ಆ್ಯಪ್ನಗರ

Mi Note 10: 108 ಮೆಗಾಪಿಕ್ಸೆಲ್ ಕ್ಯಾಮರಾ ಸ್ಮಾರ್ಟ್‌ಫೋನ್ ಬಿಡುಗಡೆ

ಶವೋಮಿ ರೆಡ್ಮಿಯ ಹೊಸ ಎಂಐ ಫೋನ್ ಸರಣಿಯಲ್ಲಿ ನೋಟ್ 10 ಬಿಡುಗಡೆಯಾಗಿದೆ. ಇದರಲ್ಲಿ 108 ಮೆಗಾಪಿಕ್ಸೆಲ್ ಕ್ಯಾಮರಾ ಇದೆ ಎನ್ನವುದು ವಿಶೇಷ!

TNN & Agencies 7 Nov 2019, 3:01 pm
ದೇಶದಲ್ಲಿ ಅತ್ಯಧಿಕ ಸಂಖ್ಯೆಯ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುವ ಶವೋಮಿ, ಸ್ಪೇನ್‌ನಲ್ಲಿ ಎಂಐ ನೋಟ್ ಸರಣಿಯಲ್ಲಿ ಹೊಸ ಫೋನ್ ಬಿಡುಗಡೆ ಮಾಡಿದೆ.
Vijaya Karnataka Web Mi Note 10
ಶವೋಮಿ ಎಂಐ ನೋಟ್ 10


ಎಂಐ ನೋಟ್ 10 ಮತ್ತು ಎಂಐ ನೋಟ್ 10 ಪ್ರೊ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಹಿಂಬದಿಯಲ್ಲಿ 108 ಮೆಗಾಪಿಕ್ಸೆಲ್‌ ಕ್ಯಾಮರಾ ಹೊಂದಿದೆ. ಎಂಐ ನೋಟ್ 10 ಫೋನ್‌ನಲ್ಲಿ ಐದು ಕ್ಯಾಮರಾ ವಿನ್ಯಾಸವಿದ್ದು, ವಾಟರ್‌ಡ್ರಾಪ್ ವಿನ್ಯಾಸದ ನಾಚ್, OLED ಡಿಸ್‌ಪ್ಲೇ, ಕರ್ವ್‌ ಎಡ್ಜಸ್, ಇನ್‌ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಇದರ ವಿಶೇಷವಾಗಿದೆ.

ಎಂಐ ನೋಟ್ 10 ತಾಂತ್ರಿಕ ವಿಶೇಷತೆ
6 ಜಿಬಿ RAM, 128 GB ಸ್ಟೋರೇಜ್
ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 730G ಪ್ರೊಸೆಸರ್
5,260mAh ಬ್ಯಾಟರಿ, 30W ಫಾಸ್ಟ್‌ ಚಾರ್ಜರ್

ಕ್ಯಾಮರಾ ವಿಶೇಷತೆ
108 ಮೆಗಾಪಿಕ್ಸೆಲ್ ಪ್ರಮುಖ ಕ್ಯಾಮರಾ
20 ಮೆಗಾಪಿಕ್ಸೆಲ್ ವೈಡ್ ಆಂಗಲ್ ಕ್ಯಾಮರಾ
12 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್
5 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್
2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮರಾ
32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾ

3.5mm ಆಡಿಯೋ ಜಾಕ್ ಹಾಗೂ ಟೈಪ್-C ಮಾದರಿಯ ಚಾರ್ಜಿಂಗ್ ಪೋರ್ಟ್ ಇದರಲ್ಲಿದೆ.

Smartphone Addiction: ಅತಿಯಾದ ಅವಲಂಬನೆ ತಪ್ಪಿಸಲು ಐಡಿಯಾ!

ಬೆಲೆ ವಿವರ
ಸ್ಪೇನ್ ಮತ್ತು ಇಟಲಿಯಲ್ಲಿ ಎಂಐ ನೋಟ್ 10 ಫೋನ್ ನವೆಂಬರ್‌ 15ರಿಂದ ಲಭ್ಯವಾಗಲಿದ್ದು, 549 ಯೂರೋ ದರ ಹೊಂದಿದೆ. ಅಂದರೆ ದೇಶದಲ್ಲಿ ಅಂದಾಜು 43,200 ರೂ. ದರ ಇರಲಿದೆ.

Virat Kohli: ಯಶಸ್ಸಿನ ಹಿಂದೆ ಸ್ಮಾರ್ಟ್ ವೆಸ್ಟ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌