹುದು. ಎಂಬ ಕಾರಣಕ್ಕೆ WhatsApp ನಲ್ಲಿ ಸಂದೇಶಗಳನ್ನು ಎಡಿಟ್ ಮಾಡಬಹುದಾದ ಆಯ್ಕೆಯನ್ನು ನೀಡುತ್ತಿರಬಹುದು ಎಂದು ಅಭಿಪ್ರಾಯಪಡಲಾಗಿದೆ. ಇನ್ನು ಈ ಹೊಸ ವೈಶಿಷ್ಟ್ಯವು ಶೀಘ್ರದಲ್ಲೇ ಬರಬಹುದು ಎಂದು ವರದಿಯು ಹೇಳಿದೆ.

ಕಳುಹಿಸಿದ ಸಂದೇಶಗಳನ್ನು ಎಡಿಟ್ ಮಾಡುವ ಸಾಮರ್ಥ್ಯವನ್ನು ಇದೀಗ ಕೆಲವು WhatsApp ಬೀಟಾ ಪರೀಕ್ಷಕರಿಗೆ ಅಪ್ಲಿಕೇಶನ್‌ನ ಅಪ್‌ಡೇಟ್‌ನಲ್ಲಿ ಈಗಾಗಲೇ ಬಿಡುಗಡೆ ಮಾಡಲಾಗಿದೆ. WhatsApp ಅಪ್ಲಿಕೇಶನ್‌ನ್ ಮೂಲಕ ಕಳುಹಿಸಿಲಾದ ಸಂದೇಶವನ್ನು ಎಡಿಟ್ ಮಾಡಲು, ಬಳಕೆದಾರರು ಚಾಟ್ ಬಬಲ್ ಅನ್ನು ಟ್ಯಾಪ್ ಮಾಡಿ(ಲಾಂಗ್ ಪ್ರೆಸ್) ಹಿಡಿದಿಟ್ಟುಕೊಳ್ಳಬೇಕು ಮತ್ತು ಎಡಿಟ್ ಆಯ್ಕೆಯನ್ನು ಆರಿಸಬೇಕಾಗುತ್ತದೆ. WaBetaInfo ಪ್ರಕಾರ, WhatsApp ಬಳಕೆದಾರರು ಸಂದೇಶವನ್ನು ಕಳುಹಿಸಿದ ನಂತರ 15 ನಿಮಿಷಗಳವರೆಗೆ ಎಡಿಟ್ ಸಾಧ್ಯವಾಗುತ್ತದೆ ಎಂದು ನಿರೀಕ್ಷಿಸಬಹುದು, ಇದಕ್ಕೆ ವಿರುದ್ಧವಾಗಿ, ಟೆಲಿಗ್ರಾಮ್ ಬಳಕೆದಾರರು ತಮ್ಮ ಸಂದೇಶಗಳನ್ನು ಎಡಿಟ್ ಮಾಡಲು 48 ಗಂಟೆಗಳ ಕಾಲಾವಕಾಶ ಹೊಂದಿದ್ದಾರೆ ಎಂಬುದನ್ನು ನಾವಿಲ್ಲಿ ಗಮನಿಸಬಹುದು.

100 ಫೋಟೋಗಳು ಮತ್ತು ವೀಡಿಯೊಗಳನ್ನು ಶೇರ್ ಮಾಡಿ.
ಬಳಕೆದಾರರ ಅನುಭವವನ್ನು ಹೆಚ್ಚಿಸಲು ಯಾವಾಗಲೂ ಹೊಸ ಹೊಸ ಅಪ್‌ಡೇಟ್‌ಗಳನ್ನು ಪರಿಚಯಿಸುತ್ತಲೇ ಬಂದಿರುವ ಜನಪ್ರಿಯ ಇನಸ್ಟಂಟ್ ಮೆಸೇಜಿಂಗ್‌ ಅಪ್ಲಿಕೇಶನ್‌ WhatsApp ಇದೀಗ ಮತ್ತೊಂದು ವಿಶೇಷ ಅಪ್‌ಡೇಟ್ ತರುವ ಮೂಲಕ ಗಮನಸೆಳೆದಿದೆ. WhatsApp ಬಳಕೆದಾರರು ಈ ಮೊದಲು WhatsApp ಅಪ್ಲಿಕೇಶನ್ ಮೂಲಕ ಒಮ್ಮೆ ಕೇವಲ 30 ಫೋಟೋ ಅಥವಾ ವೀಡಿಯೊಗಳನ್ನು ಶೇರ್ ಮಾಡಲು ಮಿತಿ ಇತ್ತು. ಆದರೆ, ಇದೀಗ ಏಕಕಾಲದಲ್ಲಿ 100 ಫೋಟೋಗಳು ಮತ್ತು ವೀಡಿಯೊಗಳನ್ನು ಶೇರ್ ಮಾಡಬಹುದಾದಂತಹ ಹೊಸ ಬದಲಾವಣೆಯು WhatsApp ಅಪ್ಲಿಕೇಶನ್‌ನಲ್ಲಿ ಕಾಣಿಸಿದೆ. ಇದರಿಂದ WhatsApp ಬಳಕೆದಾರರು ಇದೀಗ ಏಕಕಾಲದಲ್ಲಿ 100 ಫೋಟೋ ಅಥವಾ ವೀಡಿಯೊ ಶೇರ್ ಮಾಡಲು ಸಾಧ್ಯವಾಗಲಿದೆ.

WhatsAppನಲ್ಲಿ 100 ಫೋಟೋಗಳು ಮತ್ತು ವೀಡಿಯೊಗಳನ್ನು ಶೇರ್ ಮಾಡಬಹುದಾದ ಈ ಹೊಸ ಬದಲಾವಣೆಯು ಆಂಡ್ರಾಯ್ಡ್ ಬಳಕೆದಾರರಿಗೆ 2.22.24.73 ಆವೃತ್ತಿ ಯಲ್ಲಿ ಕಾಣಿಸಿಕೊಂಡಿದೆ. ಬಳಕೆದಾರರು ಇತ್ತೀಚಿನ ಅಪ್‌ಡೇಟ್‌ಗಳನ್ನು ಸ್ವೀಕರಿಸಿದರೆ, ಏಕ ಕಾಲದಲ್ಲಿ 100 ಫೋಟೋಗಳು ಮತ್ತು ವೀಡಿಯೊಗಳನ್ನು ಸೆಲೆಕ್ಟ್ ಮಾಡಬಹುದು ಮತ್ತು ಶೇರ್ ಮಾಡಬಹುದು. ಇದಕ್ಕಾಗಿ, ನಿಮ್ಮ WhatsApp ನಲ್ಲಿ ಚಾಟ್‌ ತೆರೆಯಿರಿ ಮತ್ತು ಸ್ಕ್ರೀನ್ ಕೇಳಭಾಗದಲ್ಲಿ ಕಾಣುವ ಪೇಪರ್ ಕ್ಲಿಪ್ ಐಕಾನ್ ಮೇಲೆ ಟ್ಯಾಪ್ ಮಾಡಿ. ಇಲ್ಲಿ ನೀವು ನಿಮ್ಮ ಫೋಟೋಗಳನ್ನು ಸ್ಟೋರೇಜ್‌ ಮಾಡಿರುವ ಫೋಲ್ಡರ್ ಆಯ್ಕೆಮಾಡಿದ ನಂತರ ಮೊದಲ ಫೋಟೋವನ್ನು ಹೈಲೈಟ್ ಆಗುವವರೆಗೂ ಟ್ಯಾಪ್ ಮಾಡಿ. ನಂತರ ನೀವು 100 ಫೋಟೋ ಅಥವಾ ವೀಡಿಯೊಗಳನ್ನು ಸೆಲೆಕ್ಟ್ ಮಾಡಬಹುದು.
ಲೇಖಕರ ಬಗ್ಗೆ
ಭಾಸ್ಕರ್ ಶೆಟ್ಟಿ
ವಿಜಯ ಕರ್ನಾಟಕದಲ್ಲಿ ಡಿಜಿಟಲ್ ಪತ್ರಕರ್ತನಾಗಿ 2022 ಮಾರ್ಚ್‌ನಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. ಇದಕ್ಕೂ ಮುನ್ನ ಡಿಜಿಟಲ್ ಮಾಧ್ಯಮ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ 5 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ ಅನುಭವವಿದೆ. ಪ್ರಮುಖವಾಗಿ ತಂತ್ರಜ್ಞಾನ ಹಾಗೂ ಕ್ರೀಡೆಯ ಕುರಿತಾಗಿ ಲೇಖನ ಬರೆಯುವುದು ಆಸಕ್ತಿಯ ವಿಷಯಗಳು. ದೂರದ ಪ್ರಯಾಣ, ಪ್ರವಾಸ ಕೈಗೊಳ್ಳುವುದು ನನ್ನ ಮೆಚ್ಚಿನ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌