ಆ್ಯಪ್ನಗರ

Wipro: 12,000 ಮಂದಿ ನೇಮಕ

ಟೆಕ್‌ಲೋಕದಲ್ಲಿ ಅತ್ಯಂತ ಹೆಚ್ಚಿನ ಉದ್ಯೋಗ ಸೃಷ್ಟಿಸುತ್ತಿರುವ ವಿಪ್ರೊ, ಮತ್ತಷ್ಟು ನೇಮಕದ ಮೂಲಕ ಯುವ ಟೆಕ್ಕಿಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸುತ್ತಿದೆ. ದೇಶದಲ್ಲಿ ಮಾತ್ರವಲ್ಲದೆ, ಅಮೆರಿಕದಲ್ಲೂ ಗರಿಷ್ಠ ಸಂಖ್ಯೆಯಲ್ಲಿ ಟೆಕ್ ಜಾಬ್ ಸೃಷ್ಟಿಸಲಾಗುತ್ತಿದೆ.

TNN 17 Jan 2020, 12:18 pm
ಎಲ್ಲೆಡೆ ಉದ್ಯೋಗ ಕಡಿತದ ಹಿನ್ನಡೆ ಉಂಟಾಗುತ್ತಿರುವ ಸಂದರ್ಭದಲ್ಲಿ ಕೆಲ ಪ್ರಮುಖ ಕಂಪನಿಗಳು ಭಾರಿ ನೇಮಕಾತಿಗೆ ಮುಂದಾಗಿವೆ. ಐಟಿ ದಿಗ್ಗಜ ವಿಪ್ರೊ 2020-21ರಲ್ಲಿ 12,000 ಮಂದಿಯನ್ನು ಕ್ಯಾಂಪಸ್‌ ಸಂದರ್ಶನಗಳ ಮೂಲಕ ನೇಮಕಾತಿ ಮಾಡಿಕೊಳ್ಳಲಿದೆ.
Vijaya Karnataka Web Wipro
Wipro Technologies


ಇದರ ಜತೆಗೆ ವಿಪ್ರೊ ಅಮೆರಿಕದಲ್ಲಿ ಸ್ಥಳೀಯರ ನೇಮಕಾತಿಯನ್ನೂ ಹೆಚ್ಚಿಸಿದೆ. ಅಮೆರಿಕದಲ್ಲಿ 2-3 ವರ್ಷ ಅನುಭವ ಇರುವವರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಸೌರಭ್‌ ಗೋವಿಲ್‌ ತಿಳಿಸಿದ್ದಾರೆ. ಮೂರನೇ ತ್ರೈಮಾಸಿಕದಲ್ಲಿ ವಿಪ್ರೊ 5,865 ಮಂದಿಯನ್ನು ನೇಮಿಸಿದೆ. ಇದರಿಂದಾಗಿ ಉದ್ಯೋಗಿಗಳ ಸಂಖ್ಯೆ 187,318ಕ್ಕೆ ಏರಿದೆ.

ಶವೋಮಿ ನೇಮಕಾತಿಭಾರತದಲ್ಲಿ 50,000 ಉದ್ಯೋಗಗಳನ್ನು ಸೃಷ್ಟಿಸಿರುವುದಾಗಿ ಚೀನಾ ಮೂಲದ ಸ್ಮಾರ್ಟ್‌ಫೋನ್‌ ಉತ್ಪಾದಕ ಶವೋಮಿ ತಿಳಿಸಿದೆ. ಶವೋಮಿಯ ಉತ್ಪಾದಕ ಪಾಲುದಾರರು ಭಾರತದಲ್ಲಿ ವ್ಯಾಪಕವಾಗಿ ನೇಮಕಾತಿ ಮಾಡಿಕೊಳ್ಳುತ್ತಿದ್ದು, ಮಹಿಳೆಯರಿಗೂ ಉದ್ಯೋಗಾವಕಾಶ ಕಲ್ಪಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌