ಆ್ಯಪ್ನಗರ

Xiaomi Mi A3: ಅಮೆಜಾನ್ ಫ್ಲ್ಯಾಶ್ ಸೇಲ್

ಗೂಗಲ್‌ನ ಆಂಡ್ರಾಯ್ಡ್ ಒನ್ ಯೋಜನೆಯಡಿ ಶವೋಮಿ ಪರಿಚಯಿಸಿರುವ ಮೂರನೇ ಫೋನ್ ಶವೋಮಿ ಎಂಐ A3 ಮಂಗಳವಾರ ಅಮೆಜಾನ್ ಮೂಲಕ ಫ್ಲ್ಯಾಶ್ ಸೇಲ್‌ನಲ್ಲಿ ದೊರೆಯುತ್ತಿದೆ.

Times Now 27 Aug 2019, 9:32 am
ದೇಶದಲ್ಲಿ ಅತ್ಯಂತ ಹೆಚ್ಚಿನ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿರುವ ಶವೋಮಿ, ಇತ್ತೀಚೆಗೆ ಪರಿಚಯಿಸಿದ್ದ ಶವೋಮಿ ಎಂಐ A3 ಮಾದರಿ ಮಂಗಳವಾರ ಫ್ಲ್ಯಾಶ್ ಸೇಲ್‌ ಮೂಲಕ ಲಭ್ಯವಿದೆ.
Vijaya Karnataka Web Mi a3


ಅಮೆಜಾನ್ ಮತ್ತು ಎಂಐ ಡಾಟ್ ಕಾಮ್ ಮೂಲಕ ವಿಶೇಷ ಆಫರ್ ಸೇಲ್‌ನಲ್ಲಿ ದೊರೆಯಲಿದ್ದು, ಮಧ್ಯಾಹ್ನ 12 ಗಂಟೆಗೆ ಸೇಲ್ ನಡೆಯಲಿದೆ.

ಶವೋಮಿ ಎಂಐ A3, 4 GB RAM ಮತ್ತು 64 GB ಮಾದರಿಗೆ 12,999 ರೂ. ಬೆಲೆಯಿದ್ದು, 6 GB RAM ಹಾಗೂ 128 GB ಮಾದರಿಗೆ 15,999 ರೂ. ದರ ನಿಗದಿಪಡಿಸಲಾಗಿದೆ. ಆರಂಭಿಕ ಕೊಡುಗೆಯಾಗಿ ಎಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ 750 ರೂ. ಕ್ಯಾಶ್‌ಬ್ಯಾಕ್ ಹಾಗೂ ಇಎಂಐ ಮೂಲಕ ಖರೀದಿಗೆ ಹೆಚ್ಚುವರಿ 250 ರೂ. ಕ್ಯಾಶ್‌ಬ್ಯಾಕ್ ಲಭ್ಯವಿದೆ.

ಜತೆಗೆ ಶವೋಮಿ ಎಂಐ A3 ಖರೀದಿಸುವ ಏರ್‌ಟೆಲ್ ಗ್ರಾಹಕರಿಗೆ, 249 ರೂ. ರೀಚಾರ್ಜ್‌ ಜತೆಗೆ ಅನಿಯಮಿತ ಕರೆ ಸೌಲಭ್ಯದ ಜತೆಗೆ ಡಬಲ್ ಡೇಟಾ ಪ್ರಯೋಜನ ಲಭ್ಯವಿದೆ.

ಶವೋಮಿ ಎಂಐ A3 ಫೋನ್ 32 ಮೆಗಾಪಿಕ್ಸೆಲ್ ಸೆಲ್ಫಿ ಮತ್ತು 4030mAh ಬ್ಯಾಟರಿ ಸಾಮರ್ಥ್ಯ ಹೊಂದಿರುವುದು ಗ್ರಾಹಕರಿಗೆ ಅನುಕೂಲವಾಗಿದೆ.

WhatsApp ಟ್ರಿಕ್ಸ್: ಗ್ರೂಪಿಗೆ ಸೇರಿಸದಂತೆ ತಡೆಯಿರಿ; ಫೇಕ್ ಸುದ್ದಿ ಗುರುತಿಸಿ

Reliance JioFiber: ತಡವಾಗಲಿದೆಯೇ ರಿಲಯನ್ಸ್ ಸೇವೆ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌