ಆ್ಯಪ್ನಗರ

Redmi K20, Redmi K20 Pro ಇಂದು ಬಿಡುಗಡೆ

ಶವೋಮಿ ಕಂಪನಿಯು ಒನ್‌ಪ್ಲಸ್‌ನ ಫ್ಲ್ಯಾಗ್‌ಶಿಪ್ ಫೋನ್ 7 ಪ್ರೋಗೆ ನೇರವಾಗಿ ಸ್ಫರ್ಧೆಯೊಡ್ಡಲು ಸ್ನ್ಯಾಪ್‌ಡ್ರ್ಯಾಗನ್ 855 ಪ್ರೊಸೆಸರ್ ಇರುವ ಅತ್ಯಾಧುನಿಕ ಫೋನ್ ಶವೋಮಿ ರೆಡ್‌ಮಿ ಕೆ20 ಪ್ರೋ ಹಾಗೂ ಸ್ನ್ಯಾಪ್‌ಡ್ರ್ಯಾಗನ್ 730 ಪ್ರೊಸೆಸರ್ ಇರುವ ರೆಡ್‌ಮಿ ಕೆ20 ಫೋನ್ ಅನ್ನು ಬುಧವಾರ ಹೊಸದಿಲ್ಲಿಯಲ್ಲಿ ಬಿಡುಗಡೆ ಮಾಡುತ್ತಿದೆ.

Vijaya Karnataka Web 17 Jul 2019, 4:37 am
ಹೊಸದಿಲ್ಲಿ: ಚೀನಾದ ಪ್ರಮುಖ ಫೋನ್ ತಯಾರಿಕಾ ಕಂಪನಿ ಶವೋಮಿ Redmi K20 ಹಾಗೂ Redmi K20 ಪ್ರೋ ಅತ್ಯಾಧುನಿಕ ಸ್ಮಾರ್ಟ್‌ಫೋನ್‌ಗಳನ್ನು ಬುಧವಾರ (ಜು.17ರಂದು) ಹೊಸದಿಲ್ಲಿಯಲ್ಲಿ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.
Vijaya Karnataka Web Redmi K20 Pro


ಈ ಫೋನ್‌ಗಳ ಬಿಡುಗಡೆಗೆ ಮುನ್ನವೇ ಆಸಕ್ತರು ರೆಡ್‌ಮಿ K20 ಹಾಗೂ ರೆಡ್‌ಮಿ K20 ಪ್ರೋ ಫೋನ್‌ಗಳನ್ನು ಖರೀದಿಸಲು ಸುಲಭವಾಗುವಂತೆ, ಶವೋಮಿ ಕಂಪನಿಯು ಆಲ್ಫಾ ಸೇಲ್ ವಿಧಾನವನ್ನು ಪರಿಚಯಿಸಿದೆ. ಆಲ್ಫಾ ಸೇಲ್ ಎಂಬುದು ಫ್ಲ್ಯಾಶ್‌ಸೇಲ್‌ಗಿಂತ ಭಿನ್ನವಾಗಿದ್ದು, ಆಸಕ್ತರು ಫ್ಲ್ಯಾಶ್‌ಸೇಲ್ ಸಂದರ್ಭದಲ್ಲಿ 'ಸ್ಟಾಕ್ ಮುಗಿದಿದೆ' ಎಂಬ ಸಂದೇಶ ಕಾಣಿಸಿಕೊಳ್ಳುವ ಮುನ್ನ, ಕ್ಷಿಪ್ರವಾಗಿ ಮೊಬೈಲ್ ಫೋನ್ ಪಡೆಯುವಂತಾಗಲು, 855 ರೂ. ಪಾವತಿಸಿ, ಫೋನ್ ಅನ್ನು ಮುಂಗಡ ಕಾಯ್ದಿರಿಸಬಹುದಾಗಿದೆ. ಎಂಐ ಡಾಟ್ ಕಾಂ ಹಾಗೂ ಫ್ಲಿಪ್‌ಕಾರ್ಟ್ ತಾಣಗಳಲ್ಲಿ ಈ ಫೋನ್‌ಗಳ ಆಲ್ಫಾ ಮಾರಾಟವು ಇಂದು ಕೊನೆಗೊಂಡಿದೆ.

ಆಲ್ಫಾ ಸೇಲ್ ಹೇಗೆ

ಟೋಕನ್ ಮೊತ್ತ ಪಾವತಿಸಿದ ಹೊರತಾಗಿಯೂ ಫೋನ್ ಲಭ್ಯವಾಗದಿದ್ದರೆ, ಆ ಮೊತ್ತವನ್ನು ಕೂಪನ್ ರೂಪದಲ್ಲಿ ವಾಪಸ್ ಪಡೆಯಬಹುದಾಗಿದೆ.

ರೆಡ್‌ಮಿ K20 ನಲ್ಲಿ ಸ್ನ್ಯಾಪ್‌ಡ್ರ್ಯಾಗನ್ 730 ಪ್ರೊಸೆಸರ್ ಇದ್ದರೆ, ರೆಡ್‌ಮಿ K20 ಪ್ರೋ ಆವೃತ್ತಿಯಲ್ಲಿ ಸ್ನ್ಯಾಪ್‌ಡ್ರ್ಯಾಗನ್ 855 ಅತ್ಯಾಧುನಿಕ ಪ್ರೊಸೆಸರ್ ಇರುತ್ತದೆ. ಸದ್ಯಕ್ಕೆ ಒನ್‌ಪ್ಲಸ್ 7 ಪ್ರೋ ಫೋನ್‌ಗಳಲ್ಲಿ ಸ್ನ್ಯಾಪ್‌ಡ್ರ್ಯಾಗನ್ 855 ಪ್ರೊಸೆಸರ್ ಇದ್ದು, ಈ ಪ್ರೊಸೆಸರ್ ಹೊಂದಿರುವ ಅತ್ಯಂತ ಅಗ್ಗದ ಫೋನ್ ರೆಡ್‌ಮಿ K20 ಪ್ರೋ ಆಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌