ಆ್ಯಪ್ನಗರ

14 ದಿನಗಳ ಬ್ಯಾಟರಿ ಲೈಫ್: ಹುವಾಯ್ ಫಿಟ್‍ನೆಸ್ ಬ್ಯಾಂಡ್​ 6 ಹೇಗಿದೆ ಗೊತ್ತಾ?

ಹುವಾಯ್ ಕಂಪೆನಿ ಮತ್ತೊಂದು ನೂತನವಾದ ಬ್ಯಾಂಡ್ 6 ಅನ್ನು ಬಿಡುಗಡೆಗೊಳಿಸಿದೆ. ಈ ವಾಚ್ ತನ್ನದೇ ಕೆಲವು ವಿಶೇಷತೆಗಳನ್ನು ಒಳಗೊಂಡಿದ್ದು, ದೊಡ್ಡ ಸ್ಕ್ರೀನ್ ಹೊಂದಿದ್ದು, ಬ್ಯಾಟರಿ ಸಾಮರ್ಥ್ಯ ಅಧಿಕವಾಗಿದೆ.

Vijaya Karnataka Web 7 Apr 2021, 9:49 am
ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಗಳಲ್ಲಿ ಫಿಟ್‍ನೆಸ್ ಬ್ಯಾಂಡ್ಗಳ ಹವಾ ಜೋರಾಗಿವೆ. ವಿಭಿನ್ನ ಬಗೆಯ ವಾಚ್‍ಗಳಿಂದ ಯಾವ ರೀತಿಯ ಬ್ಯಾಂಡ್‌ ಅನ್ನು ಬಳಕೆ ಮಾಡಬೇಕೆಂದು ಗ್ರಾಹಕರು ಒಮ್ಮೆ ಗೊಂದಲಕ್ಕೊಳಗಾಗುವ ಮಟ್ಟಿಗೆ ವಿಭಿನ್ನ ಬಣ್ಣ, ಲಕ್ಷಣ, ಗಾತ್ರದ ವಾಚ್‍ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟು ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಇದಕ್ಕೆ ಹೊಸ ಸೇರ್ಪಡೆ ಹುವಾಯ್ ಕಂಪೆನಿಯ ಮತ್ತೊಂದು ನೂತನವಾದ ಬ್ಯಾಂಡ್ 6.
Vijaya Karnataka Web 14 ದಿನಗಳ ಬ್ಯಾಟರಿ ಲೈಫ್: ಹುವಾಯ್ ಫಿಟ್‍ನೆಸ್ ಬ್ಯಾಂಡ್​  6 ಹೇಗಿದೆ ಗೊತ್ತಾ?


ಹುವಾಯ್ ಕಂಪೆನಿ ಮತ್ತೊಂದು ನೂತನವಾದ ಬ್ಯಾಂಡ್ 6 ಅನ್ನು ಬಿಡುಗಡೆಗೊಳಿಸಿದೆ. ಈ ವಾಚ್ ತನ್ನದೇ ಕೆಲವು ವಿಶೇಷತೆಗಳನ್ನು ಒಳಗೊಂಡಿದ್ದು, ದೊಡ್ಡ ಸ್ಕ್ರೀನ್ ಹೊಂದಿದ್ದು, ಬ್ಯಾಟರಿ ಸಾಮರ್ಥ್ಯ ಕೂಡ ಕಳೆದ ವಾಚ್‍ಗಿಂತ (ಬ್ಯಾಂಡ್ 4, 5) ಅಧಿಕವಾಗಿದೆ. ಇದರ ಜೊತೆಗೆ ಆರೋಗ್ಯ ಸಂಬಂಧಿತ ಅಂದರೆ ಹಾರ್ಟ್ ಮಾನಿಟರಿಂಗ್ ಸೆನ್ಸರ್, ಸ್ಲೀಪ್ ಟ್ರ್ಯಾಕರ್, ಒತ್ತಡ ಹೀಗೆ ಹತ್ತು ಹಲವಾರು ಲಕ್ಷಣಗಳನ್ನೊಳಗೊಂಡಿದೆ. ಇದರ ಮತ್ತೊಂದು ತುಂಬಾ ವಿಶೇಷತೆ ಏನೆಂದರೆ, ಇದು 96 ವರ್ಕೌಟ್ ಮೋಡ್ಸ್‌ ಅನ್ನು ಒಳಗೊಂಡಿರುವುದು.

ಸ್ಯಾಮ್ಸಂಗ್ ಗ್ಯಾಲಕ್ಸಿ A31 ಸ್ಮಾರ್ಟ್ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ

ಇದು ಹುವಾಯ್‍ನ ಸಬ್ ಬ್ರ್ಯಾಂಡ್ ಆದ ಹಾನರ್‌ ಇಎಸ್‍ಗೆ ಸಮನಾಗಿದ್ದು, ಭಾರತದಲ್ಲಿ ಇಎಸ್ ಬೆಲೆ 4,999 ರೂ. ಆಗಿದೆ. ಬ್ಯಾಂಡ್ 5 ಯಶಸ್ವಿಯಾಗಿದ್ದು, ಇದೊಂದು ಅಭೂತಪೂರ್ವ ಫಿಟ್‍ನೆಸ್ ಟ್ರ್ಯಾಕರ್ ಆಗಿದೆ. ಇನ್ನು ಬ್ಯಾಂಡ್ 4 ಕೂಡ ಸಾಮಾನ್ಯ ಲಕ್ಷಣ ಹೊಂದಿದ್ದು, ಇದಕ್ಕೆ ಹೋಲಿಸಿದರೆ ದೊಡ್ಡದಾದ ಎಲ್‍ಇಡಿ ಡಿಸ್ಪ್ಲೇ ಬ್ಯಾಂಡ್ 6ನಲ್ಲಿದೆ.

ಇನ್ನೂ ಬ್ಯಾಂಡ್ 6 ಅನ್ನು ಸುಮಾರು 3, 800 ರೂ.ಗೆ ಮಲೇಷ್ಯಾದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಸ್ಮಾರ್ಟ್ ಬ್ಯಾಂಡ್ ಗಾಢ ಹಸಿರು, ಗಾಢ ಕೇಸರಿ, ತೆಳು ಕಪ್ಪು ಬಣ್ಣ - ಹೀಗೆ ಅತ್ಯುತ್ತಮ ಬಣ್ಣಗಳಲ್ಲಿ ದೊರೆಯುತ್ತದೆ. ಇದು ಮಲೇಷ್ಯಾದ ಹುವಾಯ್ ಶಾಪ್‍ಗಳಲ್ಲಿ ಏಪ್ರಿಲ್ 4ರ ಭಾನುವಾರದಿಂದ ಲಭ್ಯವಿದೆ. ಇದು ಭಾರತದಲ್ಲಿ ಹಾಗೂ ಇನ್ನಿತರೆ ದೇಶಗಳ ಮಾರಾಟ ಮಾಡುವ ಕುರಿತು ಯಾವುದೇ ಮಾಹಿತಿ ನೀಡಿಲ್ಲ.

ವೇಗವಾಗಿ ಸ್ಮಾರ್ಟ್ ಫೋನ್ ಚಾರ್ಜ್ ಮಾಡುವುದು ಹೇಗೆ?: ಈ ಟಿಪ್ಸ್ ಪಾಲಿಸಿ

ಡಿಸ್ಪ್ಲೇ – 1.47 ಇಂಚು ಇದ್ದು, ಇದರಲ್ಲಿನ ಪ್ರದರ್ಶನ ಪ್ರದೇಶ 1.47ಕ್ಕಿಂತ ಎರಡರಷ್ಟಿದೆ. ಡಿಸ್ಪ್ಲೇ ರೆಸಲ್ಯೂಷನ್‌ 194*368 ಪಿಕ್ಸಲ್ ಇದ್ದು, 288 ಪಿಪಿಐ ಇದೆ. ಹೃದಯ, ಒತ್ತಡ, ನಿದ್ದೆ ಸೇರಿದಂತೆ ಒಟ್ಟು 96 ವರ್ಕೌಟ್ ಮೋಡ್ ಹೊಂದಿದೆ. ಅಂತೆಯೆ ಬ್ಯಾಂಡ್ 6 ನಲ್ಲಿ ಬಳಸಲಾದ ಪಟ್ಟಿ ಚರ್ಮ-ಸ್ನೇಹಿಯಾಗಿದ್ದು, ಚರ್ಮಕ್ಕೆ ಯಾವುದೇ ರೀತಿಯಲ್ಲೂ ತೊಂದರೆಯಾಗುವುದಿಲ್ಲ. ಇದನ್ನು ಯುವಿ- ಸಿಲಿಕಾನ್‍ನಿಂದ ತಯಾರಿಸಲಾಗಿದೆ. ಅವು ಹಗುರವಾಗಿದ್ದು ಮಾತ್ರವಲ್ಲದೆ ಧೂಳು, ಕಲುಷಿತ ನಿರೋಧಕವೂ ಹೌದು.

ಚೀನಾ ಕಂಪೆನಿಯಾದ ಹುವಾಯ್‍ನ 6 ಬ್ಯಾಂಡ್‍ನ ಬ್ಯಾಟರಿ ಸಾಮರ್ಥ್ಯ ಅತ್ಯುತ್ತಮವಾಗಿದೆ. ಒಮ್ಮೆ ಚಾರ್ಜ್ ಮಾಡಿದರೆ 14 ದಿನಗಳ ಕಾಲ ಬರುತ್ತದೆ. ಅಕಸ್ಮಾತ್ ಯಥೇಚ್ಛವಾಗಿ ಬಳಕೆ ಮಾಡಿದ್ದಲ್ಲಿ ಬ್ಯಾಟರಿ 10 ದಿನಗಳ ಕಾಲ ಆರಾಮವಾಗಿ ಬಳಸಬಹುದು. ಅಕಸ್ಮಾತ್ ಬ್ಯಾಟರಿಯು ಖಾಲಿಯಾಗಿದ್ದರೆ, ಮ್ಯಾಗ್ನೆಟಿಕ್ ಚಾರ್ಜರ್ ಸಹಾಯದೊಂದಿಗೆ ಕೇವಲ 5 ನಿಮಿಷಗಳ ಚಾರ್ಜಿಂಗ್ ಮಾಡಿದ್ದಲ್ಲಿ 2 ದಿನಗಳ ಕಾಲ ಬಳಕೆ ಮಾಡಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌