ಆ್ಯಪ್ನಗರ

HP: ವಿಶ್ವದ ಮೊದಲ ಲೇಸರ್ ಟ್ಯಾಂಕ್ ಪ್ರಿಂಟರ್ ಬಿಡುಗಡೆ

ವಿಶ್ವದ ಮೊದಲ ಲೇಸರ್ ಟ್ಯಾಂಕ್ ಪ್ರಿಂಟರ್ ಅನ್ನು ಎಚ್‍ಪಿ ಬಿಡುಗಡೆ ಮಾಡಿದ್ದು, ಮುದ್ರಣ ಕ್ಷೇತ್ರದಲ್ಲಿ ಸಣ್ಣ ಮತ್ತು ಮಧ್ಯಮ ಪ್ರಿಂಟಿಂಗ್ ಅವಶ್ಯಕತೆಯನ್ನು ಪೂರೈಸಲಿದೆ.

Vijaya Karnataka Web 4 Jul 2019, 4:27 pm
ಪ್ರಿಂಟರ್ ಮತ್ತು ಸಂಬಂಧಿತ ಉತ್ಪನ್ನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಎಚ್‍ಪಿ ಇಂಕ್ ವಿಶ್ವದ ಮೊದಲ ಲೇಸರ್ ಟ್ಯಾಂಕ್ ಪ್ರಿಂಟರ್ ಅನ್ನು ದೇಶದಲ್ಲಿ ಪರಿಚಯಿಸಿದೆ.
Vijaya Karnataka Web Image 1 HP Neverstop


ಭಾರತದ ವ್ಯವಹಾರಗಳಿಗೆ ಸೂಕ್ತವಾದ ಸ್ಮಾರ್ಟ್ ಪ್ರಿಂಟಿಂಗ್ ತಂತ್ರಜ್ಞಾನವನ್ನು ಒಳಗೊಂಡಿರುವ ಈ ಎಚ್‍ಪಿ ನೆವರ್‌ಸ್ಟಾಪ್ ಲೇಸರ್ ಪ್ರಿಂಟರ್ ಅತ್ಯುತ್ತಮ ರೀತಿಯ ವಿನ್ಯಾಸಗೊಂಡಿದೆ. ಎಚ್‌ಪಿ ಸ್ಮಾರ್ಟ್‌ ಪ್ರಿಂಟಿಂಗ್ ತಂತ್ರಜ್ಞಾನದ ಮೂಲಕ ಮುದ್ರಣದ ವೆಚ್ಚವನ್ನು ಕಡಿಮೆ ಮಾಡುವ ಜತೆಗೆ ಮತ್ತು ಹೆಚ್ಚು ಸಮಯವನ್ನು ಉಳಿತಾಯ ಮಾಡಲಿದೆ.

ಕೇವಲ 15 ಸೆಕೆಂಡ್‌ಗಳಲ್ಲಿ ಟೋನರ್ ಅನ್ನು ಬದಲಿಸುವ ಆಯ್ಕೆಯಿದ್ದು ಎಚ್‍ಪಿ ನೆವರ್‌ಸ್ಟಾಪ್ ಲೇಸರ್ ಪ್ರಿಂಟರ್ 20ಪಿಪಿಎಂ(ಎ4)ನಷ್ಟು ಪ್ರಿಂಟಿಂಗ್ ಸ್ಪೀಡ್ ಅನ್ನು ಹೊಂದಿದೆ. ಇದರಲ್ಲಿ ಸಿಂಗಲ್ ಮತ್ತು ಡ್ಯುಯಲ್ ಲೇಸರ್ ಟೋನರ್ ರೀಲೋಡ್ ಕಿಟ್‍ಗಳು ಇದ್ದು, ಸ್ಪರ್ಧಾತ್ಮಕ ಬೆಲೆಯಲ್ಲಿ ಲಭ್ಯವಿವೆ. ಒಂದು ಪುಟ ಪ್ರಿಂಟ್ ತೆಗೆಯಲು 29 ಪೈಸೆ (ಡ್ಯುಯಲ್ ಲೇಸರ್ ಟೋನರ್ ರೀಲೋಡ್ ಕಿಟ್) ಖರ್ಚು ಬರುತ್ತದೆ.

ಪ್ರಮುಖ ವಿಶೇಷತೆ:
ಯಾವುದೇ ಅಡೆತಡೆ ಇಲ್ಲದೇ 5,000 ಪುಟಗಳವರೆಗೆ ಪ್ರಿಂಟ್ ಪಡೆಯಬಹುದು.
ಅತ್ಯುತ್ಕಷ್ಠವಾದ ಕಾರ್ಯಕ್ಷಮತೆ.
ಟೋನರ್ ಅನ್ನು ಕೆಲವೇ ಸೆಕೆಂಡುಗಳಲ್ಲಿ ರೀಲೋಡ್ ಮಾಡಬಹುದು.
ಮೊಬೈಲ್‍ಗೂ ಸಹ ಕನೆಕ್ಟ್ ಮಾಡಬಹುದಾದ ಸೌಲಭ್ಯ.

ದರ ಮತ್ತು ಲಭ್ಯತೆ:
ಎಚ್‍ಪಿ ನೆವರ್‌ಸ್ಟಾಪ್ ಲೇಸರ್ 1000 ಸರಣಿ 15,846 ರೂ. (ನಾನ್-ವೈರ್‍ಲೆಸ್) ಮತ್ತು 17,236 ರೂ.(ವೈರ್‍ಲೆಸ್).
ಎಚ್‍ಪಿ ನೆವರ್‌ಸ್ಟಾಪ್ ಲೇಸರ್ ಎಂಎಫ್‍ಪಿ 1200 ಸರಣಿ 22,057 ರೂ.(ನಾನ್-ವೈರ್‍ಲೆಸ್) ಮತ್ತು 23,460 ರೂ.(ವೈರ್‍ಲೆಸ್).
ಎಚ್‍ಪಿ ನೆವರ್‌ಸ್ಟಾಪ್ ಲೇಸರ್ ಟೋನರ್ ರೀಲೋಡ್ ಕಿಟ್ 849 ರೂ.(ಸಿಂಗಲ್ ಪ್ಯಾಕ್) ಮತ್ತು 1449 ರೂ. (ಡಬಲ್ ಪ್ಯಾಕ್).

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌